Suicide : ಗಂಡ ಹೆಂಡತಿ ಜಗಳ ಉಂಡು ಮಲಗೋತನಕ ಅಂತಾರೆ. ಆದ್ರೆ ಕೆಲವು ಸಾರಿ ಅವರ ಗಲಾಟೆ ವಿಕೋಪಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಕೂಡ ಜಾಸ್ತಿ ಆಗುತ್ತಿವೆ.

Suicide : ಒಂದು ಸಣ್ಣ ಕೌಟುಂಬಿಕ ಕಲಕ್ಕೆ ಕಾಲೇಜು ಉಪನ್ಯಾಸಕಿಯೊಬ್ಬರು ಆತ್ಮಹತ್ಯೆ (Suicide) ಮಾಡಿಕೊಂಡಿದ್ದು, ತಮ್ಮ ಮಗಳ ಸಾವಿಗೆ ಅಳಿಯನೇ ಕಾರಣ ಎಂದು ಹೆತ್ತವರು ಗಂಭೀರ ಆರೋಪ ಮಾಡುತ್ತಿದ್ದಾರೆ.
ವಿವೇಕಾನಂದ ನಗರದಲ್ಲಿ ಘಟನೆ
ಇನ್ನು ಈ ದಾರುಣ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಸ್ವಾಮಿ ವಿವೇಕಾನಂದ ನಗರದಲ್ಲಿ ಘಟನೆ ನಡೆದಿದ್ದು, ಅಕ್ಕಪಕ್ಕದವರು, ಪೋಷಕರ ಕಂಗಾಲಾಗಿದ್ದಾರೆ. ಇನ್ನು ಮೃತ ಉಪನ್ಯಾಸಕಿಯನ್ನು 35 ವರ್ಷದ ಸುಜಾತಾ.ಬಿ. ಎನ್ನಲಾಗಿದೆ. ಉಪನ್ಯಾಸಕಿ ಸುಜಾತಾ ವಿವೇಕನಂದ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.
ಸುಜಾತಾ ಅವರು ಮುಂಡರಗಿ ತೋಂಟದಾರ್ಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಭೌತಶಾಸ್ತ್ರ ವಿಷಯ ಬೋಧಿಸುತ್ತಿದ್ದರು. ಕೇವಲ ಮೂರು ತಿಂಗಳ ಹಿಂದಷ್ಟೇ ಅವರು ಎರಡನೇ ವಿವಾಹವಾಗಿದ್ದರು ಎನ್ನಲಾಗಿದೆ.
ಇದನ್ನು ಓದಿ : ಟೀಮ್ ಇಂಡಿಯಾಗೆ ಭರ್ಜರಿ ಗಿಫ್ಟ್ ಘೋಷಿಸಿದ ಟಾಟಾ
ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ
ಕೌಟುಂಬಿಕ ಕಾರಣಕ್ಕೆ ನಿನ್ನೆ ರಾತ್ರಿ ನಿನ್ನೆ ರಾತ್ರಿ ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕೌಟುಂಬಿಕ ಕಲಹವೇ ಈ ಅಘಾತಕಾರಿ ನಿರ್ಧಾರದ ಹಿನ್ನೆಲೆ ಎಂದು ತಿಳಿದುಬಂದಿದೆ.
ಸುಜಾತಾ ಸಾವಿಗೆ ಪತಿಯೇ ಕಾರಣ ಎಂದು ದೂರು
ಇನ್ನು ಈ ಆತ್ಮಹತ್ಯೆಯ ಸಂಬಂಧ ಅಕ್ಕಪಕ್ಕದವರು ನ1 ರಂದು ಸುಜಾತಾ ಅವರ ಪತಿ ಮನೆಗೆ ಬಂದು ಹೋಗಿದ್ದಾಗ ದಾಂಪತ್ಯ ಜಗಳ ನಡೆದಿತ್ತು ಎಂದಿದ್ದಾರೆ. ಇತ್ತ ಮೃತಳ ಕುಟುಂಬಸ್ಥರು ಸುಜಾತಾ ಅವರ ಸಾವಿಗೆ ಪತಿಯೇ ಕಾರಣ ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ.
ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ಘಟನಾ ಸ್ಥಳಕ್ಕೆ ನರಗುಂದ ವಿಭಾಗದ ಡಿವೈಎಸ್ಪಿ ಪ್ರಭುಗೌಡ ಕಿರೇದಹಳ್ಳಿ ಭೇಟಿ ನೀಡಿದ್ದು, ಪ್ರಕರಣದ ಸಂಬಂಧ ಮುಂದಿನ ತನಿಖೆ ಮು೦ದುವರಿಸಿದ್ದಾರೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ನೋಡಿ : ಶಿರಾದಲ್ಲಿ ಸಿದ್ಧವಾಯ್ತು ಕುರಿ, ಮೇಕೆ ವಧಾಗಾರ – ನವೆಂಬರ್ ಅಂತ್ಯಕ್ಕೆ ಸಿಎಂರಿಂದ ಉದ್ಘಾಟನೆ




