Murder : ತಮ್ಮನಿಗೆ ನಿಶ್ಚಯವಾದ ಹುಡುಗಿ ಮೇಲೆ ದುರಾಸೆ, ಕಲ್ಲೆತ್ತಿ ಹಾಕಿ ಕೊಂದ ಅಣ್ಣ!

ಹೆಣ್ಣಿನ ಮೋಹ ಎಂಥವರನ್ನಾದ್ರೂ ರಾಕ್ಷಸರನ್ನಾಗಿ ಮಾಡುತ್ತೆ ಅನ್ನೋದು ಸುಳ್ಳಲ್ಲ. ಹೆತ್ತ ತಂದೆಯನ್ನೂ ಬಿಡಲ್ಲ, ಒಡಹುಟ್ಟಿದ ಅಣ್ತಮಂದಿರನ್ನೂ ಕೇಳಲ್ಲ. ಮೃಗಗಳಂತೆ ನೆತ್ತರೋಕುಳಿ ಕೇಕೆ ಹಾಕ್ಬಿಡ್ತಾರೆ. ಗದಗದಲ್ಲೂ ಇಂಥದ್ದೇ ದುರಂತ ನಡೆದೋಗಿದೆ.
ಯುವತಿ ವಿಚಾರಕ್ಕೆ ಕೊಲೆ
ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ಮದುವೆ ವಿಚಾರವೇ ಭೀಕರ ಕೊಲೆಗೆ ಕಾರಣವಾಗಿರುವ ಘಟನೆ ಬೆಳಕಿಗೆ ಬಂದಿದೆ. ತಮ್ಮನಿಗೆ ನಿಶ್ಚಯವಾಗಿದ್ದ ಯುವತಿಯ ವಿಚಾರಕ್ಕೆ ಅಣ್ಣನಲ್ಲೇ ಅಸಹನೆ ಹುಟ್ಟಿದ್ದು, ಅದೇ ಕೊನೆಗೆ ತಮ್ಮನ ಜೀವ ಕಸಿದುಕೊಂಡಿದೆ.
READ THIS : Ugadi 2026|ಯುಗಾದಿ ಹಬ್ಬದಂದು ಬೇವು – ಬೆಲ್ಲವನ್ನೇಕೆ ತಿನ್ನಬೇಕು..?

ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ Murder
ಮೃತ ಯುವಕನನ್ನು ಫಕ್ಕೀರಪ್ಪ ಎಂದು ಗುರುತಿಸಲಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಕ್ಕಮೊಲಂಗಿ ಗ್ರಾಮದ ನಿವಾಸಿಯಾಗಿದ್ದ ಫಕ್ಕೀರಪ್ಪ ತನ್ನ ಅಣ್ಣ ಅಶೋಕ್ ಜೊತೆ ಹಿರೇಕೊಪ್ಪ ಗ್ರಾಮಕ್ಕೆ ಕುರಿ ಮೇಯಿಸಲು ಬಂದಿದ್ದನು.
ಇವರಿಬ್ಬರು ಕುರಿದೊಡ್ಡಿಯಲ್ಲಿ ರಾತ್ರಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಈ Murder ನಡೆದಿದೆ. ತಮ್ಮನಿಗೆ ನಿಶ್ಚಯವಾಗಿದ್ದ ಯುವತಿಯನ್ನು ತಾನೇ ಮದುವೆಯಾಗಬೇಕು ಎಂದು ಅಶೋಕ್ ಬಯಸಿದ್ದನು. ಇದೇ ವಿಚಾರದಿಂದ ಸಹೋದರರ ನಡುವೆ ಮನಸ್ತಾಪ ಉಂಟಾಗಿದ್ದು, ಕೋಪದ ಹೊತ್ತಿನಲ್ಲಿ ಅಶೋಕ್ ತನ್ನ ತಮ್ಮನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಈ ಘಟನೆ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ನಡೆದ ಈ ದುರ್ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
MUST WATCH : MICRO FINANCE ವಿರುದ್ಧ ರೈತರ ಆಕ್ರೋಶ ಶಿರಾದಲ್ಲಿ ರೈತರಿಂದ ಭಾರೀ ಪ್ರತಿಭಟನೆ |




