Ugadi 2026 : ಯುಗಾದಿ ವಿಶೇಷ – ಬೇವು ಬೆಲ್ಲವನ್ನು ಸೇವಿಸುವುದು ಯಾಕೆ?

ಯುಗಾದಿ ವರ್ಷದ ಮೊದಲ ಹಬ್ಬವಾಗಿದೆ. ಇಡೀ ವರ್ಷಕ್ಕೆ ಬೇಕಾದ ಯೋಜನೆಯನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ನಡೆಯುವ ಶುಭಸಂಕಲ್ಪವನ್ನು ಮಾಡಿಕೊಳ್ಳುವ ದಿನವೇ ಯುಗಾದಿ. ಹಿಂದಿನ ವರ್ಷದ ಸಾಧನೆಯನ್ನು ಪರಿಶೀಲಿಸಿ, ಈ ವರ್ಷಕ್ಕೆ ಬೇಕಾದ ಸಂವಿಧಾನನ್ನು ವಿಧಾಯ ಪೂರ್ವಕವಾಗಿ ಹಾಕಿಕೊಳ್ಳುವ ದಿನ.
ವೇದಗಳ ಮಂತ್ರದಲ್ಲಿ ವರ್ಷವನ್ನು ರಥಕ್ಕೂ, ಉತ್ತರಾಯಣ, ದಕ್ಷಿಣಾಯಣಗಳನ್ನು ಅದರ ಚಕ್ರಗಳಿಗೂ ಹೋಲಿಸಲಾಗಿದೆ. ಆದ್ದರಿಂದ ವರ್ಷವನ್ನು ಯುಗ ಎಂದೂ ಅದರ ಮೊದಲನೆಯ ದಿನವನ್ನು ಯುಗಾದಿ ಎಂದೂ ಕರೆಯಲಾಗುತ್ತದೆ.

READ THIS : Prajwal Revanna ಪೆನ್ಡ್ರೈವ್ ವಿಡಿಯೋ ಪ್ರಕರಣ – 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ
ಬೇವು ಬೆಲ್ಲ ಸೇವಿಸುವುದು ಯಾಕೆ?
ಈ ಹಬ್ಬದ ವಿಶೇಷ ಆಚರಣೆಗಳಲ್ಲಿ ಬೆಲ್ಲ ಮತ್ತು ಕಹಿ ಬೇವು ಮಿಶ್ರಣ ಸೇವಿಸುವುದು ಪ್ರಮುಖವಾಗಿದೆ. ಬೆಲ್ಲವು ಜೀವನದ ಸಂತೋಷ, ಯಶಸ್ಸು ಮತ್ತು ಸುಖವನ್ನು ಪ್ರತಿನಿಧಿಸುತ್ತಿದ್ದರೆ, ಕಹಿ ಬೇವು ಕಷ್ಟ, ನೋವು ಮತ್ತು ಸವಾಲುಗಳ ಸಂಕೇತ. ಈ ಮಿಶ್ರಣ ಜೀವನದಲ್ಲಿ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಕಲಿಕೆಯನ್ನು ಸಾರುತ್ತದೆ.
Ugadi 2026 : ಬೇವು – ಬೆಲ್ಲದ ಮಹತ್ವ
ಆಯುರ್ವೇದ ಪ್ರಕಾರ, ಬೇವು-ಬೆಲ್ಲ ಸೇವಿಸುವುದು ದೇಹ, ಆಯುಷ್ಯ ಮತ್ತು ಸಂಪತ್ತಿಗಾಗಿ ಉತ್ತಮ. ಹಬ್ಬದ ಸಂದರ್ಭದಲ್ಲಿ ಹೇಳುವ ಶ್ಲೋಕ “ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟವಿನಾಶಾಯ ನಿಂಬಕಂದಳ ಭಕ್ಷಣಮ್” ನೂರು ವರ್ಷಗಳ ಆಯುಷ್ಯ, ವಜ್ರದಂತಹ ದೇಹ, ಸಂಪತ್ತು ಮತ್ತು ಎಲ್ಲಾ ಅರಿಷ್ಟಗಳ ನಿವಾರಣೆಯನ್ನು ಸೂಚಿಸುತ್ತದೆ.

ಹೀಗಾಗಿ, ಯುಗಾದಿ ಕೇವಲ ಹೊಸ ವರ್ಷದ ಹಬ್ಬವಲ್ಲ, ಜೀವನದ ಸತ್ವವನ್ನು ಅರಿಯುವ, ಸಂತೋಷ-ದುಃಖವನ್ನು ಸಮಾನ ಮನಸ್ಸಿನಿಂದ ಸ್ವೀಕರಿಸುವ ದಿನವೂ ಆಗಿದೆ.
MUST WATCH : SSLC ಪರೀಕ್ಷಾ ಕೇಂದ್ರಕ್ಕೆ ಡಿಸಿ ವಿಸಿಟ್ ಎಕ್ಸಾಂ ಬಗ್ಗೆ ಡಿಸಿ ಶುಭ ಕಲ್ಯಾಣ್ ಏನಂದ್ರು




