Tata Motors Announces Gift For Team India : ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ದೇಶದ ಪ್ರಮುಖ ಆಟೋಮೊಬೈಲ್ ಕಂಪೆನಿ ಟಾಟಾ ಮೋಟರ್ಸ್ ಭರ್ಜರಿ ಉಡುಗೊರೆ ಘೋಷಿಸಿದೆ.

ನವೆಂಬರ್ 2 ರಂದು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು 52 ರನ್ಗಳ ಜಯ ಸಾಧಿಸಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ.
ಟಾಟಾ ಮೋಟಾರ್ಸ್ನ ಭರ್ಜರಿ ಉಡುಗೊರೆ
ಭಾರತದ ಈ ಐತಿಹಾಸಿಕ ಸಾಧನೆಗೆ ಪ್ರತಿಕ್ರಿಯೆ ನೀಡುತ್ತಾ, ದೇಶದ ಪ್ರಮುಖ ಆಟೋಮೊಬೈಲ್ ಕಂಪನಿ ಟಾಟಾ ಮೋಟಾರ್ಸ್ ಮಹಿಳಾ ತಂಡಕ್ಕೆ ಹೊಸ ಟಾಟಾ ಸಿಯೆರಾ SUV ಕಾರು ಉಡುಗೊರೆ ನೀಡುವುದಾಗಿ ಘೋಷಿಸಿದೆ. ಅಲ್ಲದೆ, ತಂಡದ ಕೋಚ್ ಮತ್ತು ಸಹಾಯಕ ಸಿಬ್ಬಂದಿಗೂ ಈ ಉಡುಗೊರೆ ನೀಡಲಾಗಲಿದೆ.
ಇದನ್ನು ಓದಿ : ಕರ್ತವ್ಯ ನಿರತ KSRTC ಚಾಲಕ ಹೃದಯಾಘಾತದಿಂದ ಸಾವು
ಕಂಪನಿಯ ಅಧಿಕೃತ ಹೇಳಿಕೆ
“ಭಾರತೀಯ ಮಹಿಳಾ ತಂಡವು ತನ್ನ ದೃಢನಿಶ್ಚಯ ಮತ್ತು ಆತ್ಮವಿಶ್ವಾಸದಿಂದ ದೇಶಕ್ಕೆ ಹೆಮ್ಮೆಯ ಕ್ಷಣವನ್ನು ನೀಡಿದೆ. ಅವರ ಸಾಧನೆಗಳನ್ನು ಗೌರವಿಸಲು ನಾವು ಸಂತೋಷಪಡುತ್ತೇವೆ. ಟಾಟಾ ಸಿಯೆರಾ ಮತ್ತು ತಂಡವು ಎರಡೂ ಸ್ಫೂರ್ತಿಯ ಸಂಕೇತಗಳು. ಹೀಗಾಗಿ ಹೊಸ ವಿನ್ಯಾಸದ ಟಾಟಾ ಸಿಯೆರಾ ಕಾರನ್ನು ತಂಡಕ್ಕೆ ನೀಡುತ್ತಿದ್ದೇವೆ” ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ನ ಎಂಡಿ ಮತ್ತು ಸಿಇಒ ಶೈಲೇಶ್ ಚಂದ್ರ ತಿಳಿಸಿದ್ದಾರೆ
ನವೆಂಬರ್ 25 ರಂದು ಹೊಸ ಮಾಡೆಲ್ ಬಿಡುಗಡೆ
90ರ ದಶಕದಲ್ಲಿ ರಸ್ತೆ ಮೇಲೆ ಕಾಣಿಸಿಕೊಂಡ ಟಾಟಾ ಸಿಯೆರಾ ಕಾರಿಗೆ ಈಗ ಆಧುನಿಕ ವಿನ್ಯಾಸದ ಪರಿಷ್ಕರಣೆ ನೀಡಲಾಗಿದೆ. ಟಾಟಾ ಕಂಪನಿ ನವೆಂಬರ್ 25 ರಂದು ಈ ಹೊಸ ಮಾಡೆಲ್ ಅನ್ನು ಬಿಡುಗಡೆ ಮಾಡಲಿದೆ. ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಟಗಾರ್ತಿಗಳಿಗೆ ಕಾರು ಹಸ್ತಾಂತರವಾಗುವ ಸಾಧ್ಯತೆ ಇದೆ.
ಇದನ್ನು ನೋಡಿ : ಗ್ಯಾರಂಟಿ ಹೆಸರಲ್ಲಿ ಜನರಿಗೆ ವಂಚನೆ – ಸಿಎಂ ವಿರುದ್ಧ ಬಿಜೆಪಿ ನಾಯಕರ ಕಿಡಿ




