BBK : ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಆರನೇ ವಾರದಲ್ಲಿ ಯಾವುದೇ ಟಾಸ್ಕ್ಗಳು ಇರುವುದಿಲ್ಲ ಅಂತ ಸುದೀಪ್ ಅವರು ಈ ಮೊದಲೇ ಅನೌನ್ಸ್ ಮಾಡಿದ್ದರು.

BBK : ‘ಬಿಗ್ ಬಾಸ್ ಕನ್ನಡ ಸೀಸನ್ 12’ ರ ಆರನೇ ವಾರದಲ್ಲಿ ಯಾವುದೇ ಟಾಸ್ಕ್ ಇರೋದಿಲ್ಲ ಎಂದು ಸುದೀಪ್ ಅವರು ಈ ಮೊದಲೇ ಅನೌನ್ಸ್ ಮಾಡಿದ್ದರು. ಆದರೆ ಬಿಗ್ ಬಾಸ್ ಮನೆಯಲ್ಲಿ ಭಾವನಾತ್ಮಕ ಕ್ಷಣಗಳು ಮುಂದುವರಿದಿವೆ. ಬಿಗ್ ಬಾಸ್ ಕೊಟ್ಟ ಟಾಸ್ಕ್ ಏನು?
ಇಂದಿನ ಸಂಚಿಕೆಯಲ್ಲಿ ಮನೆಯವರು ತಮ್ಮ ಕುಟುಂಬದಿಂದ ಬಂದಿರುವ ಪತ್ರಗಳನ್ನು ಓದೋ ಸಮಯ ಬಂದಿದೆ. ಆದರೆ, ಬಿಗ್ ಬಾಸ್ ಈ ಸಲ ಒಂದು ದೊಡ್ಡ ಟ್ವಿಸ್ಟ್ ನೀಡಿದ್ದಾರೆ. ಮನೆಯಲ್ಲಿರುವ ಎಲ್ಲರಿಗೂ ಒಂದು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಅವಕಾಶ ನೀಡಲಾಗಿದೆ — ನಿಮ್ಮ ಕುಟುಂಬದವರ ಸಹಾಯದಿಂದ ನೀವು ಉಳಿಯಬೇಕಾ, ಅಥವಾ ಅವರ ಪತ್ರವನ್ನು ಬಲಿದಾನ ಮಾಡಬೇಕಾ ಎಂಬುದು.
ಇದನ್ನು ಓದಿ : ರೈಸಿಂಗ್ ಸ್ಟಾರ್ ಏಷ್ಯಾಕಪ್ಗೆ ಭಾರತ ತಂಡ ಪ್ರಕಟ
ಬಿಗ್ ಬಾಸ್ ನಿಯಮ ಪ್ರಕಾರ, ಸ್ಪರ್ಧಿಗಳು ತಮ್ಮ ಕುಟುಂಬದವರ ಪತ್ರವನ್ನು ಬಾಟಲ್ ಸಹಿತ ಸ್ವಿಮ್ಮಿಂಗ್ ಪೂಲ್ಗೆ ಹಾಕಬೇಕು. ಪತ್ರ ಪಡೆದವರು ಇಮ್ಯುನಿಟಿ ಪಡೆಯುತ್ತಾರೆ, ಆದರೆ ಪತ್ರ ಕಳೆದುಕೊಂಡವರು ನಾಮಿನೇಟ್ ಆಗುತ್ತಾರೆ.
ಧನುಷ್ ಕಣ್ಣೀರಿಟ್ಟಿದ್ದೇಕೆ?
ಈ ಸನ್ನಿವೇಶದಲ್ಲಿ ಕ್ಯಾಪ್ಟನ್ ಧನುಷ್ ಕೂಡ ಬಾಟಲ್ನ್ನು ಪೂಲ್ಗೆ ಹಾಕಿದ್ದಾರೆ. ಅದಾದ ಬಳಿಕ ಅವರು ಕಣ್ಣೀರಿಟ್ಟಿದ್ದಾರೆ. ಆದರೆ ಅವರು ಯಾರ ಪತ್ರನ್ನು ಪೂಲ್ಗೆ ಹಾಕಿದ್ದಾರೆ ಎಂಬುದು ಇಂದಿನ ಎಪಿಸೋಡ್ನಲ್ಲಿ ಬಹಿರಂಗವಾಗಲಿದೆ.
ಮನೆಯಲ್ಲಿರುವ ಸ್ಪರ್ಧಿಗಳು ಭಾವನಾತ್ಮಕವಾಗಿ ಸ್ಟ್ರಾಂಗ್ ಆಗಿದ್ದರೂ, ಕುಟುಂಬದ ನೆನಪು ಎಲ್ಲರನ್ನೂ ತೊಳಲಾಡಿಸುತ್ತಿದೆ. ಈಗ ಧನುಷ್ ಅವರ ನಿರ್ಧಾರ ಸರಿಯಾದ ದಾರಿಯಲ್ಲಿತ್ತಾ ಅಥವಾ ತಪ್ಪಿತ್ತಾ ಎಂಬ ಪ್ರಶ್ನೆಗೆ ಉತ್ತರ ಇಂದಿನ ಸಂಚಿಕೆಯಲ್ಲಿ ಸಿಗಲಿದೆ.
ಇದನ್ನು ನೋಡಿ : ಬಿಗ್ ಬಾಸ್ ಕೊಟ್ಟ ಟಾಸ್ಕ್ಗೆ ಕಣ್ಣೀರಿಟ್ಟ ಧನುಷ್! ಅಸಲಿಗೆ ಆಗಿದ್ದೇನು?




