Rising Stars Asia Cup 2025 : ರೈಸಿಂಗ್ ಸ್ಟಾರ್ ಏಷ್ಯಾಕಪ್ ಟೂರ್ನಿಯು ನವೆಂಬರ್ 14 ರಿಂದ ಶುರುವಾಗಲಿದೆ.

ಖತಾರ್ನಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ20 ಟೂರ್ನಿಗಾಗಿ ಭಾರತ ಎ ತಂಡವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ, ಮತ್ತು ನಮನ ಧೀರ್ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ.
ಯುವ ಪ್ರತಿಭೆಗಳಿಗೆ ಅವಕಾಶ
ಈ ತಂಡದಲ್ಲಿ ಹಲವು ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.
- ವೈಭವ್ ಸೂರ್ಯವಂಶಿ (ರಾಜಸ್ಥಾನ್ ರಾಯಲ್ಸ್)
- ಪ್ರಿಯಾಂಶ್ ಆರ್ಯ (ಪಂಜಾಬ್ ಕಿಂಗ್ಸ್)
ಈ ಇಬ್ಬರು ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಇದೀಗ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರಮುಖ ಬ್ಯಾಟರ್ಗಳು ಮತ್ತು ಆಲ್ರೌಂಡರ್ಗಳು
- ನೆಹಾಲ್ ವಧೇರಾ, ಸೂರ್ಯಾಂಶ್ ಶೆಡ್ಗೆ, ರಮಣದೀಪ್ ಸಿಂಗ್, ಅಶುತೋಷ್ ಶರ್ಮಾ
- ಹರ್ಷ್ ದುಬೆ ಯುವ ಆಲ್ರೌಂಡರ್ ಆಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ
ಇದನ್ನು ಓದಿ : ರಗಡ್ ಲುಕ್ನಲ್ಲಿ ಕಾಣಿಸಿಕೊಂಡ ನಟಿ ರಮ್ಯಾ ಕೃಷ್ಣ
ಬೌಲಿಂಗ್ ವಿಭಾಗದಲ್ಲಿ ಕನ್ನಡಿಗ ವೈಶಾಕ್ ಸೇರಿ ಹೊಸಬರು
ಬೌಲಿಂಗ್ ವಿಭಾಗದಲ್ಲಿ ಕನ್ನಡದ ವಿಜಯಕುಮಾರ್ ವೈಶಾಕ್ ಪ್ರಮುಖ ಸ್ಥಾನ ಪಡೆದಿದ್ದಾರೆ. ಅವರ ಜೊತೆಗೆ ಯಶ್ ಠಾಕೂರ್, ಸುಯಶ್ ಶರ್ಮಾ, ಗುರ್ಜಪ್ನೀತ್ ಸಿಂಗ್, ಯಧುವೀರ್ ಸಿಂಗ್ ಚರಕ್ ಇದ್ದಾರೆ.
ಭಾರತ ಎ ತಂಡದ ಸಂಪೂರ್ಣ ಪಟ್ಟಿ
ಭಾರತ ಎ ತಂಡ ಈ ಕೆಳಗಿನಂತಿದೆ.
ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ನೆಹಾಲ್ ವಧೇರಾ, ನಮನ್ ಧೀರ್ (ಉಪನಾಯಕ), ಸೂರ್ಯಾಂಶ್ ಶೆಡ್ಗೆ, ಜಿತೇಶ್ ಶರ್ಮಾ (ನಾಯಕ), ರಮಣದೀಪ್ ಸಿಂಗ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಹರ್ಷ್ ದುಬೆ, ಅಶುತೋಷ್ ಶರ್ಮಾ, ಯಶ್ ಠಾಕೂರ್, ಗುರ್ಜಪ್ನೀತ್ ಸಿಂಗ್, ಸುಯಶ್ ಶರ್ಮಾ, ವಿಜಯಕುಮಾರ್ ವೈಶಾಕ್, ಯಧುವೀರ್ ಸಿಂಗ್ ಚರಕ್.
ಮೀಸಲು ಆಟಗಾರರು
ಶೇಖ್ ರಶೀದ್, ಗುರ್ನೂರ್ ಸಿಂಗ್ ಬ್ರಾರ್, ಕುಮಾರ್ ಕುಶಾಗ್ರಾ, ತನುಷ್ ಕೋಟ್ಯಾನ್, ಸಮೀರ್ ರಿಝ್ವಿ.
ಖತಾರ್ನಲ್ಲಿ ಕ್ರಿಕೆಟ್ ಹುರುಪು ಹೆಚ್ಚಿಸುವ ಟೂರ್ನಿ
ಈ ಏಷ್ಯಾಕಪ್ ಟಿ20 ಟೂರ್ನಿ ಖತಾರ್ನಲ್ಲಿ ನಡೆಯಲಿದ್ದು, ಯುವ ಕ್ರಿಕೆಟರ್ಗಳಿಗೆ ಅಂತರರಾಷ್ಟ್ರೀಯ ಮಟ್ಟದ ಅನುಭವ ನೀಡುವ ಮಹತ್ವದ ವೇದಿಕೆಯಾಗಿದೆ. ಇನ್ನು ಭಾರತ ಎ ತಂಡವು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ಇದನ್ನು ನೋಡಿ : ರೈಸಿಂಗ್ ಸ್ಟಾರ್ ಏಷ್ಯಾಕಪ್ಗೆ ಭಾರತ ತಂಡ ಪ್ರಕಟ: ಜಿತೇಶ್ ಶರ್ಮಾಗೆ ನಾಯಕತ್ವ




