Madhugiri : ನಕಲಿ ಮದ್ಯ ಸೇವಿಸಿದ ಪರಿಣಾಮ 15 ಮಂದಿ ಅಸ್ವಸ್ಥಗೊಂಡ ಘಟನೆ ತುಮಕೂರು ಜಿಲ್ಲೆ ಗಡಿಭಾಗದ ಚರ್ಲೋಪಲ್ಲಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ತುಮಕೂರು ಜಿಲ್ಲೆ ಗಡಿಭಾಗದ ಚರ್ಲೋಪಲ್ಲಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ನಕಲಿ ಮದ್ಯ ಸೇವನೆಯಿಂದ 15 ಮಂದಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ.
15 ಮಂದಿ ಅಸ್ವಸ್ಥ
ತುಮಕೂರು ಮಧುಗಿರಿಯ ತೆರಿಯೂರು-ಚಿಕ್ಕದಾಳವಟ್ಟ ಗ್ರಾಮದ 10 ಮಂದಿ ಹಾಗೂ ಆಂಧ್ರ ಪ್ರದೇಶದ ಚೌಲೂರು ಗ್ರಾಮದ ಐವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನು ಓದಿ : ರೈತರಿಗೆ ಗುಡ್ ನ್ಯೂಸ್ – ಪ್ರಧಾನಿ ಮೋದಿ ಇನ್ಮುಂದೆ ವರ್ಷಕ್ಕೆ 9000 ರೂ. ಘೋಷಣೆ
ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು
ಅಸ್ವಸ್ಥರಾಗಿರುವ ನಾಗರಾಜು ಮತ್ತು ನಿಂಗಕ್ಕ ಎಂಬವರನ್ನು ಹಿಂದೂಪುರದ ಆಸ್ಪತ್ರೆಗೆ, ಮಾರಪ್ಪ, ದಾಸಪ್ಪ, ಚಿಕ್ಕನರಸಿಂಹಯ್ಯ ಹಾಗೂ ಟಿ. ನಾಗರಾಜು ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನುಳಿದವರು ಪ್ರಾಥಮಿಕ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಪೋಲೀಸರಿಂದ ಪರಿಶೀಲನೆ
ಇನ್ನು ಘಟನೆ ನಡೆದ ಸ್ಥಳವಾದ ಚರ್ಲಾಪಳ್ಳಿ ಮುದ್ದೇನಹಳ್ಳಿ ಗೇಟ್ ಬಳಿ ಕೊಡಿಗೇನಹಳ್ಳಿ ಪೊಲೀಸರು ಹಾಗೂ ಆಂಧ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಡೆದ ಈ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನು ನೋಡಿ : ಕಲಬೆರಕೆ ಸೇಂದಿ ಸೇವಿಸಿ ಕರ್ನಾಟಕ, ಆಂಧ್ರ ಪ್ರದೇಶದ 15 ಮಂದಿ ಅಸ್ವಸ್ಥ




