PM Kisan Yojana 2025 : ಕೇಂದ್ರ ಸರ್ಕಾರವು ನೀಡುವ 6000 ರೂ. ಕಿಸಾನ್ ನಿಧಿ ಯೋಜನೆಯ ಹಣಕ್ಕೆ ಬಿಹಾರ ಸರ್ಕಾರ ಹೆಚ್ಚುವರಿಯಾಗಿ 3000 ರೂಪಾಯಿಗಳನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

PM Kisan Yojana 2025 : ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದ ರೈತರಿಗೆ ಗುಡ್ನ್ಯೂಸ್ ನೀಡಿದ್ದಾರೆ. ಕೇಂದ್ರ ಸರ್ಕಾರದಿಂದ ದೊರೆಯುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ₹6,000 ಸಹಾಯಕ್ಕೆ, ಬಿಹಾರ ಸರ್ಕಾರವು ಹೆಚ್ಚುವರಿಯಾಗಿ ₹3,000 ನೀಡಲಿದೆ ಎಂದು ಅವರು ಘೋಷಿಸಿದರು.
ರೈತರಿಗೆ ಒಟ್ಟು ₹9,000 ವಾರ್ಷಿಕ ಸಹಾಯ
ಈ ಹೊಸ ಕ್ರಮದಿಂದ ಬಿಹಾರದ ಸಣ್ಣ ಮತ್ತು ಮಧ್ಯಮ ರೈತರಿಗೆ ವಾರ್ಷಿಕವಾಗಿ ಒಟ್ಟು ₹9,000 ರೂ. ಹಣ ದೊರೆಯಲಿದೆ. ಮೋದಿ ಹೇಳಿದರು, “ನಮ್ಮ ಎನ್ಡಿಎ ಸರ್ಕಾರದ ನೀತಿಗಳ ಪರಿಣಾಮವಾಗಿ ಬಿಹಾರದ ಕೃಷಿ ಕ್ಷೇತ್ರ ಬಲಗೊಂಡಿದೆ. ಹಿಂದೆ ಬಿಹಾರವು ಇತರ ರಾಜ್ಯಗಳಿಂದ ಮೀನುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು, ಆದರೆ ಈಗ ಬಿಹಾರವೇ ಇತರ ರಾಜ್ಯಗಳಿಗೆ ಮೀನುಗಳನ್ನು ಮಾರಾಟ ಮಾಡುತ್ತಿದೆ.”
ಇದನ್ನು ಓದಿ : ಭಾರತದ ಸಿಂಹಿಣಿಯರ ಮುಡಿಗೇರಿದ ಏಕದಿನ ವಿಶ್ವಕಪ್ ಕಿರೀಟ

ಜಾನುವಾರು ಸಾಕಣೆದಾರರಿಗೆ ‘ಬಿಹಾರ ಡೈರಿ ಮಿಷನ್’
ಮೋದಿ ಅವರು ಮತ್ತೊಂದು ಹೊಸ ಯೋಜನೆ ಘೋಷಿಸಿದರು — ‘ಬಿಹಾರ ಡೈರಿ ಮಿಷನ್’. ಈ ಮಿಷನ್ನಿಂದ ಜಾನುವಾರು ಸಾಕಣೆದಾರರ ಆದಾಯ ಹೆಚ್ಚಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ಬಿಹಾರ ವಿಧಾನಸಭಾ ಚುನಾವಣೆ ವೇಳಾಪಟ್ಟಿ
ಬಿಹಾರದಲ್ಲಿ 243 ಸ್ಥಾನಗಳ ವಿಧಾನಸಭೆಗೆ ಚುನಾವಣೆಯು ಎರಡು ಹಂತಗಳಲ್ಲಿ ನಡೆಯಲಿದೆ.
- ಮೊದಲ ಹಂತ: ನವೆಂಬರ್ 6
- ಎರಡನೇ ಹಂತ: ನವೆಂಬರ್ 11
ಮತ ಎಣಿಕೆ ನವೆಂಬರ್ 14 ರಂದು ನಡೆಯಲಿದೆ.

ಇದನ್ನು ನೋಡಿ : ರೈತರಿಗೆ ಶುಭ ಸುದ್ದಿ..! ಪ್ರಧಾನಿ ಮೋದಿ ಇನ್ಮುಂದೆ ವರ್ಷಕ್ಕೆ 9000 ರೂ. ಘೋಷಿಸಿದ್ದಾರೆ!




