
BUEATY TIPS : ಸಾಮಾನ್ಯವಾಗಿ ಪ್ರತಿಯೊಬ್ಬರ ಅಡುಗೆ ಮನೆಯಲ್ಲೂ ಲಭ್ಯವಿರುವ ಟೊಮೆಟೊ, ಇತ್ತೀಚೆ ಗೆ ತ್ವಚಾ ಆರೈಕೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದೆ. ಆರೋಗ್ಯಕ್ಕೆ ಮಾತ್ರವಲ್ಲದೆ, ಟೊಮೆಟೊ ಚರ್ಮ ದ ಸಮಸ್ಯೆಗಳನ್ನು ಪರಿಹರಿಸುವ ನೈಸರ್ಗಿಕ ಪರಿಹಾರವಾಗಿ ಜನಪ್ರಿಯವಾಗುತ್ತಿದೆ.
ಟೊಮೆಟೊದಲ್ಲಿ ವಿಟಮಿನ್ ಎ, ಸಿ, ಕೆ, ಲೈಕೋಪೀನ್, ಕಬ್ಬಿಣ, ಮತ್ತು ಅನೇಕ ಶಕ್ತಿಯುತ ಉತ್ಕರ್ಷಣ ನಿರೋಧಕಗಳು ದೊರೆಯುತ್ತವೆ. ಈ ಸಂಯುಕ್ತಗಳು ಚರ್ಮದ ಹೊಳಪನ್ನು ಹೆಚ್ಚಿಸುವುದಲ್ಲದೆ, ಮೊಡ ವೆ, ಕಲೆಗಳು, ಸುಕ್ಕುಗಳು ಮುಂತಾದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಟೊಮೆಟೊ ಮನೆಮದ್ದುಗಳು:
·ಕಾಂತಿಯುತ ಚರ್ಮ: ಟೊಮೆಟೊ ಸ್ಲೈಸ್ ಅನ್ನು ಕಾಫಿ ಪುಡಿ ಜೊತೆಯಲ್ಲಿ ಮಿಶ್ರಣ ಮಾಡಿ 2-3 ನಿಮಿಷ ಉಜ್ಜಿ, ನಂತರ ತೊಳೆಯುವುದರಿಂದ ಮುಖಕ್ಕೆ ಕಾಂತಿ ನೀಡುತ್ತದೆ.
·ಮೊಡವೆ ಪರಿಹಾರ: ಟೊಮೆಟೊ ಹಾಗೂ ಜೇನುತುಪ್ಪ ಮಿಶ್ರಣವನ್ನು ಮುಖಕ್ಕೆ ಹಚ್ಚುವುದು ಎಣ್ಣೆ ನಿಯಂತ್ರಣ ಹಾಗೂ ಮೊಡವೆ ನಿವಾರಣೆಗೆ ಸಹಾಯಕವಾಗುತ್ತದೆ.
·ಕಪ್ಪು ಕಲೆಗಳಿಗೆ: ಟೊಮೆಟೊ ಹಾಗೂ ಅರಿಶಿನ ಮಿಶ್ರಣವನ್ನು ಮುಖಕ್ಕೆ ಹಚ್ಚಿದರೆ ಕಲೆ ಕಡಿಮೆ ಆಗುತ್ತದೆ.
·ಸುಕ್ಕು ನಿವಾರಣೆ: ಟೊಮೆಟೊ ಹಾಗೂ ವಿಟಮಿನ್ ಇ ಎಣ್ಣೆ ಮಿಶ್ರಣವನ್ನು ಮುಖಕ್ಕೆ ಹಚ್ಚಿದರೆ ಕಾಲಜನ್ ಉತ್ಪಾದನೆಗೆ ನೆರವಾ ಗುತ್ತದೆ.
·ತಾಜಾ ಚರ್ಮ: ಟೊಮೆಟೊ ಮತ್ತು ಅಲೋವೆರಾ ಜೆಲ್ ಬಳಕೆ ಚರ್ಮವನ್ನು ಶೀತಗೊಳಿಸುತ್ತದೆ.




