
MAHAVATARA NARSIMHA OTT RELEASE : ಅಶ್ವಿನ್ ಕುಮಾರ್ ನಿರ್ದೇಶನದಲ್ಲಿ ಮತ್ತು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿತವಾದ ಪೌರಾಣಿಕ ಆಧಾರಿತ ಅನಿಮೇಟೆಡ್ ಮಹತ್ವದ ಚಿತ್ರ ‘ಮಹಾ ವತಾರ ನರಸಿಂಹ’, ಇದೀಗ OTT ಗೆ ಕಾಲಿಟ್ಟಿದೆ. ಜುಲೈ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ, ತನ್ನ ಕಥಾವಸ್ತು, ಛಾಯಾಗ್ರಹಣ ಮತ್ತು ದೃಶ್ಯಾನುಭವದಿಂದ ಪ್ರೇಕ್ಷಕರ ಮನಗೆದ್ದಿತ್ತು.
ಭಕ್ತ ಪ್ರಹ್ಲಾದ ಮತ್ತು ದೇವತೆಯಾದ ನರಸಿಂಹನ ನಡುವಿನ ಶ್ರದ್ಧಾಭಕ್ತಿಯ ಕಥೆಯನ್ನು ಆಧರಿಸಿ ನಿರ್ಮಿತ ವಾಗಿರುವ ಈ ಚಿತ್ರ, ತನ್ನ ಪೌರಾಣಿಕ ಶೈಲಿಯಿಂದ ಆಧ್ಯಾತ್ಮಿಕತೆಯ ಹೊಸ ಆಯಾಮವನ್ನು ತೋರಿಸಿತು.. ವಿಷ್ಣುವಿನ ನರಸಿಂಹ ಅವತಾರದ ಮೂಲಕ ಹಿರಣ್ಯಕಶಿಪು ಎಂಬ ಕ್ರೂರ ರಾಕ್ಷಸ ರಾಜನ ಸಂಹಾರವನ್ನು ಚಿತ್ರಿಸಲಾಗಿದೆ.
ಇನ್ನು ಈ ಚಿತ್ರವು ಬಿಡುಗಡೆಯಾದ ನಂತರ ಕೇವಲ ಭಾರತೀಯ ಚಿತ್ರರಂಗವಲ್ಲ, ಜಾಗತಿಕವಾಗಿ ಪ್ರೇಕ್ಷಕರ ಮನಸ್ಸು ಗೆದ್ದು ವಿಶ್ವಾದ್ಯಂತ ₹325.65 ಕೋಟಿ ರೂ. ಗಳಿಕೆ ಮಾಡಿದೆ.
ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಲು ಸಾಧ್ಯವಾಗದಿದ್ದರೆ, ಈಗ ನೀವು ನಿಮ್ಮ ಮನೆಯಿಂದಲೇ ವೀಕ್ಷಿಸಬಹುದು. ಒಟಿಟಿ ವೇದಿಕೆಯಾದ ನೆಟ್ಫ್ಲಿಕ್ಸ್ ಗುರುವಾರ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದೆ. ಸೆಪ್ಟೆಂಬರ್ 19 ರಂದು ಮಧ್ಯಾಹ್ನ 12.30 ರಿಂದ ದೇಶಾ ದ್ಯಂತ ಚಿತ್ರ ವೀಕ್ಷಣೆಗೆ ಲಭ್ಯವಾಗಲಿದೆ.




