BBK : ಬಿಗ್ ಬಾಸ್ ಕನ್ನಡ ಸೀಸನ್ 12ನ ಎರಡನೇ ಕ್ಯಾಪ್ಟನ್ ಅಂತೂ ರಿವೀಲ್ ಆಗಿದ್ದಾಗಿದೆ. ಮೊದಲ ಬಾರಿಗೆ ಕ್ಯಾಪ್ಟನ್ ಆದವರು ಮ್ಯೂಟೆಂಟ್ ರಘು.

ಬಿಗ್ ಬಾಸ್ ಕನ್ನಡ ಸೀಸನ್ 12ನ (BBK 12) ಎರಡನೇ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಧನುಷ್ (Dhanush) ಅವರು ಹೊಸ ಕ್ಯಾಪ್ಟನ್ ಆಗಿ ಹೊರಹೊಮ್ಮಿದ್ದಾರೆ.
ಮೊದಲ ಕ್ಯಾಪ್ಟನ್ ಆಗಿದ್ದವರು ಮ್ಯೂಟೆಂಟ್ ರಘು, ಈಗ ಧನುಷ್ ಅವರು ಅವರ ಸ್ಥಾನಕ್ಕೆ ಬಂದು ಕ್ಯಾಪ್ಟನ್ಸಿ ಕಿರೀಟವನ್ನು ತೊಟ್ಟಿದ್ದಾರೆ. ಸದಾ “ಲಕ್ ಇಲ್ಲ” ಎಂದು ಹೇಳುತ್ತಿದ್ದ ಧನುಷ್ಗೆ ಈ ಬಾರಿ ಅದೃಷ್ಟ ಲಕ್ಷ್ಮೀ ಒಲಿದಿದ್ದಾಳೆ.
ಈ ವಾರದ ಮಜವಾದ ಟಾಸ್ಕ್ – ‘ಬಿಬಿ ಕಾಲೇಜು’!
ಈ ವಾರ ಬಿಗ್ ಬಾಸ್ ಮಜವಾದ ಟಾಸ್ಕ್ವನ್ನ ನೀಡಿದ್ದರು. ಇಡೀ ಬಿಗ್ ಬಾಸ್ ಮನೆ ಬಿಬಿ ಕಾಲೇಜು ಆಗಿತ್ತು. ಕ್ಯಾಪ್ಟನ್ಸಿ ಓಟಕ್ಕೆ ಬರಲು ಟಾಸ್ಕ್ವೊಂದನ್ನ ನೀಡಿದ್ದರು ಬಿಗ್ ಬಾಸ್. ಈ ರೇಸ್ನಲ್ಲಿ ಇದ್ದಿದ್ದು ಕಾವ್ಯ ಶೈವ, ಅಭಿಷೇಕ್, ಧನುಷ್ ಮತ್ತು ಜಾಹ್ನವಿ. ಕೊನೆಗೂ ಧನುಷ್ ಸ್ಟೂಡೆಂಟ್ ಆಫ್ ದಿ ವೀಕ್ ಎಂದು ಅನೌನ್ಸ್ ಮಾಡಲಾಯ್ತು.
ಟಾಸ್ಕ್ನಲ್ಲಿ ಯಾರು ಮೆರೆದರು?
ಈ ವೇಳೆ ರಕ್ಷಿತಾ ಅವರು ಟಾಸ್ಕ್ ನಿಭಾಯಿಸಿದ ರೀತಿಯಿಂದ ವೀಕ್ಷಕರ ಮೆಚ್ಚುಗೆ ಪಡೆದರು. ಧ್ರುವ್ ಅವರ ಆಟವೂ ಗಮನ ಸೆಳೆದಿತ್ತು. ಆದರೆ ಅಭಿಷೇಕ್ ಅವರಿಗೆ ಈ ಬಾರಿ ಕ್ಯಾಪ್ಟನ್ಸಿ ರೇಸ್ ಮಿಸ್ ಆಯ್ತು.
ಇದನ್ನು ಓದಿ : LPG ಗ್ಯಾಸ್ ಸಿಲಿಂಡರ್ ದರ ಇಳಿಕೆ

ರಘು Vs ಧನುಷ್ — ಕ್ಯಾಪ್ಟನ್ಸಿ ಫೈನಲ್ ಫೇಸ್
ಕ್ಯಾಪ್ಟನ್ ಸ್ಥಾನಕ್ಕಾಗಿ ರಘು ಮತ್ತು ಧನುಷ್ ನಡುವೆ ಅಂತಿಮ ಹೋರಾಟ ನಡೆಯಿತು. ಉಳಿದ ಸ್ಪರ್ಧಿಗಳಿಗೆ ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗಿತ್ತು. ಗಿಲ್ಲಿ ಮತ್ತು ಮಲ್ಲಮ್ಮ ಮಾತ್ರ ರಘು ಅವರ ಪರ ಮತ ಚಲಾಯಿಸಿದರು, ಆದರೆ ಉಳಿದ 13 ಮಂದಿ ಧನುಷ್ ಪರ ಮತ ಹಾಕಿದರು.
ಧನುಷ್ – ಬಿಗ್ ಬಾಸ್ ಮನೆಯ ಎರಡನೇ ಕ್ಯಾಪ್ಟನ್
ಇನ್ನು ಹೆಚ್ಚು ವೋಟ್ ಪಡೆದು ಧನುಷ್ ಅವರು ಬಿಗ್ ಬಾಸ್ ಮನೆಯಲ್ಲಿ ಎರಡನೇ ಕ್ಯಾಪ್ಟನ್ ಆಗಿ ಆಯ್ಕೆಯಾದರು. ಈ ಜಯದೊಂದಿಗೆ ಧನುಷ್ ಅವರ ಆಟದ ಮೇಲಿನ ವಿಶ್ವಾಸವೂ ಹೆಚ್ಚಿದೆ, ಇನ್ನು ವೀಕ್ಷಕರು ಧನುಷ್ ಅವರ ಮುಂದಿನ ನಾಯಕತ್ವವನ್ನು ಕಾದು ನೋಡುತ್ತಿದ್ದಾರೆ.
ಇದನ್ನು ನೋಡಿ : ಲಕ್ಕೇ ಇಲ್ಲ ಎನ್ನುತ್ತಿದ್ದ ಧನುಷ್ಗೆ ಕೊನೆಗೂ ಒಲಿದು ಬಂತು ಕ್ಯಾಪ್ಟನ್ ಪಟ್ಟ




