LPG Gas Price : ನವೆಂಬರ್ ತಿಂಗಳ ಮೊದಲ ದಿನವೇ ದೇಶದ ಜನತೆಗೆ ಗುಡ್ನ್ಯೂಸ್ ಸಿಕ್ಕಿದ್ದು, ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ನ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

ನವೆಂಬರ್ ತಿಂಗಳ ಮೊದಲ ದಿನವೇ ದೇಶದ ಜನತೆಗೆ ಶುಭ ಸುದ್ದಿ ಸಿಕಕಿದೆ. ತೈಲ ಮಾರುಕಟ್ಟೆ ಕಂಪನಿಗಳ ಅಧಿಸೂಚನೆಯ ಪ್ರಕಾರ, 19 ಕೆಜಿ ವಾಣಿಜ್ಯ LPG ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ರೂ. 4.5ರಿಂದ ರೂ. 6.5ರವರೆಗೆ ಇಳಿಕೆ ಕಂಡು ಬಂದಿದೆ.
ಗೃಹ ಬಳಕೆ ಸಿಲಿಂಡರ್ ದರ ಬದಲಾವಣೆ ಇಲ್ಲ
ಗೃಹ ಬಳಕೆಯ 14.2 ಕೆಜಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಬೆಲೆಗಳು ಏಪ್ರಿಲ್ 2025 ರಿಂದ ಸ್ಥಿರವಾಗಿಯೇ ಇವೆ.
ನವೆಂಬರ್ 1ರಿಂದ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಹೊಸ ದರಗಳು
ದೆಹಲಿ
- ಹಳೆಯ ದರ: ₹1,595.5
- ಹೊಸ ದರ: ₹1,590.5
- ಇಳಿಕೆ: ₹5
ಕೋಲ್ಕತ್ತಾ
- ಹಳೆಯ ದರ: ₹1,700.5
- ಹೊಸ ದರ: ₹1,694
- ಇಳಿಕೆ: ₹6.5
ಮುಂಬೈ
- ಹಳೆಯ ದರ: ₹1,547
- ಹೊಸ ದರ: ₹1,542
- ಇಳಿಕೆ: ₹5
ಚೆನ್ನೈ
- ಹಳೆಯ ದರ: ₹1,754.5
- ಹೊಸ ದರ: ₹1,750
- ಇಳಿಕೆ: ₹4.5
ಇದನ್ನು ಓದಿ : ಹೋಮ್ ಸ್ಟೇಯಲ್ಲಿ ರೇವ್ ಪಾರ್ಟಿ ಆರೋಪ – 130ಕ್ಕೂ ಹೆಚ್ಚು ಜನರ ಬಂಧನ

ಅಕ್ಟೋಬರ್ನಲ್ಲಿ ಏರಿಕೆ, ನವೆಂಬರ್ನಲ್ಲಿ ಇಳಿಕೆ
ಅಕ್ಟೋಬರ್ನಲ್ಲಿ ದೆಹಲಿ ಮತ್ತು ಮುಂಬೈಗಳಲ್ಲಿ ತಲಾ ₹15.5 ರೂ.ಗಳಷ್ಟು, ಹಾಗೂ ಕೋಲ್ಕತ್ತಾ ಮತ್ತು ಚೆನ್ನೈಗಳಲ್ಲಿ ತಲಾ ₹16.5 ರೂ.ಗಳಷ್ಟು ದರ ಹೆಚ್ಚಿಸಲಾಗಿತ್ತು. ಆದರೆ ನವೆಂಬರ್ನಿಂದ ಮತ್ತೆ ಇಳಿಕೆ ಕಂಡು ಬಂದಿದೆ.
ಗೃಹ ಬಳಕೆ (14.2 ಕೆಜಿ) ಎಲ್ಪಿಜಿ ಸಿಲಿಂಡರ್ ದರ — ನವೆಂಬರ್ 2025
| ನಗರ | ಸಿಲಿಂಡರ್ ದರ (₹) | ಬದಲಾವಣೆ |
| ದೆಹಲಿ | 853 | ಬದಲಾವಣೆ ಇಲ್ಲ |
| ಮುಂಬೈ | 852.50 | ಬದಲಾವಣೆ ಇಲ್ಲ |
| ಕೋಲ್ಕತ್ತಾ | 879 | ಬದಲಾವಣೆ ಇಲ್ಲ |
| ಚೆನ್ನೈ | 868.50 | ಬದಲಾವಣೆ ಇಲ್ಲ |
| ಬೆಂಗಳೂರು | 855.50 | ಬದಲಾವಣೆ ಇಲ್ಲ |
ನವೆಂಬರ್ 2025 ರಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ಸಣ್ಣ ಮಟ್ಟಿನ ಇಳಿಕೆ ಕಂಡು ಬಂದಿದ್ದರೂ, ಗೃಹ ಬಳಕೆದಾರರಿಗೆ ಯಾವುದೇ ಬದಲಾವಣೆ ಆಗಿಲ್ಲ. ಇದು ಹೋಟೆಲ್ಗಳು, ವ್ಯಾಪಾರಿಕ ಸಂಸ್ಥೆಗಳು ಮತ್ತು ರೆಸ್ಟೋರೆಂಟ್ಗಳಿಗೆ ಸ್ವಲ್ಪದಾದರೂ ಪರಿಹಾರ ನೀಡುವಂತಾಗಿದೆ.
ಇದನ್ನು ನೋಡಿ : ಗುಡ್ನ್ಯೂಸ್… ಗುಡ್ನ್ಯೂಸ್! LPG ಗ್ಯಾಸ್ ಮತ್ತಷ್ಟು ಅಗ್ಗ!




