CRICKET: ಜೋಶ್ ಹೇಜಲ್ವುಡ್ ಅವರ ಮಾರಕ ಬೌಲಿಂಗ್ ದಾಳಿಗೆ ಭಾರತದ ಅಗ್ರ ಕ್ರಮಾಂಕ ಕುಸಿದರೂ, ಅಭಿಷೇಕ್ ಶರ್ಮಾ ಅವರ ಕೆಚ್ಚೆದೆಯ ಅರ್ಧಶತಕ (68) ಮತ್ತು ಹರ್ಷಿತ್ ರಾಣಾ (35) ಅವರ ಬೆಂಬಲದಿಂದ ಟೀಂ ಇಂಡಿಯಾ 125 ರನ್ ಗಳಿಸಿ ಆಸ್ಟ್ರೇಲಿಯಾಗೆ ಸ್ಪರ್ಧಾತ್ಮಕ ಗುರಿ ನೀಡಿತು.

CRICKET : ಜೋಶ್ ಹೇಜಲ್ವುಡ್ ಅವರ ಮಾರಕ ದಾಳಿಯ ಎದುರು ಭಾರತ ತಂಡ ತತ್ತರಿಸಿದರೂ, ಅಭಿಷೇಕ್ ಶರ್ಮಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಭಾರತವು 125 ರನ್ ಗಳಿಸಿ ಸರ್ವಪತನ ಕಂಡಿದೆ. ಈ ಮೂಲಕ ಆಸ್ಟ್ರೇಲಿಯಾಗೆ ಸ್ಪರ್ಧಾತ್ಮಕ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಆರಂಭದಲ್ಲೇ ಹೇಜಲ್ವುಡ್ ಅವರ ವೇಗದ ಬೌಲಿಂಗ್ ಎದುರಿಸಲು ಹೋರಾಡಿತು. ಕೇವಲ 32 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್ಗಳು ಪೆವಿಲಿಯನ್ ಸೇರಿದರು. ಶುಭ್ಮನ್ ಗಿಲ್ (5), ಸಂಜು ಸ್ಯಾಮ್ಸನ್ (2), ಸೂರ್ಯಕುಮಾರ್ ಯಾದವ್ (1) ಹಾಗೂ ತಿಲಕ್ ವರ್ಮಾ (0) ಶೀಘ್ರ ಪೆವಿಲಿಯನ್ ಹಾದಿ ಹಿಡಿದರು.
ಇದನ್ನೂ ಓದಿ: Political News: ಆರ್ಎಸ್ಎಸ್ ನಿಷೇಧಕ್ಕೆ ಖರ್ಗೆ ಆಗ್ರಹ – ರಾಜಕೀಯ ವಲಯದಲ್ಲಿ ಸಂಚಲನ..!
ಈ ವೇಳೆ ಅಭಿಷೇಕ್ ಶರ್ಮಾ ಮಾತ್ರ ಧೈರ್ಯದಿಂದ ಬ್ಯಾಟಿಂಗ್ ನಡೆಸಿ 50 ಕ್ಕೂ ಹೆಚ್ಚು ರನ್ ಗಳಿಸಿ ತಂಡಕ್ಕೆ ಗೆಲುವಿನ ಹಾದಿ ತೋರಿಸಿದರು. ಆದರೆ ಅಕ್ಷರ್ ಪಟೇಲ್ ರನೌಟ್ (7) ಆಗಿ ಹಿಂತಿರುಗಿದ ನಂತರ ಭಾರತವು 7.3 ಓವರ್ಗಳಲ್ಲಿ ಕೇವಲ 49/5 ಗಳಿಸಿ ಸಂಕಷ್ಟಕ್ಕೆ ಸಿಲುಕಿತು.
ಆಸ್ಟ್ರೇಲಿಯಾ ಪರ ಹೇಜಲ್ವುಡ್ನಾಲ್ಕು ಓವರ್ಗಳಲ್ಲಿ ಕೇವಲ 13 ರನ್ ನೀಡಿ ಮೂರು ಪ್ರಮುಖ ವಿಕೆಟ್ ಪಡೆದರೆ, ಕ್ಸೇವಿಯರ್ ಬಾರ್ಲೆಟ್ ಮತ್ತು ನೇಥನ್ ಎಲ್ಲಿಸ್ ತಲಾ ಎರಡು ವಿಕೆಟ್ ಪಡೆದರು. ಮಾರ್ಕಸ್ ಸ್ಟೋನಿಸ್ ಸಹ ಒಂದು ವಿಕೆಟ್ ಗಳಿಸಿದರು. ಆಸ್ಟ್ರೇಲಿಯಾಗೆ 126 ರನ್ಗಳ ಗುರಿ ನೀಡಿದೆ.
MUST WATCH: ಪಾಪಾ.. ಜೀವ ಉಳಿಸುವವರಿಗೇ ಬದುಕಲು ತೊಂದರೆ..! -AMBULANCE DRIVERS ಕೊಠಡಿ ಸ್ಥಿತಿ ನೋಡುವಂತಿಲ್ಲ! | CN HALLI NEWS




