BBK : ಬಿಗ್ಬಾಸ್ನಲ್ಲಿ ಬಿಬಿ ಫೆಸ್ಟ್ ಕಳೆ ಕಟ್ಟಿದೆ. ಎಲ್ಲ ಸ್ಪರ್ಧಿಗಳು ತಮ್ಮ ಬೆಸ್ಟ್ ತೋರಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ.

BBK : ಬಿಗ್ಬಾಸ್ ಮನೆಯಲ್ಲಿ ಬಿಬಿ ಫೆಸ್ಟ್ ಕಳೆ ಕಟ್ಟಿದ್ದು, ಸ್ಪರ್ಧಿಗಳು ತಮ್ಮ ಶ್ರೇಷ್ಠತೆಯನ್ನು ತೋರಿಸಲು ಹರಸಾಹಸ ಪಡುತ್ತಿದ್ದಾರೆ. ಎಲ್ಲರೂ “ಸ್ಟೂಡೆಂಟ್ ಆಫ್ ದಿ ವೀಕ್” ಆಗುವ ಕನಸು ಕಾಣುತ್ತಿದ್ದು, ಈ ಟೈಟಲ್ಗಾಗಿ ನಡೆಯುತ್ತಿರುವ ಸ್ಪರ್ಧೆ ಸ್ನೇಹಿತರನ್ನೇ ಶತ್ರುಗಳನ್ನಾಗಿಸುತ್ತಿದೆ.
ಇದಕ್ಕಾಗಿಯೇ ಬಿಗ್ಬಾಸ್ ಸ್ಪೆಷಲ್ ಟಾಸ್ಕ್ನ್ನು ನೀಡಿದ್ದು, ಎಲ್ಲ ಅಭ್ಯರ್ಥಿಗಳು ತಮ್ಮ ಎರಡೆರಡು ಫೋಟೋವನ್ನು ಬೇರೆ ಯಾರಿಗೂ ಸಿಗದ ರೀತಿಯಲ್ಲಿ ಬಚ್ಚಿಡಬೇಕು. ಅಭ್ಯರ್ಥಿಗಳ ಬೆಂಬಲಿಗರು ಈ ಫೋಟೋಗಳನ್ನು ಹುಡುಕಿ ತಂದು ಫ್ರೇಮ್ನೊಳಗೆ ಹಾಕಬೇಕು.
ಇದನ್ನು ನೋಡಿ : ಅಪ್ಪ ಮಗನ ಮೇಲೆ ಕರಡಿಗಳ ದಾಳಿ
ಎಕ್ಸ್ ಮಾರ್ಕ್ನೊಳಗೆ ಫೋಟೋ ಇರುವ ಅಭ್ಯರ್ಥಿಗಳು ಓಟದಿಂದ ಔಟಾದರೆ ಖಾಲಿ ಫ್ರೇಮ್ನಲ್ಲಿ ಯಾರ ಫೋಟೋ ಇರುತ್ತದೆಯೋ ಅವರು ಸ್ಟೂಡೆಂಟ್ ಆಫ್ ದಿ ವೀಕ್ ಆಗಿ ಆಯ್ಕೆಯಾಗುತ್ತಾರೆ.
ಆದರೆ, ಟಾಸ್ಕ್ ವೇಳೆ ದ್ರುವಂತ್ನ್ನು ತಡೆಯಲು ಮಾಳು ಮತ್ತು ಸೂರಜ್ ನಡೆಸಿದ ಎಳೆದು ಕಿತ್ತಾಟವು ಮನೆಯಲ್ಲಿ ಗಲಾಟೆ ಮೂಡಿಸಿತು. ಇಷ್ಟೆಲ್ಲ ಕಿತ್ತಾಟ, ಕೂಗು, ತಳ್ಳಾಟಗಳ ಬಳಿಕ ಈ ವಾರದ “ಸ್ಟೂಡೆಂಟ್ ಆಫ್ ದಿ ವೀಕ್” ಆಗಿ ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.
ಇದನ್ನು ಓದಿ : ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್




