Metro Yellow Line : ನವೆಂಬರ್ 1ರಿಂದ ಹಳದಿ ಮಾರ್ಗದಲ್ಲಿ ನಾಳೆ ಬೆಳಿಗ್ಗೆ 5 ಗಂಟೆಗೆ 5ನೇ ಮೆಟ್ರೋ ರೈಲು ಸೇವೆ ಆರಂಭವಾಗಲಿದೆ.

Metro Yellow Line : ಕರ್ನಾಟಕ ರಾಜ್ಯೋತ್ಸವದ ಸಂಭ್ರಮದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ನವೆಂಬರ್ 1ರಿಂದ ಹಳದಿ ಮಾರ್ಗದಲ್ಲಿ 5ನೇ ಮೆಟ್ರೋ ರೈಲು ಸೇವೆ ಪ್ರಾರಂಭವಾಗಲಿದೆ.
ಬೆಳಿಗ್ಗೆ 5 ಗಂಟೆಗೆ ಹೊಸ ರೈಲು ಸಂಚಾರ ಆರಂಭ
ಹೊಸ ರೈಲು ಸೇವೆ ನಾಳೆ (ನವೆಂಬರ್ 1) ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗಲಿದ್ದು, ಇದರೊಂದಿಗೆ ಹಳದಿ ಮಾರ್ಗದಲ್ಲಿ ಪ್ರತಿದಿನ ಐದು ಮೆಟ್ರೋಗಳು ಸಂಚರಿಸಲಿವೆ ಎಂದು BMRCL ಪ್ರಕಟಿಸಿದೆ.
ಪೀಕ್ ಅವಧಿಯಲ್ಲಿ ಪ್ರತೀ 15 ನಿಮಿಷಕ್ಕೊಮ್ಮೆ ರೈಲು ಸಂಚಾರ
ಹೊಸ ರೈಲು ಸೇರಿಕೆಯಿಂದ ಹಳದಿ ಮಾರ್ಗದಲ್ಲಿ ಪೀಕ್ ಅವಧಿಯಲ್ಲಿನ ರೈಲು ಸಂಚಾರದ ಆವರ್ತನ ಹೆಚ್ಚಳವಾಗಲಿದೆ. ಈಗಿರುವ 19 ನಿಮಿಷಗಳ ಬದಲಿಗೆ ಪ್ರತಿ 15 ನಿಮಿಷಕ್ಕೊಮ್ಮೆ ರೈಲುಗಳು ಓಡಲಿವೆ. ಇದರ ಪರಿಣಾಮವಾಗಿ ಪ್ರಯಾಣಿಕರಿಗೆ ಸುಗಮ, ವೇಗದ ಮತ್ತು ನಿರಂತರ ಸೇವೆ ದೊರೆಯಲಿದೆ.
ಮೊದಲ ಹಾಗೂ ಕೊನೆಯ ರೈಲು ವೇಳಾಪಟ್ಟಿಯಲ್ಲಿ ಬದಲಾವಣೆ ಇಲ್ಲ
ಆರ್.ವಿ ರಸ್ತೆ ಮತ್ತು ಬೊಮ್ಮಸಂದ್ರ ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಮೊದಲ ಹಾಗೂ ಕೊನೆಯ ರೈಲುಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಕೊನೆಯ ರೈಲು ರಾತ್ರಿ 11 ಗಂಟೆಗೆ ಸಂಚರಿಸುವುದೇ ಮುಂದುವರಿಯಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.

BMRCL ನ ವಿನಂತಿ
ಬಿಎಂಆರ್ಸಿಎಲ್ ಪ್ರಯಾಣಿಕರಿಗೆ ಈ ಬದಲಾವಣೆ ಕುರಿತು ಗಮನಿಸಲು ಹಾಗೂ ಸುಧಾರಿತ ಮೆಟ್ರೋ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಿದೆ.
ಪ್ರಧಾನಿ ಮೋದಿ ನೀಡಿದ ಗ್ರೀನ್ ಸಿಗ್ನಲ್
ಆಗಸ್ಟ್ 10ರಂದು ಈ ಹಳದಿ ಮಾರ್ಗಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗ್ರೀನ್ ಸಿಗ್ನಲ್ ನೀಡಿದ್ದರು. ಆರ್.ವಿ ರೋಡ್ನಿಂದ ಬೊಮ್ಮಸಂದ್ರವರೆಗೆ 19.5 ಕಿಮೀ ವಿಸ್ತೀರ್ಣದ ಈ ಮಾರ್ಗದಲ್ಲಿ ಒಟ್ಟು 16 ಮೆಟ್ರೋ ನಿಲ್ದಾಣಗಳಿವೆ.
ನವೆಂಬರ್ 1ರಿಂದ ಹಳದಿ ಮಾರ್ಗದಲ್ಲಿ 5ನೇ ಮೆಟ್ರೋ ರೈಲು ಸಂಚಾರ ಆರಂಭವಾಗುತ್ತಿದ್ದು, ಇದು ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಮುಖ ಹೆಜ್ಜೆಯಾಗಿದೆ.

ಇದನ್ನು ನೋಡಿ : ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್




