Murder : ತಾಯಿಯ ಚಿನ್ನದ ಸರ ಕದ್ದಿದ್ದನ್ನು ಪ್ರಶ್ನಿಸಿದ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆಯೊಂದು ಕೋಣನಕುಂಟೆ ಪ್ರದೇಶದ ಗಣಪತಿಪುರದ ಸ್ಮಶಾನ ರಸ್ತೆಯಲ್ಲಿ ನಡೆದಿದೆ.

Murder : ಬೆಂಗಳೂರಿನ ಕೋಣನಕುಂಟೆ ಪ್ರದೇಶದ ಗಣಪತಿಪುರ ಸ್ಮಶಾನ ರಸ್ತೆದಲ್ಲಿಒಂದು ಭೀಕರ ಘಟನೆ ನಡೆದಿದೆ. ತಾಯಿಯ ಚಿನ್ನದ ಸರ ಕದ್ದಿದ್ದನ್ನು ಪ್ರಶ್ನಿಸಿದ ಸ್ನೇಹಿತನನ್ನೇ ಹತ್ಯೆ ಮಾಡಲಾಗಿದೆ.
ಮೃತಪಟ್ಟ ಯುವಕನ ವಿವರ
ಮೃತ ಯುವಕನನ್ನು ಜಿಡಿ ರಾಹುಲ್ (20) ಎಂದು ಗುರುತಿಸಲಾಗಿದೆ. ಇವರು ಹುಳಿಮಾವಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನ ಐದನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದರು.
ಆರೋಪಿಯ ಬಂಧನ
ಇನ್ನು ಪೊಲೀಸರು ಪ್ರಕರಣ ಸಂಬಂಧ ಪ್ರೀತಂ (19) ಎಂಬ ಆರೋಪಿಯನ್ನು ಬಂಧಿಸಿದ್ದು, ನಂತರ ನ್ಯಾಯಾಂಗ ಬಂಧನಕ್ಕೆ ತೆಗೆದುಕೊಂಡಿದ್ದಾರೆ.
ಇದನ್ನು ಓದಿ : ಬಂಗಾರದ ಬೊಂಬೆಯಂತೆ ಕಂಗೊಳಿಸಿದ ನಟಿ ಅನುಷಾ ರೈ
ಪ್ರಕರಣದ ಹಿನ್ನೆಲೆ
ಆರೋಪಿ ಪ್ರೀತಂ ಹೊಸ ಬೈಕ್ ಖರೀದಿ ಮಾಡಲು ತಾಯಿಯ ಚಿನ್ನದ ಸರ ಕದ್ದಿದ್ದ. ಬಳಿಕ ಆರೋಪವನ್ನು ರಾಹುಲ್ ಮೇಲೆ ಹೊರಿಸಿದ್ದ. ಈ ನಡುವೆ ಪ್ರೀತಂ ಪರ್ಸ್ ನಲ್ಲಿ ಚಿನ್ನದ ಸರವನ್ನು ಇರುವುದನ್ನು ರಾಹುಲ್ ನೋಡಿದ್ದ. ಸ್ವಲ್ಪ ದಿನದ ನಂತರ ಸ್ನೇಹಿತರು ಪ್ರೀತಂ ಕಳ್ಳತನ ಮಾಡಿದ್ದ ವಿಚಾರವನ್ನು ರಾಹುಲ್ ಗಮನಕ್ಕೆ ತಂದಾಗ, ಸತ್ಯ ತಿಳಿದಿದೆ. ಬಳಿಕ ಪ್ರೀತಂ ಅವರ ತಾಯಿಯ ಬಳಿ ರಾಹುಲ್ ಸತ್ಯ ಹೇಳಿದ್ದಾನೆ.
ಪ್ರೀತಂ ತಾಯಿ ತನ್ನ ಮಗನನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದ ಪ್ರೀತಂ ಕುಪಿತಗೊಂಡಿದ್ದಾರೆ. ಅಕ್ಟೋಬರ್ 29ರಂದು ರಾಹುಲ್ ತನ್ನ ಸ್ನೇಹಿತರೊಂದಿಗಿದ್ದಾಗ ಸ್ಥಳಕ್ಕೆ ಬಂದ ಪ್ರೀತಂ ರಾಹುಲ್ ಜೊತೆಗೆ ಜಗಳಕ್ಕಿಳಿದಿದ್ದಾನೆ. ಮಾತಿನ ಚಕಮಕಿ ತಾರಕ್ಕೇರಿದಾಗ ಚಾಕುವಿನಿಂದ ಸ್ನೇಹಿತನಿಗೆ ಇರಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ರಾಹುಲ್ ಸ್ನೇಹಿತರು ಕನಕಪುರ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿಕಿತ್ಸೆ ಫಲಿತಾಂಶ
ಇನ್ನು ರಾಹುಲ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಪ್ರಕರಣ ಸಂಬಂಧ ರಾಹುಲ್ ಸಹೋದರಿ ಅಪೂರ್ವ ಅವರು ದೂರು ದಾಖಲಿಸಿದ್ದಾರೆ. ಪೊಲೀಸರು ತ್ವರಿತ ಕ್ರಮವಾಗಿ ಅರೋಪಿ ಪ್ರೀತಂ ಅವರನ್ನು ಬಂಧನಕ್ಕೆ ಮಾಡುವ ಮೂಲಕ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಇದನ್ನು ನೋಡಿ : ಗುಬ್ಬಿ-ಚಿ,ನಾ.ಹಳ್ಳಿಯಲ್ಲಿ ಏಕತಾ ದಿವಸ್ – ರಾಷ್ಟ್ರಭಕ್ತಿ ಮೂಡಿಸಲು ಏಕತಾನ್ ಓಟ




