Anusha Rai : ಸ್ಯಾಂಡಲ್ವುಡ್ ನಟಿ ಹಾಗೂ ಬಿಗ್ಬಾಸ್ ಮಾಜಿ ಸ್ಪರ್ಧಿ ಅನುಷಾ ರೈ ಥೇಟ್ ಬಂಗಾರದ ಬೊಂಬೆಯಂತೆ ಕಾಣಿಸಿಕೊಂಡಿದ್ದಾರೆ.

ಗ್ಲಾಮರಸ್ ನಟಿ ಹಾಗೂ ಬಿಗ್ಬಾಸ್ ಮಾಜಿ ಸ್ಪರ್ಧಿ ಅನುಷಾ ರೈ ಗೋಲ್ಡನ್ ವರ್ಣದ ಲೆಹೆಂಗಾದಲ್ಲಿ ಮಿಂಚಿದ್ದಾರೆ. ತಮ್ಮ ದೇಸಿ ಲುಕ್ಗೆ ವಿಶೇಷ ಟಚ್ ನೀಡಿರುವ ಅನುಷಾ ಈ ಲುಕ್ನಲ್ಲಿ “ಬಂಗಾರದ ಬೊಂಬೆ” ಯಂತೆ ಕಂಗೊಳಿಸಿದ್ದಾರೆ. ಸಂಪೂರ್ಣ ಗೋಲ್ಡನ್ ಲುಕ್ಗೆ ಅವರು ತಮ್ಮ ಸೈ ನೀಡಿರುವುದು ಗಮನ ಸೆಳೆಯುತ್ತಿದೆ.
ಫ್ಯಾಷನ್ ಮತ್ತು ವಿದ್ಯಾಭ್ಯಾಸ
ಅನುಷಾ ರೈ ಫ್ಯಾಷನ್ ಲುಕ್ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ, ಆದರೆ ಅವರು ಎಂಜಿನಿಯರಿಂಗ್ ಪದವೀಧರೆ ಎಂಬುದು ಬಹುಶಃ ಕಡಿಮೆ ಜನರಿಗೂ ಗೊತ್ತು.
ಫ್ಯಾಷನ್ ಶೋಗಳಲ್ಲಿ ಮೊದಲಿನಿಂದಲೂ ಸಕ್ರಿಯರಾಗಿದ್ದ ಅನುಷಾ, ಬಿಗ್ಬಾಸ್ನಲ್ಲಿ ಭಾಗವಹಿಸಿದ ನಂತರ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಪ್ರಸ್ತುತ, ಅನುಷಾ ರೈ ಅವರ 4 ಸಿನಿಮಾಗಳು ಬಿಡುಗಡೆಯಿಗಾಗಿ ಸಿದ್ಧವಾಗಿದ್ದು, 3 ಸಿನಿಮಾಗಳ ಶೂಟಿಂಗ್ ಪ್ರಗತಿಯಲ್ಲಿ ಇದೆ.
ಇದನ್ನು ಓದಿ : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ- ತಂದೆ ಮಗ ಸಾವು

ಸೋಶಿಯಲ್ ಮೀಡಿಯಾ ಮೆಚ್ಚುಗೆ
ಅನುಷಾ ರೈ ಗೋಲ್ಡನ್ ಲುಕ್ ನಲ್ಲಿ ಸಿನಿಮಾ ಮೂಲದವರ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡು, ಫೋಟೋಗಳಲ್ಲಿ ಅಭಿಮಾನಿಗಳ ಮತ್ತು ಫಾಲೋವರ್ಸ್ಗಳ ಮೆಚ್ಚುಗೆ ಗಳಿಸಿದ್ದಾರೆ.
ಅನುಷಾ ಅವರ ಲುಕ್ ಬಗ್ಗೆ ಮಾತು
ಅನುಷಾ ತಮ್ಮ ಗೋಲ್ಡನ್ ಲುಕ್ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.“ಈ ಲುಕ್ ನನ್ನ ಸ್ವಂತ ಐಡಿಯಾ, ಇದರಲ್ಲಿ 2 ಬಗೆಯ ಲುಕ್ ಸೃಷ್ಟಿಸಿದ್ದೇನೆ.
ಡಿಸೈನರ್ ಚಂದನ್ ಗೌಡ ಅವರ ಕ್ರಿಯೇಷನ್ ಇದಾಗಿದೆ. ಆಪ್ತರ ಮದುವೆ ಅಟೆಂಡ್ ಮಾಡುವ ಸಂದರ್ಭದಲ್ಲಿ ಈ ಲುಕ್ನಲ್ಲಿ ಕಾಣಿಸಿಕೊಂಡೆ” ಎಂದಿದ್ದಾರೆ.

ಇದನ್ನು ನೋಡಿ : ಬಂಗಾರದ ಬೊಂಬೆಯಾದ ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ಅನುಷಾ ರೈ




