Jemimah Rodrigues : ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ, ಹಾಲಿ ಹಾಗೂ ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ಭಾರತ ತಂಡ ಫೈನಲ್ ಪ್ರವೆಶೀಸಿತು.

ಗುರುವಾರ ನಡೆದ ಮಹಿಳಾ ಏಕದಿನ ವಿಶ್ವಕಪ್ (ICC Women’s World Cup 2025) ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಹಾಗೂ ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ಭಾರತ ಮಹಿಳಾ ತಂಡ ಫೈನಲ್ಗೆ ಪ್ರವೇಶಿಸಿದೆ.
ಜೆಮಿಮಾ ರಾಡ್ರಿಗಸ್ — ಗೆಲುವಿನ ಶಿಲ್ಪಿ
ಆಕರ್ಷಕ ಆಟವಾಡಿ ಅಜೇಯ ಶತಕ ಬಾರಿಸಿದ ಜೆಮಿಮಾ ರಾಡ್ರಿಗಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. 134 ಎಸೆತಗಳಲ್ಲಿ 14 ಬೌಂಡರಿ ನೆರವಿನಿಂದ 127* ರನ್ ಬಾರಿಸಿದ ಅವರು ನಿಜವಾದ ಹೀರೋಯಿನ್ ಆದರು.
ಇನ್ನು ನಾಯಕಿ ಹರ್ಮನ್ಪ್ರೀತ್ ಕೌರ್ ಜೊತೆ 167 ರನ್ಗಳ ಅಜೇಯ ಜೊತೆಯಾಟ ನಡೆಸಿದ ಈ ಜೋಡಿ ತಂಡವನ್ನು ಜಯದ ದಡ ಸೇರಿಸಿತು.
ಸಂತಸದಲ್ಲಿ ಕಣ್ಣೀರು ಸುರಿಸಿದ ಜೆಮಿಮಾ
ತಂಡ ಗೆದ್ದ ಕ್ಷಣದಲ್ಲಿ ಜೆಮಿಮಾ ಭಾವುಕರಾಗಿ ಮೈದಾನದಲ್ಲೇ ಸಂತಸದ ಕಣ್ಣೀರು ಸುರಿಸಿದರು. ಪಂದ್ಯದ ಬಳಿಕ ಮಾತನಾಡಿದ್ದು, ಅವರು ಭಾವುಕರಾಗಿಯೇ ಕಂಡುಬಂದರು. “ತಂಡದ ಗೆಲುವೇ ನನ್ನ ಶತಕಕ್ಕಿಂತ ಮುಖ್ಯ” ಎಂದು ಅವರು ಹೇಳಿದರು.
ಇದನ್ನು ಓದಿ : ನಟ ದರ್ಶನ್ ಪುತ್ರ ವಿನೀಶ್ಗೆ ಬರ್ತ್ಡೇ ಸಂಭ್ರಮ

ಕರಾವಳಿಯ ಕಿರಿಯ ಕಣ್ಮಣಿ
ಜೆಮಿಮಾ ಮುಂಬೈನಲ್ಲಿ ಹುಟ್ಟಿ ಬೆಳೆದರೂ, ಅವರ ಮೂಲ ಕರಾವಳಿಯ ನಂಟನ್ನು ಹೊಂದಿದೆ. ತಂದೆ ಇವಾನ್ ರೋಡ್ರಿಗಸ್ ಮಂಗಳೂರಿನವರು,
ತಾಯಿ ಲ್ಯಾವಿಟಾ ರೋಡ್ರಿಗಸ್ ಉಡುಪಿಯವರು. ಕರಾವಳಿಯ ಈ ಪುತ್ರಿಯ ಸಾಧನೆಗೆ ತುಳುನಾಡು ಮತ್ತು ಕರಾವಳಿ ಕರ್ನಾಟಕದ ಮುಂಬಯಿಗರೆಲ್ಲರೂ ಹೆಮ್ಮೆಪಟ್ಟಿದ್ದಾರೆ.
ಕ್ರಿಕೆಟ್ ಜೊತೆಗೆ ಹಾಕಿಯಲ್ಲಿಯೂ ಪ್ರಾಬಲ್ಯ
ಜೆಮಿಮಾ ಶಾಲಾ ದಿನಗಳಲ್ಲಿ ಹಾಕಿ ಟೂರ್ನಿಗಳಲ್ಲಿಯೂ ಆಡಿದ್ದರು. ಆದರೆ ನಂತರ ಕ್ರಿಕೆಟ್ನತ್ತ ಹೆಚ್ಚು ಒಲವು ತೋರಿದರು. ಈಗ ಅವರು ಭಾರತ ಮಹಿಳಾ ತಂಡದ ಪ್ರಮುಖ ತಾರೆಗಳಲ್ಲಿ ಒಬ್ಬರು.
ಈ ಹಿಂದೆ ಭಾರತ ತಂಡ 2005 ಮತ್ತು 2017ರಲ್ಲಿ ಪ್ರಶಸ್ತಿ ಸುತ್ತು ತಲುಪಿತ್ತು. ಇದೀಗ ಮೂರನೇ ಬಾರಿ ಫೈನಲ್ ಪ್ರವೇಶಿಸಿರುವ ಆತಿಥೇಯ ಭಾರತ ತಂಡವು, ಭಾನುವಾರ ನಡೆಯುವ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಯಾರೇ ಗೆದ್ದರೂ ಹೊಸ ಚಾಂಪಿಯನ್ ತಂಡ ಉದಯಿಸಲಿದೆ.

ಇದನ್ನು ನೋಡಿ : ವಿಶ್ವಕಪ್ ಸೆಮಿಯಲ್ಲಿ ಭಾರತ ಗೆಲುವಿಗೆ ಕಾರಣವಾದ ಜೆಮಿಮಾ ಮಂಗಳೂರು ಮೂಲದ ಹುಡುಗಿ!




