Vineesh Darshan : ನಟ ದರ್ಶನ್ ಪುತ್ರ ವಿನೀಶ್ಗೆ ಹುಟ್ಟುಹಬ್ಬದ ಸಂಭ್ರಮ. ಅಪ್ಪನಿಲ್ಲದೇ ಮೊದಲ ಬಾರಿಗೆ ವಿನೀಶ್ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ.

ನಟ ದರ್ಶನ್ ಪುತ್ರ ವಿನೀಶ್ (Vineesh) ತಮ್ಮ ಹುಟ್ಟುಹಬ್ಬವನ್ನು ಈ ಬಾರಿ ಅಪ್ಪನಿಲ್ಲದೇ ಮೊದಲ ಬಾರಿಗೆ ಆಚರಿಸುತ್ತಿದ್ದಾರೆ. ಪ್ರತೀ ವರ್ಷ ಅದ್ಧೂರಿಯಾಗಿ ನಡೆಯುತ್ತಿದ್ದ ಹುಟ್ಟುಹಬ್ಬದ ಸಂಭ್ರಮ ಈ ಬಾರಿ ಸಾಧಾರಣವಾಗಿ ಸಾಗುತ್ತಿದೆ.
ಅಪ್ಪನ ಅನುಪಸ್ಥಿತಿಯಿಂದ ಬೇಸರಗೊಂಡ ವಿನೀಶ್
ಅಪ್ಪ ದರ್ಶನ್ ಈ ಬಾರಿ ಕುಟುಂಬದ ಜೊತೆ ಇಲ್ಲ. ಅಪ್ಪನ ವಿಶಸ್ ಮತ್ತು ಗಿಫ್ಟ್ಗಳನ್ನು ಮಿಸ್ ಮಾಡಿಕೊಳ್ಳುತ್ತಿರುವ ವಿನೀಶ್ನ ಮನಸ್ಥಿತಿ ಬೇಸರದಿಂದ ಕೂಡಿದೆ. ಕಳೆದ ವರ್ಷ ದರ್ಶನ್ ಬಳ್ಳಾರಿ ಜೈಲಿನಿಂದ ಮಧ್ಯಂತರ ಜಾಮೀನು ಪಡೆದು ಬಂದ ತಕ್ಷಣ, ಹೊಸಕೆರೆಹಳ್ಳಿ ಫ್ಲ್ಯಾಟ್ನಲ್ಲಿ ಮಗನ ಹುಟ್ಟುಹಬ್ಬವನ್ನು ಕುಟುಂಬದ ಜೊತೆ ಅದ್ಧೂರಿಯಾಗಿ ಆಚರಿಸಿದ್ದರು. ಈ ಬಾರಿ ಆ ಸಂಭ್ರಮ ಕಾಣದಂತಾಗಿದೆ.

ತಾಯಿ ವಿಜಯಲಕ್ಷ್ಮಿಯಿಂದ ಧೈರ್ಯದ ಸಂದೇಶ
ಅಪ್ಪನಿಲ್ಲದ ಖಾಲಿತನವನ್ನು ತುಂಬಲು ತಾಯಿ ವಿಜಯಲಕ್ಷ್ಮಿ ದರ್ಶನ್ ಮಗನಿಗೆ ಧೈರ್ಯ ತುಂಬಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ದರ್ಶನ್ ಮತ್ತು ವಿನೀಶ್ ಜೊತೆಯ ಫೋಟೋ ಪೋಸ್ಟ್ ಮಾಡಿ, ಹೃದಯಸ್ಪರ್ಶಿ ಸಂದೇಶ ಬರೆದುಕೊಂಡಿದ್ದಾರೆ.
ನೀನು ಕೆಲ ಘಟನೆಗಳು ಹಾಗೂ ಪರಿಸ್ಥಿತಿಯನ್ನ ಎದುರಿಸಿ ನಿಂತಿರುವುದು ನನಗೆ ಹೆಮ್ಮೆ ತಂದಿದೆ. ನಾನು, ನಿಮ್ಮ ಅಪ್ಪ ನಿನ್ನನ್ನು ತುಂಬಾನೇ ಪ್ರೀತಿಸುತ್ತೇವೆ ಎಂಬುದನ್ನ ಮರೆಯಬೇಡ ಮಗನೇ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಇದನ್ನು ಓದಿ : KKR ಗೆ ನೂತನ ಹೆಡ್ ಕೋಚ್ ಆಗಿ ಅಭಿಷೇಕ್ ನಾಯರ್ ನೇಮಕ

ಕುಟುಂಬದ ಮೌನ ಸಂಭ್ರಮ
ಹಿಂದಿನ ವರ್ಷಗಳಲ್ಲಿ ದರ್ಶನ್ ಫ್ಯಾಮಿಲಿ ವಿನೀಶ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುದ್ದರು. ಈ ಬಾರಿ ಬರ್ತ್ಡೇಗೆ ಅಪ್ಪನನ್ನ ದರ್ಶನ್ ಪುತ್ರ ವಿನೀಶ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅಭಿಮಾನಿಗಳೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವಿನೀಶ್ಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ಇದನ್ನು ನೋಡಿ : ನಟ ದರ್ಶನ್ ಪುತ್ರ ವಿನೀಶ್ಗೆ ಬರ್ತ್ಡೇ ಸಂಭ್ರಮ; ವಿಜಯಲಕ್ಷ್ಮಿ ಪೋಸ್ಟ್




