Rishabh Pant : ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ವಿರಾಟ್ ಕೊಹ್ಲಿಯ 18 ನಂಬರ್ ಜೆರ್ಸಿ ತೊಟ್ಟು ಮೂರು ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದಾರೆ.

ವಿಕಿಟ್-ಕೀಪರ್,ಬ್ಯಾಟರ್ ರಿಷಭ್ ಪಂತ್ ಮೂರು ತಿಂಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದು, ಉದ್ಯಾನನಗರಿಯ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಸೋಮವಾರ ಆರಂಭವಾದ ಮೊದಲ ಚತುರ್ದಿನ ಪಂದ್ಯದಲ್ಲಿ ಭಾರತ ಎ ತಂಡದ ನಾಯಕರಾಗಿ ಮೈದಾನಕ್ಕೆ ಬಂದಿದ್ದಾರೆ.
ವಿಷೇಶ ಜರ್ಸಿ
ಪಂತ್ ವಿರಾಟ್ ಕೊಹ್ಲಿಯ 18 ನಂಬರ್ ಜೆರ್ಸಿ ಧರಿಸಿ ಮೈದಾನಕ್ಕೆ ಇಳಿದಿದ್ದು, ಸದ್ಯ 18 ನೇ ನಂಬರ್ ಜೆರ್ಸಿ ದಿನದ ಚರ್ಚಾಸ್ಪದ ವಿಷಯವಾಯಿತು. ಅಭಿಮಾನಿಗಳು 18 ನಂಬರ್ ಅನ್ನು ಕೊಹ್ಲಿ ಪರಂಪರೆಯ ಸಂಕೇತವೆಂದು ಪರಿಗಣಿಸಿದ್ದಾರೆ. ಕೊಹ್ಲಿ ಟೆಸ್ಟ್ ನಿವೃತ್ತಿಯ ನಂತರ ಕೂಡ ಈ ಸಂಖ್ಯೆಯನ್ನು ಧರಿಸಿದ ಆಟಗಾರರು ಕೆಲವರು ಇದ್ದಾರೆ,
ಇದನ್ನುಓದಿ : ಪಂಚಾಯತ್ ಲೈಬ್ರೆರಿಯನ್ ಆತ್ಮಹತ್ಯೆ ಕೇಸ್ – PDO ಅಮಾನತು
ಪಂತ್ ಗಾಯ ಮತ್ತು ಚೇತರಿಕೆ
ರಿಷಬ್ ಪಂತ್ ಜುಲೈ ಅಂತ್ಯದಲ್ಲಿ ಇಂಗ್ಲೆಂಡ್ ಪ್ರವಾಸದ 4ನೇ ಟೆಸ್ಟ್ ವೇಳೆ ಪಾದದ ಮೂಳೆ ಮುರಿತಗೊಂಡಿದ್ದರು. ಶಸ್ತ್ರಚಿಕಿತ್ಸೆ ಇಲ್ಲದೆ ಚೇತರಿಕೆ ಕಂಡು, ಅವರು ಈಗ ಫಿಟ್ ಆಗಿ ಭಾರತದ ಆರ್ಥಿಕ ಶ್ರೇಷ್ಟತೆಯ ಎ ತಂಡದ ಪಂದ್ಯಗಳಿಗೆ ತಯಾರಾಗಿದ್ದಾರೆ.
ಸರಣಿಯ ಪ್ರಾಮುಖತೆ
ಈ ಸರಣಿಯ 2 ಪಂದ್ಯಗಳು ಪಂತ್ಗೆ ಪ್ರಮುಖವಾಗಿವೆ, ಏಕೆಂದರೆ ಅವರು ಏಷ್ಯಾಕಪ್, ವಿಂಡೀಸ್ ವಿರುದ್ಧದ ಸರಣಿ ಮತ್ತು ಆಸೀಸ್ ಪ್ರವಾಸ ತಪ್ಪಿಸಿಕೊಂಡಿದ್ದಾರೆ. ಈ ತಂಡ ಮತ್ತು ಪಂದ್ಯಗಳು ಪಂತ್ಗೆ ಫಿಟ್ ಆಗಿ ಹಿಂತಿರುಗಲು ಮಹತ್ವವುಳ್ಳದ್ದು.
ಇದನ್ನು ನೋಡಿ : ಕೊಹ್ಲಿಯ 18ನೇ ನಂಬರ್ ಜೆರ್ಸಿ ಧರಿಸಿ ಆಡಲಿಳಿದ ಪಂತ್




