Nelamangala Pdo Suspend : ಕೆಲಸ ಹಾಗೂ ಸಂಬಳದ ವಿಚಾರದಲ್ಲಿ ನೀಡುತ್ತಿದ್ದ ಕಿರುಕುಳಕ್ಕೆ ಮನನೊಂದು ಪಂಚಾಯತ್ ಲೈಬ್ರೆರಿಯನ್ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ PDO ಗೀತಾಮಣಿಯನ್ನು ಅಮಾನತು ಮಾಡಲಾಗಿದೆ.

Nelamangala Pdo Suspend : ನೆಲಮಂಗಲ ತಾಲ್ಲೂಕಿನ ಕಳಲುಘಟ್ಟ ಗ್ರಾಮ ಪಂಚಾಯತ್ ಲೈಬ್ರೆರಿಯನ್ ರಾಮಚಂದ್ರಯ್ಯ ತಮ್ಮ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ಮೂರು ತಿಂಗಳಿಂದ ಅವರಿಗೆ ಸಂಬಳನೀಡದೆ PDO ಗೀತಾಮಣಿ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ.
PDO ವಿರುದ್ಧ ದೂರು
ರಾಮಚಂದ್ರಯ್ಯ ಅವರ ಅಣ್ಣನ ಮಗ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪಿಡಿಓ ವಿರುದ್ಧ ದೂರು ಸಲ್ಲಿಸಿದ್ದರು. ದೂರು ಪ್ರಕಾರ, ಲೈಬ್ರೆರಿಯನ್ ಬಯೋಮೆಟ್ರಿಕ್ ಹಾಜರಾತಿ ಹಾಕದೇ, ಹಾಜರಾತಿಯ ಗ್ಯಾಪ್ ಅಥವಾ ಇಲ್ಲಸಲ್ಲದ ಕಾರಣ ತೋರಿಸಿ ಕಿರುಕುಳಕ್ಕೆ ಒಳಗಾಗುತ್ತಿದ್ದನು.
ಇದನ್ನು ಓದಿ : ವಾಹನ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತದಿಂದ ಚಾಲಕ ಸಾವು
ಅಧಿಕಾರಿಗಳ ಕ್ರಮ
ಈ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅನುರಾಧ ಕೆ.ಎಸ್ ಅವರು ಪಿಡಿಓ ಗೀತಾಮಣಿಯನ್ನು ಅಮಾನತು ಮಾಡುವ ಆದೇಶ ಹೊರಡಿಸಿದ್ದಾರೆ.
FIR ದಾಖಲೆ
ಇನ್ನು ಪಿಡಿಓ ವಿರುದ್ಧ ದೂರು ದಾಖಲಾದ ಕೂಡಲೇ ಎಫ್ಐಆರ್ (FIR) ದಾಖಲಾಗಿದ್ದು, ಮುಂದುವರಿದ ತನಿಖೆ ಆರಂಭಿಸಲಾಗಿದೆ.
ಇದನ್ನು ನೋಡಿ : ಲೈಬ್ರೆರಿಯನ್ ಆತ್ಮಹತ್ಯೆ ಕೇಸ್ – PDO ಅಮಾನತು




