BBK 12 : ದೊಡ್ಮನೆಯಲ್ಲಿ ಹೊಸ ಹೊಸ ಟಾಸ್ಕ್ಗಳನ್ನು ಕೊಡಲಾಗುತ್ತಿದೆ. ಬಿಗ್ಬಾಸ್ನಿಂದ ಈ ವಾರ ಹೊರ ಹೋಗಲಿರುವ ಸ್ಪರ್ಧಿಗಳ ಲಿಸ್ಟ್ ಘೋಷಣೆ ಮಾಡಲಾಗಿದೆ.

BBK 12 : ಬಿಗ್ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಡ್ರಾಮಾ ಹೆಚ್ಚುತ್ತಲೇ ಇದೆ. ಈ ವಾರ ಹೊಸ ಟಾಸ್ಕ್ಗಳ ಜೊತೆಗೆ ಬಿಗ್ಬಾಸ್ 8 ಮಂದಿಯನ್ನು ನಾಮಿನೇಟ್ ಮಾಡಿದ್ದು, ಮನೆಯಲ್ಲಿ ಸ್ಪರ್ಧಿಗಳ ಎದೆ ಢವ…ಢವ ಎನ್ನುತ್ತಿದೆ. ನಾಮಿನೇಷನ್ನ ಒತ್ತಡದ ನಡುವೆ ಈಗ ಗಿಲ್ಲಿ ಮತ್ತು ವೈಲ್ಡ್ಕಾರ್ಡ್ ಎಂಟ್ರಿ ರಿಷಾ ಗೌಡ ನಡುವೆ ಭಾರಿ ವಾಕ್ಸಮರ ನಡೆದಿದೆ.
ಸ್ಪರ್ಧಿಗಳೆಲ್ಲಾ ಬೆಡ್ ಮೇಲೆ ಇರುವಾಗ ರಿಷಾ ಗೌಡ ಹಾಗೂ ಗಿಲ್ಲಿ ನಡುವೆ ವಾಕ್ಸಮರ ನಡೆದಿದೆ. ಕಾವ್ಯ ಒಂದು ಸಾರಿ ಜಗಳ ಆಡಿದರೆ ಲೈಫ್ನಲ್ಲಿ ಮತ್ತೆ ಮಾತನಾಡಲ್ಲ. ಕಾವ್ಯಗೆ ಬೇಡ ಅಂದರೆ ಬೇಡ, ಬೇಕು ಅಂದರೆ ಬೇಕು ಅಷ್ಟೇ ಎಂದು ಚಂದ್ರಪ್ರಭ ಬಳಿ ಕುಳಿತು ಗಿಲ್ಲಿ ನಟ ಹೇಳುತ್ತಿದ್ದನು. ಗಿಲ್ಲಿ ಮಾತಿಗೆ ಕಾವ್ಯ ನಗುತ್ತಿದ್ದಳು.
ಇದನ್ನು ಓದಿ : ಪರಮಾತ್ಮ ಪುನೀತ್ ರಾಜ್ಕುಮಾರ್ ಅಗಲಿ ಇಂದಿಗೆ 4 ವರ್ಷ

ಆದರೆ ಇದೇ ವೇಳೆ ಇನ್ನೊಂದು ಬೆಡ್ ಮೇಲೆ ಇದ್ದ ವೈಲ್ಡ್ಕಾರ್ಡ್ ಕಂಟೆಸ್ಟೆಂಟ್ ರಿಷಾ, ಗಿಲ್ಲಿ ನೀನು ಕಾವ್ಯಗೆ ಬಕೆಟ್ ಹಿಡಿಯುತ್ತಿದ್ದೀಯಾ? ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಕೋಪಗೊಂಡ ಗಿಲ್ಲಿ, “ನೀನೇ ಎಲ್ಲರಿಗೂ ಬಕೆಟ್ ಹಿಡಿಯುತ್ತಿದ್ದೀಯಾ” ಎಂದು ಟಕ್ಕರ್ ಕೊಟ್ಟಿದ್ದಾರೆ.
ಇದ್ದಕ್ಕಿದ್ದಂತೆ ಫುಲ್ ಗರಂ ಆದ ರಿಷಾ ಜೋರು ಧ್ವನಿಯಲ್ಲಿ “ನಿನ್ನ ಹತ್ರ ನಾನು ಅನಿಸಿಕೊಳ್ಳಲ್ಲ ಗಿಲ್ಲಿ. ಬಂದಾಗಿಂದಲೇ ಕಾವ್ಯ..ಕಾವ್ಯ..ಕಾವ್ಯ ಅಂತನೇ ಇರ್ತೀಯಾ!” ಎಂದು ಜೋರಾಗಿ ಕಿರುಚಿದ್ದಾರೆ. ನನ್ನ ಹತ್ರ ನೀನು ಕಾಲು ಎಳೆಯಬೇಡ. ನೀನು ಫ್ರೀ ಪ್ರಾಡೆಕ್ಟ್ ಎಂದು ಗಿಲ್ಲಿ ನಟನಿಗೆ ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಮಲ್ಲಯುದ್ಧ ತಾರಕಕ್ಕೇರಿದ್ದು, ನೀನು ಬಕೆಟ್ ಎಂದಿದ್ದಕ್ಕೆ, ನೀನು ಡ್ರಮ್ ಎಂದು ಗಿಲ್ಲಿ ಬಿಗ್ ಆನ್ಸರ್ ಮಾಡಿದ್ದಾರೆ.

ಇದನ್ನು ನೋಡಿ : ಕುಣಿಗಲ್ ತಹಶೀಲ್ದಾರ್ ವಿರುದ್ಧ ಶಿಸ್ತು ಕ್ರಮ ಮಾಹಿತಿ ನೀಡದ ಹಿನ್ನೆಲೆ ಇಲಾಖೆಯಿಂದ ಕ್ರಮ




