Chittapur RSS Rally Permission : ರಾಜ್ಯದ ವಿವಿಧ ಭಾಗಗಳಲ್ಲಿ ಆರ್ಎಸ್ಎಸ್ (RSS) ಪಥಸಂಚಲನಗಳು ಶಾಂತಿಯುತವಾಗಿ ನಡೆದಿದ್ದರೂ, ಚಿತ್ತಾಪುರ ಕ್ಷೇತ್ರದಲ್ಲಿ ಮಾತ್ರ ವಿವಾದ ಮುಂದುವರಿದಿದೆ.

ಚಿತ್ತಾಪುರ (ಕಲಬುರಗಿ): ರಾಜ್ಯದ ವಿವಿಧ ಭಾಗಗಳಲ್ಲಿ ಆರ್ಎಸ್ಎಸ್ (RSS) ಪಥಸಂಚಲನಗಳು ಶಾಂತಿಯುತವಾಗಿ ನಡೆದಿದ್ದರೂ, ಚಿತ್ತಾಪುರ ಕ್ಷೇತ್ರದಲ್ಲಿ ಮಾತ್ರ ವಿವಾದ ಮುಂದುವರಿದಿದೆ.
ಸಚಿವ ಪ್ರಿಯಾಂಕ್ ಖರ್ಗೆಯ ಕ್ಷೇತ್ರವಾಗಿರುವ ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಅನುಮತಿ ಸಿಗುತ್ತದೆಯೇ ಎಂಬುದು ಇವತ್ತಿನ ಪ್ರಮುಖ ಕುತೂಹಲವಾಗಿದೆ.
RSS ಶತಮಾನೋತ್ಸವ ಪಥಸಂಚಲನಕ್ಕೆ ತಯಾರಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಸ್ಥಾಪನೆಯಾಗಿ 100 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಶತಮಾನೋತ್ಸವ ಪಥಸಂಚಲನಗಳು ನಡೆಯುತ್ತಿವೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಪಥಸಂಚಲನಗಳು ಯಶಸ್ವಿಯಾಗಿ ಮುಗಿದಿವೆ. ಆದರೆ ಚಿತ್ತಾಪುರದಲ್ಲಿ ಮಾತ್ರ ಈ ಕಾರ್ಯಕ್ರಮ ಕಾನೂನು ಸವಾಲಿನ ಕಣವಾಗಿದೆ.
ಪಥಸಂಚಲನ ವಿಚಾರ ಹೈಕೋರ್ಟ್ ಕಟಕಟೆಯಲ್ಲೇ
ಚಿತ್ತಾಪುರದಲ್ಲಿ ನವೆಂಬರ್ 2ರಂದು ಪಥಸಂಚಲನ ನಡೆಸಲು ಆರ್ಎಸ್ಎಸ್ ಕೋರ್ಟ್ ಮೊರೆ ಹೋಗಿದೆ. ಅದೇ ದಿನ ಭೀಮ್ ಆರ್ಮಿ ಸೇರಿದಂತೆ 10 ಸಂಘಟನೆಗಳು ಪ್ರತಿಭಟನೆಗೆ ಅರ್ಜಿ ಸಲ್ಲಿಸಿರುವುದರಿಂದ ಪರಿಸ್ಥಿತಿ ಕಗ್ಗಂಟಾಗಿದೆ. ಹೀಗಾಗಿ ಹೈಕೋರ್ಟ್, ಶಾಂತಿ ಸಭೆ ನಡೆಸಿ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು.
MUST READ : Tunnel Road Controversy : DCM D.K ಶಿವಕುಮಾರ್ ಭೇಟಿಯಾದ ಸಂಸದ ತೇಜಸ್ವಿ ಸೂರ್ಯ

ಇಂದು ಬೆಳಗ್ಗೆ 11.30ಕ್ಕೆ ಶಾಂತಿ ಸಭೆ
ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಬೆಳಗ್ಗೆ 11.30ಕ್ಕೆ ಶಾಂತಿ ಸಭೆ ನಡೆಯಲಿದೆ. ಆರ್ಎಸ್ಎಸ್ ಸೇರಿದಂತೆ ಎಲ್ಲ ಸಂಘಟನೆಗಳಿಗೂ ಜಿಲ್ಲಾಡಳಿತದಿಂದ ನೋಟಿಸ್ ನೀಡಲಾಗಿದೆ.
ಪ್ರತಿ ಸಂಘಟನೆಯಿಂದ ಮೂವರು ಸದಸ್ಯರು ಸಭೆಯಲ್ಲಿ ಹಾಜರಾಗಿ ಲಿಖಿತ ಅಭಿಪ್ರಾಯ ಸಲ್ಲಿಸಬೇಕಾಗಿದೆ.
ಉಮೇಶ್ ಜಾಧವ್ ಮನವಿ ಪತ್ರ
ಬಿಜೆಪಿಯ ಮಾಜಿ ಸಂಸದ ಉಮೇಶ್ ಜಾಧವ್ ಅವರು ಪಥಸಂಚಲನಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಪಥಸಂಚಲನ ಶಾಂತಿಯುತವಾಗಿ ನಡೆಯಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ.
ಕೋರ್ಟ್ ತೀರ್ಪಿನತ್ತ ಎಲ್ಲರ ಗಮನ
ಚಿತ್ತಾಪುರ ಸಚಿವ ಪ್ರಿಯಾಂಕ್ ಖರ್ಗೆಯ ಕ್ಷೇತ್ರವಾಗಿರುವುದರಿಂದ ಈ ವಿಷಯ ಈಗ ರಾಜಕೀಯ ಪ್ರತಿಷ್ಠೆಯ ಹಂತಕ್ಕೇರಿದೆ. ಇಂದಿನ ಶಾಂತಿ ಸಭೆಯ ನಂತರ ಜಿಲ್ಲಾಡಳಿತ ಕೋರ್ಟ್ಗೆ ವರದಿ ಸಲ್ಲಿಸಲಿದ್ದು, ಪಥಸಂಚಲನದ ಬಗ್ಗೆ ಅಂತಿಮ ತೀರ್ಪು ಏನಾಗಲಿದೆ ಎಂಬುದರತ್ತ ರಾಜ್ಯದ ರಾಜಕೀಯ ವಲಯದ ಗಮನ ನೆಟ್ಟಿದೆ.
MUST READ : Congress Leaders Clash: ಸಿದ್ದರಾಮಯ್ಯ ಅನಿವಾರ್ಯವೇ? ಬೆಂಬಲಿಗರೇ ಭಿನ್ನ ಧ್ವನಿ ಎತ್ತಿದ ಮಹದೇವಪ್ಪ–ರಾಜಣ್ಣ




