Suicide : ಇಬ್ಬರು ಮಕ್ಕಳೊಂದಿಗೆ ತಾಯಿ ನೇಣಿಗೆ ಶರಣಾದ ಘಟನೆ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ನಡೆದಿದೆ.

Suicide : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ನಡೆದ ದುರ್ಘಟನೆಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತರನ್ನು ಲಕ್ಷ್ಮವ್ವ ಹನುಮಪ್ಪ ಭಜಂತ್ರಿ (30), ಮಕ್ಕಳು ರಮೇಶ್ (4) ಮತ್ತು ಜಾನ್ವಿ (2) ಎಂದು ಗುರುತಿಸಲಾಗಿದೆ. ಮನೆಯ ಒಳಗೆ ಮೂವರ ಶವಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಇನ್ನು ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದ್ದು, ಲಕ್ಷ್ಮವ್ವ ಮೊದಲು ತನ್ನಿಬ್ಬರು ಮಕ್ಕಳಿಗೆ ನೇಣು ಹಾಕಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನೆಯ ವೇಳೆ ಲಕ್ಷ್ಮವ್ವರ ಗಂಡ ಹನುಮಂತಪ್ಪ ಹಾಗೂ ಅತ್ತೆ ಕೆಲಸಕ್ಕೆ ತೆರಳಿದ್ದರು. ಅವರು ಮನೆಗೆ ಮರಳಿದಾಗ ಈ ದುರ್ಘಟನೆ ಪತ್ತೆಯಾಗಿದೆ.
ಇದನ್ನು ಓದಿ : ರಾಜ್ಯದ ಪೊಲೀಸರಿಗೆ ಇಂದಿನಿಂದ P-CAP ಭಾಗ್ಯ

ಲಕ್ಷ್ಮವ್ವ ಕೂಲಿ ಕಾರ್ಮಿಕೆಯಾಗಿದ್ದು, ಗಂಡ ಹನುಮಂತಪ್ಪ ಕಟ್ಟಡ ಕಾರ್ಮಿಕನಾಗಿದ್ದಾನೆ. ಇವರ ವಿವಾಹ 2016ರಲ್ಲಿ ನಡೆದಿತ್ತು. ಹನುಮಂತಪ್ಪ ಮೂಲತಃ ಕೊಪ್ಪಳ ತಾಲೂಕಿನ ಕರ್ಕಿಹಳ್ಳಿ ಗ್ರಾಮದವರಾಗಿದ್ದು, ಪತ್ನಿಯ ಮನೆಯಲ್ಲೇ ವಾಸಿಸುತ್ತಿದ್ದರು.
ಇನ್ನು ಮೃತ ಮಹಿಳೆಯ ಕೈ ಬಳೆಯಲ್ಲಿ ಚೀಟಿಯೊಂದು ಪತ್ತೆಯಾಗಿದ್ದು, ಸಾವಿಗೆ ಕಾರಣ ಬರೆದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಕೊಪ್ಪಳ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ನೋಡಿ : ಸಾವಿಗಾಗಿ ಕಾದು ಕೂತಿದೆ SARASWATHI PURAM BUS STOP – ಜೀವಭಯದಲ್ಲಿ ಪ್ರಯಾಣಿಕರು




