Chitradurga : ರಾಜ್ಯದ್ಯಂತ ಕೊಂಚ ಬಿಡುವು ನೀಡಿದ್ದ ಮಳೆರಾಯ, ಮತ್ತೆ ಆರ್ಭಟಿಸುತ್ತಿದ್ದಾನೆ.

Chitradurga : ರಾಜ್ಯದ್ಯಂತ ಕೊಂಚ ಬಿಡುವು ನೀಡಿದ್ದ ಮಳೆರಾಯ, ಮತ್ತೆ ಆರ್ಭಟಿಸುತ್ತಿದ್ದಾನೆ. ಮಳೆಯಿಂದಾ̧ಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿ ಇರೋ ಪ್ರಸಿದ್ದ ವಾಣಿವಿಲಾಸ ಜಲಾಶಯ ವರ್ಷದಲ್ಲಿ ಎರಡನೇ ಬಾರಿಗೆ ಕೋಡಿ ಬಿದ್ದಿದ್ದು, ಇದನ್ನು ನೋಡಲು ಜನಸಾಗರವೇ ಹರಿದು ಬರ್ತಿದೆ.
1907 ರಲ್ಲಿ ನಿರ್ಮಾಣವಾದ ಈ ಡ್ಯಾಮ್ ಇತಿಹಾಸದಲ್ಲೇ ನಾಲ್ಕನೇ ಬಾರಿ ಸಂಪೂರ್ಣವಾಗಿ ಜಲಾಶಯ ತುಂಬಿ ಕೋಡಿ ಬಿದ್ದಿದ್ದು, ಇದೊಂದು ಅಪರೂಪದ ಕ್ಷಣವಾಗಿದೆ. ಇತ್ತ ಡ್ಯಾಂ ನೋಡಲು ಜನರು ಬರ್ತಿದ್ದಾರೆ.
ಇದನ್ನು ಓದಿ : ಕರ್ನಾಟಕಕ್ಕೂ ಮೋಂತಾ ಚಂಡಮಾರುತ ಎಫೆಕ್ಟ್

ಇನ್ನು ಯುವಕನೋರ್ವ ಡ್ಯಾಂ ನೋಡುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ಕೂಡಲೇ ಆತನನ್ನ ಪ್ರವಾಸಿಗರು ರಕ್ಷಿಸಿದ್ದಾರೆ. ಈ ವಿಡಿಯೋ ಪ್ರವಾಸಿಗರ ಮೊಬೈಲ್ ಪೋನ್ ಚಿತ್ರೀಕರಿಸಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಸಾರ್ವಜನಿಕರು ಡ್ಯಾಂ ಹತ್ತಿರ ಹೋಗದಂತೆ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಬೇಕೆಂದು ಪೊಲೀಸರು ಕಟ್ಟೆಚ್ಚರಿಕೆ ನೀಡಿದ್ದಾರೆ.

ಇದನ್ನು ನೋಡಿ : ಜಿ.ಹೊಸಹಳ್ಳಿ ಬಳಿ ಟೋಲ್ ನಿರ್ಮಾಣ ಬೃಹತ್ ಪ್ರತಿಭಟನೆಗೆ ರೈತರು ಸಜ್ಜು




