Parameshwar : ಕೆ.ಹೆಚ್ ಮುನಿಯಪ್ಪ ಸಿಎಂ ಆದರೆ ನಾನೂ ಸಂತೋಷ ಪಡ್ತೇನೆ ಅಂತಾ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಕೆ.ಹೆಚ್. ಮುನಿಯಪ್ಪರ (KH Muniyappa) ಸಿಎಂ ಆಗುವ ಸಾಧ್ಯತೆ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನಿನ್ನೆ ಶಿವಮೊಗ್ಗದಲ್ಲಿ (Shivamogga) ಮುನಿಯಪ್ಪ ಪರ ಕಾರ್ಯಕರ್ತರು ಸಿಎಂ ಘೋಷಣೆ ಕೂಗಿದ ಘಟನೆಗೆ ಪ್ರತಿಕ್ರಿಯಿಸುತ್ತಾ, ಪರಮೇಶ್ವರ್ ಹೇಳಿದರು, “ನಮ್ಮ ಪಕ್ಷದಲ್ಲಿ ಕೆ.ಹೆಚ್. ಮುನಿಯಪ್ಪರು ಹಿರಿಯ ನಾಯಕರು. ಅವರು ಸಮರ್ಥರು ಮತ್ತು ತುಳಿತಕ್ಕೆ ಒಳಗಾಗಿರುವ ಸಮುದಾಯದಿಂದ ಬಂದವರು.
ಇದನ್ನು ನೋಡಿ : ಇದು ಪ್ರಜಾಶಕ್ತಿ ಟಿವಿಯ BIG IMPACT ಸಾವಿನ ದಾರಿಯಾಗಿದ್ದ ಗಿಡ ಗಂಟೆ ತೆರವು
ಮುನಿಯಪ್ಪ ಸಿಎಂ ಆದರೆ ತಪ್ಪೇನು? ನನಗೂ ಸಂತೋಷವಾಗುತ್ತದೆ. ಆದರೆ ಸಿಎಂ ಆಯ್ಕೆ ಕುರಿತು ಹೈಕಮಾಂಡ್ ನಿರ್ಧಾರ ಮಾಡಬೇಕು. ಪ್ರಸ್ತುತ ಬಿಹಾರ ಚುನಾವಣೆಯಲ್ಲಿ ಹೈಕಮಾಂಡ್ ಬ್ಯುಸಿ ಇದೆ” ಎಂದು ಹೇಳಿದರು.

ಇದನ್ನು ಓದಿ : ಸೋಫಿ ಡಿವೈನ್ ಏಕದಿನ ಕ್ರಿಕೆಟ್ಗೆ ವಿದಾಯ!
ನವೆಂಬರ್ ಕ್ರಾಂತಿ ಬಗ್ಗೆ ಗೊತ್ತಿಲ್ಲ
ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಗೃಹ ಸಚಿವರು, ನವೆಂಬರ್-ಡಿಸೆಂಬರ್ ಕ್ರಾಂತಿ ಬಗ್ಗೆ ನನಗೆ ಗೊತ್ತಿಲ್ಲ.
ಹೈಕಮಾಂಡ್ ಏನು ತೀರ್ಮಾನ ಮಾಡುತ್ತೊ ಗೊತ್ತಿಲ್ಲ. ಏನೇ ಇದ್ದರೂ ಹೈಕಮಾಂಡ್ ನಿರ್ಧಾರವೇ ಅಂತಿಮ. ಸಂಪುಟ ಪುನಾರಚನೆ, ಎರಡೂವರೆ ವರ್ಷದ ನಂತರ ಅಧಿಕಾರ ಬದಲಾವಣೆಯೋ ಬಗ್ಗೆ ಹೈಕಮಾಂಡ್ನವ್ರು ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.




