
ACTOR ROBO SHANKAR : ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ರೋಬೋ ಶಂಕರ್ (Robo Shankar) ವಿಧಿವಶರಾಗಿದ್ದಾರೆ. ನಿನ್ನೆ ಶೂಟಿಂಗ್ ಸೆಟ್ನಲ್ಲಿ ಕೆಲಸದಲ್ಲಿ ತೊಡಗಿದ್ದಾಗ ದಿಢೀರನೆ ಕುಸಿದು ಬಿದ್ದ ಶಂಕರ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ, ಅವರು ಇಂ ದು (ಸೆಪ್ಟೆಂಬರ್ 19) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
46 ವರ್ಷದ ರೋಬೋ ಶಂಕರ್ ಹಾಸ್ಯಭರಿತ ಅಭಿನಯ ಹಾಗೂ ಮಿಮಿಕ್ರಿ ಕೌಶಲ್ಯದಿಂದ ತಮಿಳು ಚಿತ್ರ ರಂಗದಲ್ಲಿ ತಮ್ಮದೇ ಆದ ಛಾಪು ಬೀರುವಲ್ಲಿ ಯಶಸ್ವಿ ಯಾಗಿದ್ದರು. ಕಲಕ್ಕಪ್ಪ ಪೋವದು ಯಾರು (Kal akka Povathu Yaaru) ಎಂಬ ಟಿವಿ ಕಾರ್ಯಕ್ರಮದಿಂದ ದೊಡ್ಡ ಹಿಟ್ ಆಗಿದ್ದರು.
ಖ್ಯಾತ ಹಾಸ್ಯ ನಟ ರೋಬೋ ಶಂಕರ್ ಜಾಂಡೀಸ್ನಿಂದ ಬಳಲುತ್ತಿದ್ದರು ಎನ್ನ ಲಾಗ್ತಿದೆ. ಸಿನಿಮಾ ಚಿತ್ರೀ ಕರಣದಲ್ಲಿದ್ದಾಗ ರಕ್ತದೊತ್ತಡದಲ್ಲಿ ಏರುಪೇರು ಉಂಟಾ ಗಿತ್ತು. ಶಂಕರ್ ದಿಢೀರನೇ ಕುಸಿದು ಬಿದ್ದಿದ್ದಾರೆ. ತಕ್ಷಣ ಚಿತ್ರತಂಡ ಅವರನ್ನು ವೈದ್ಯ ಕೀಯ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಅವರ ಸ್ಥಿತಿ ಗಂಭೀರವಾ ಗಿದ್ದರಿಂದ ಐಸಿಯುಗೆ ಶಿಫ್ಟ್ ಮಾಡಿದ್ದರು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿಯೇ ಕೊನೆಯು ಸಿರೆಳೆದಿದ್ದಾರೆ.
ವಿಜಯ್ ಸೇತುಪತಿಯವರ ಇದರ್ಕುತ್ತಾನ್ ಆಸೆಪಟ್ಟೈ ಬಾಲಕುಮಾರ್, ಮಾರಿ, ಅನ್ನಾತ್ತೆ, ಮತ್ತು ಹಲವು ಚಿತ್ರಗಳಲ್ಲಿ ಶಂಕರ್ ಅಭಿನಯಿಸಿದ್ದರು. ರೋಬೋ ಶಂಕರ್ ನಿಧನಕ್ಕೆ ಅಭಿಮಾನಿಗಳು ಮತ್ತು ಕುಟುಂಬ ಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ.





