BENGALURU : ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮತ್ತು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಮಧ್ಯೆ ಮಾತಿನ ಯುದ್ಧ ತಾರಕಕ್ಕೇರಿದ್ದು, ಕುಮಾರಸ್ವಾಮಿಯನ್ನು ಬಹಿರಂಗವಾಗಿ ಡಿಕೆ ಶಿವಕುಮಾರ್ ಚರ್ಚೆಗೆ ಆಹ್ವಾನಿಸಿದ್ದಾರೆ.

BENGALURU : ರಾಜ್ಯ ರಾಜಕೀಯದಲ್ಲಿ ಮತ್ತೊಮ್ಮೆ ವಾಗ್ಯುದ್ಧ ತಾರಕಕ್ಕೇರಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಡುವೆ ಮಾತಿನ ಕದನ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ಇದನ್ನೂ ಓದಿ : Rishab Shetty : ಕಾಂತಾರ 1 ಸಿನಿಮಾ ಯಶಸ್ಸಿನ ಬಳಿಕ ದೀಪಾವಳಿ ಸೆಲೆಬ್ರೆಟ್ ಮಾಡಿದ ರಿಷಬ್ ಶೆಟ್ಟಿ ದಂಪತಿ
ಕುಮಾರಸ್ವಾಮಿಯ ವಿರುದ್ಧ ಡಿಕೆ ಶಿವಕುಮಾರ್ “ನನ್ನ ಹುಳುಕು ಏನಿದೆ ಬಿಚ್ಚಿಡು, ನಿನ್ನದನ್ನು ನಾನು ಬಿಚ್ಚಿಡುತ್ತೇನೆ. ಅಂತಿಮವಾಗಿ ಅದನ್ನು ಜನ ತೀರ್ಮಾನ ಮಾಡುತ್ತಾರೆ,” ಎಂದು ನೇರವಾಗಿ ಸವಾಲು ಹಾಕಿದ್ದಾರೆ. ಇದರೊಂದಿಗೆ, ಡಿಕೆಶಿ ಕುಮಾರಸ್ವಾಮಿಯನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ಇಬ್ಬರ ನಡುವಿನ ವಾಗ್ಯುದ್ಧದಿಂದ ರಾಜ್ಯದ ರಾಜಕೀಯ ವಾತಾವರಣ ಮತ್ತಷ್ಟು ಕಾವುಗೊಂಡಿದೆ.
MUST WATCH : ಅಮೆರಿಕಾದಲ್ಲಿ ಇದ್ದುಕೊಂಡೇ ಹುಟ್ಟೂರಿನ ಜನರ ಸೇವೆಗೆ ನಿಂತ ಕರುಣಾಮಯಿ | SIRA NEWS |




