RISHAB SHETTY : ಕಾಂತಾರ’ ಚಿತ್ರ ಬಾಕ್ಸಾಫೀಸ್ನಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಸಾವಿರ ಕೋಟಿ ಕಲೆಕ್ಷನ್ ಗಡಿ ತಲುಪುವ ದಾರಿಯಲ್ಲಿದೆ. ದಸರಾದಿಂದ ದೀಪಾವಳಿವರೆಗೂ ಬಿರುಸಿನ ಪ್ರಚಾರದಲ್ಲಿ ಭಾಗಿಯಾಗಿದ್ದ ರಿಷಬ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಇದೀಗ ವೈಯಕ್ತಿಕ ಸಂಭ್ರಮಕ್ಕೆ ದೀಪಾವಳಿ ಹಬ್ಬದ ದಿನ ಬ್ರೇಕ್ ತೆಗೆದುಕೊಂಡಿದ್ದಾರೆ.

RISHAB SHETTY :‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಈಗ ಸಾವಿರ ಕೋಟಿ ಸಂಗ್ರಹದ ಗಡಿಯತ್ತ ಸಮೀಪಿಸುತ್ತಿದೆ. ಚಿತ್ರ ಯಶಸ್ಸಿನ ಸಂಭ್ರಮದ ನಡುವೆಯೇ ನಟ–ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಶೆಟ್ಟಿ ದೀಪಾವಳಿ ಹಬ್ಬದ ದಿನ ವಿರಾಮ ಪಡೆದು ಕುಟುಂಬದೊಂದಿಗೆ ಹಬ್ಬ ಆಚರಿಸಿದ್ದಾರೆ.
ಇದನ್ನೂ ಓದಿ : Cricket : ರೋಹಿತ್ ಶರ್ಮಾ ಭರ್ಜರಿ ಶತಕ –ಕೊಹ್ಲಿಯ ದಾಖಲೆ ಸರಿಗಟ್ಟಿದ ಹಿಟ್ಮ್ಯಾನ್!
ಕುಂದಾಪುರದ ಕೆರಾಡಿಯ ತಮ್ಮ ನಿವಾಸದಲ್ಲಿ ರಿಷಬ್ ಶೆಟ್ಟಿ ದಂಪತಿ ಅದ್ದೂರಿಯಾಗಿ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ. ಕರಾವಳಿ ಭಾಗದ ಸಂಪ್ರದಾಯದಂತೆ, ಆಯುಧ ಪೂಜೆ ನೆರವೇರಿಸಿ ಮನೆಯ ಅಂಗಳದಲ್ಲಿ ಸಾಲು ಸಾಲು ವಾಹನಗಳಿಗೆ ಪೂಜೆ ಸಲ್ಲಿಸಿದ್ದು, ತುಳಸಿಕಟ್ಟೆ ಪೂಜೆ, ಪಟಾಕಿ ಸಿಡಿಸುವ ಸಂಭ್ರಮ ಹಾಗೂ ಮಕ್ಕಳ ಜೊತೆ ಸಮಯ ಕಳೆದಿದ್ದಾರೆ. ಇನ್ನು ಈ ಪೋಟೋಗಳನ್ನ ತಡವಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದು, “ಬೆಳಕಿನ ಈ ಹಬ್ಬ ಪ್ರೀತಿ ಹಂಚುವ ಸುಂದರ ಕ್ಷಣಗಳು” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ‘ಕಾಂತಾರ’ ಯಶಸ್ಸಿನ ನಂತರ ಈ ಬಾರಿ ರಿಷಬ್ ಶೆಟ್ಟಿ ದೀಪಾವಳಿ ಆಚರಣೆ ಸ್ವಲ್ಪ ಹೆಚ್ಚಾಗೇ ಅದ್ಧೂರಿಯಾಗಿ ನಡೆದಂತಿದೆ.
MUST WATCH : ಜಯಚಂದ್ರರಿಗೆ ಸಚಿವ ಸ್ಥಾನ ನೀಡದಿದ್ರೆ ಉಗ್ರ ಹೋರಾಟ ಮಾಡ್ತಿವಿ – ಶಿವು ಚಂಗಾವರ




