CRICKET : ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿಂದು ಮಾಜಿ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಶತಕದೊಂದಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಅಪರೂಪದ ದಾಖಲೆಯೊಂದನ್ನ ಸರಿಗಟ್ಟಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ಅಪರೂಪದ ದಾಖಲೆಯನ್ನೂ ಮುರಿದಿದ್ದಾರೆ.

CRICKET :ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತೀಯ ಮಾಜಿ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿ ಮತ್ತೆ ತನ್ನ “ಹಿಟ್ಮ್ಯಾನ್” ಶೈಲಿಯನ್ನು ಮೆರೆದಿದ್ದಾರೆ.
ಹೌದು ಪಂದ್ಯದಲ್ಲಿ ಕೊನೆಯವರೆಗೂ ಅಜೇಯವಾಗಿ ಬ್ಯಾಟಿಂಗ್ ನಡೆಸಿದ ಶರ್ಮಾ, 125 ಎಸೆತಗಳಲ್ಲಿ ಅಜೇಯ 121 ರನ್ ಗಳಿಸಿದರು. ಈ ಶತಕದೊಂದಿಗೆ ಅವರು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಅಪರೂಪದ ದಾಖಲೆಯೊಂದನ್ನು ಸರಿಗಟ್ಟಿದರು ಮತ್ತು ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದರು.
ಇದನ್ನೂ ಓದಿ : Karawar Weather : ಕರಾವಳಿಯಲ್ಲಿ ಗುಡುಗು ಸಹಿತ ಮಳೆ ಆರ್ಭಟ..!
ಈ ಶತಕದೊಂದಿಗೆ ರೋಹಿತ್ ಶರ್ಮಾ ಈಗ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ 9 ಶತಕ ಸಿಡಿಸಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸಮಮಟ್ಟಕ್ಕೆ ತಂದಿದ್ದಾರೆ. ಅದೇ ವೇಳೆ, ಆಸೀಸ್ ವಿರುದ್ಧ 8 ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ದಾಟಿದ್ದಾರೆ. ಇನ್ನು ಕೊಹ್ಲಿ ತಮ್ಮ 8 ಶತಕಗಳನ್ನು 51 ಇನ್ನಿಂಗ್ಸ್ಗಳಲ್ಲಿ ಸಿಡಿಸಿದರೆ, ತೆಂಡೂಲ್ಕರ್ 70 ಇನ್ನಿಂಗ್ಸ್ಗಳಲ್ಲಿ 9 ಶತಕ ಸಿಡಿಸಿದ್ದರು. ಆದರೆ ರೋಹಿತ್ ಶರ್ಮಾ ಕೇವಲ 49 ಇನ್ನಿಂಗ್ಸ್ಗಳಲ್ಲಿ 9 ಶತಕ ಸಿಡಿಸಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.
MUST WATCH : ಅಪಘಾತಗಳ ತಾಣವಾಗ್ತಿದೆ CHADALAPURA FLYOVER – ಅಧಿಕಾರಿಗಳು ಡೋಂಟ್ ಕೇರ್




