Firecracker Accident : ದೀಪಾವಳಿ ಹಬ್ಬದ ಸಂಭ್ರಮದ ಮಧ್ಯೆ ಪಟಾಕಿ ಸಿಡಿಸುವ ವೇಳೆ ನಡೆದ ಅವಘಡಗಳಿಂದ ನೂರಾರು ಮಂದಿ ಗಾಯಗೊಂಡಿದ್ದಾರೆ. ನಗರದಲ್ಲಿ ಕಳೆದ ಎರಡು ದಿನಗಳಲ್ಲಿ 250ಕ್ಕೂ ಹೆಚ್ಚು ಜನರ ಕಣ್ಣಿಗೆ ಹಾನಿ ಉಂಟಾಗಿದೆ

Firecracker Accident ದೀಪಾವಳಿ ಸಂಭ್ರಮದಲ್ಲಿ ದುರ್ಘಟನೆ – ಕೆಲವರಿಗೆ ದೃಷ್ಟಿ ನಷ್ಟ
ಬೆಂಗಳೂರು (Bengaluru Firecracker Accident): ದೀಪಾವಳಿ ಹಬ್ಬದ ಸಂಭ್ರಮದ ಮಧ್ಯೆ ಪಟಾಕಿ ಸಿಡಿಸುವ ವೇಳೆ ನಡೆದ ಅವಘಡಗಳಿಂದ ನೂರಾರು ಮಂದಿ ಗಾಯಗೊಂಡಿದ್ದಾರೆ. ನಗರದಲ್ಲಿ ಕಳೆದ ಎರಡು ದಿನಗಳಲ್ಲಿ 250ಕ್ಕೂ ಹೆಚ್ಚು ಜನರ ಕಣ್ಣಿಗೆ ಹಾನಿ ಉಂಟಾಗಿದೆ.
ಮಿಂಟೋ, ನಾರಾಯಣ ನೇತ್ರಾಲಯ, ಶಂಕರ ಕಣ್ಣಿನ ಆಸ್ಪತ್ರೆ, ಪ್ರಭಾ ಮತ್ತು ಮೋದಿ ಆಸ್ಪತ್ರೆಗಳಲ್ಲಿ ಗಾಯಾಳುಗಳು ದಾಖಲಾಗಿದ್ದು, ಹಲವರಿಗೆ ತೀವ್ರವಾದ ದೃಷ್ಟಿ ಹಾನಿಯುಂಟಾಗಿದೆ.
ಯಾವ ಆಸ್ಪತ್ರೆಯಲ್ಲಿ ಎಷ್ಟು ಕೇಸ್ಗಳು ದಾಖಲು?
- ನಾರಾಯಣ ನೇತ್ರಾಲಯ – 90 ಪ್ರಕರಣಗಳು
- ಮಿಂಟೋ ಕಣ್ಣಿನ ಆಸ್ಪತ್ರೆ – 37 ಪ್ರಕರಣಗಳು
- ಶಂಕರ ಕಣ್ಣಿನ ಆಸ್ಪತ್ರೆ – 35 ಪ್ರಕರಣಗಳು
- ಪ್ರಭಾ ಕಣ್ಣಿನ ಆಸ್ಪತ್ರೆ – 13 ಪ್ರಕರಣಗಳು
- ಮೋದಿ ಆಸ್ಪತ್ರೆ – 3 ಪ್ರಕರಣಗಳು
- ಅಗರ್ವಾಲ್ ಕಣ್ಣಿನ ಆಸ್ಪತ್ರೆ – 4 ಪ್ರಕರಣಗಳು
ಮಿಂಟೋ ಆಸ್ಪತ್ರೆಯ ಅಪಾರ ನಿರ್ದೇಶಕ ಡಾ. ಶಶಿಧರ್ ಹೇಳಿದ್ದಾರೆ:
“37 ಜನರ ಪೈಕಿ 9 ಜನರಿಗೆ ದಾಖಲಾತಿ ಚಿಕಿತ್ಸೆ ನೀಡಲಾಗಿದೆ. 14 ಜನರಿಗೆ ತೀವ್ರ ಗಾಯವಾಗಿದೆ. ಇಬ್ಬರು ರೋಗಿಗಳ ದೃಷ್ಟಿ ನಷ್ಟವಾಗಿದೆ.”
ಕಣ್ಣುಗುಡ್ಡೆ ಒಡೆದು ದೃಷ್ಟಿ ಕಳೆದುಕೊಂಡ ವಿದ್ಯಾರ್ಥಿ
ಅರಸಿಕೇರೆ ಮೂಲದ 14 ವರ್ಷದ ವಿದ್ಯಾರ್ಥಿ, ಸ್ನೇಹಿತರೊಂದಿಗೆ ಪಟಾಕಿ ಸಿಡಿಸುವಾಗ ತೀವ್ರ ಪಟಾಕಿ ಸ್ಫೋಟದಿಂದ ಗಾಯಗೊಂಡಿದ್ದಾನೆ. ಕಾರ್ನಿಯ (cornea) ಒಡೆದು ದೃಷ್ಟಿ ನಷ್ಟವಾಗಿದೆ. ಬಡತನದ ಹಿನ್ನಲೆಯಲ್ಲಿ ತಾಯಿಯೊಂದಿಗೆ ಗಾರೆ ಕೆಲಸಕ್ಕೆ ಹೋಗುತ್ತಿದ್ದ ಬಾಲಕನ ಭವಿಷ್ಯ ಇದೀಗ ಕತ್ತಲಿನಲ್ಲಿ ಮುಳುಗಿದೆ.
ತಾಯಿ ಭಾವುಕರಾಗಿ ಹೇಳಿದ್ದಾಳೆ — “ಮಗನ ಮುಂದಿನ ಜೀವನ ಹೇಗಾಗುತ್ತದೆ ಎಂಬ ಭಯ ಕಾಡುತ್ತಿದೆ,” ಎಂದು.
ಇದನ್ನು ಓದಿ : ಹೋರಿ ತಿವಿದು ಮೂವರು ಸಾವು

ಬಿಹಾರ್ ಮೂಲದ ಯುವಕನ ಕಣ್ಣು ಸಂಪೂರ್ಣ ಹಾನಿ
ಮತ್ತೊಂದು ಗಂಭೀರ ಘಟನೆ ಮಿಂಟೋ ಆಸ್ಪತ್ರೆಯಲ್ಲಿ ದಾಖಲಾಗಿದೆ. 19 ವರ್ಷದ ಬಿಹಾರ್ ಮೂಲದ ಯುವಕನ ಎಡಗಣ್ಣು ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದಾನೆ.
ಫ್ಲವರ್ ಪಾಟ್ ಪಟಾಕಿಯನ್ನು ಕೈಯಲ್ಲಿ ಹಿಡಿದು ಶೋ ನೀಡುತ್ತಿದ್ದ ವೇಳೆ ಅದು ಸಿಡಿದು ಕಣ್ಣಿಗೆ ನೇರವಾಗಿ ಬಡಿದಿದೆ. ಪರಿಣಾಮವಾಗಿ ಕಣ್ಣುಗುಡ್ಡೆಯೇ ಸೀಳಿದೆ.
ಬೆಳಕಿನ ಹಬ್ಬ ಕೆಲವರಿಗೆ ಕತ್ತಲಿನ ಹಬ್ಬ!
ದೀಪಾವಳಿ ಹಬ್ಬ (Deepavali Festival) ಸಂತೋಷ ನೀಡಬೇಕಾದರೂ, ನಿರ್ಲಕ್ಷ್ಯದಿಂದ ಪಟಾಕಿ ಸಿಡಿಸುವುದು ಪ್ರಾಣಾಪಾಯಕ್ಕೆ ಕಾರಣವಾಗುತ್ತಿದೆ. ವೈದ್ಯರು ಪಟಾಕಿ ಸಿಡಿಸುವಾಗ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.
ಇದನ್ನು ನೋಡಿ : ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲು




