BENGALURU : ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಲಾಲ್ಬಾಗ್ನಲ್ಲಿ ಪ್ರಸ್ತಾವಿತ ಸುರಂಗ ರಸ್ತೆ ನಿರ್ಮಾಣ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ನಗರ ಅಭಿವೃದ್ಧಿ ಇಲಾಖೆಯ ತಜ್ಞರ ಸಮಿತಿಯೇ ಯೋಜನೆಯ ಡಿಪಿಆರ್ ಸರಿಯಿಲ್ಲ ಎಂದು ಹೇಳಿದ್ದಾರೆ.

BENGALURU: ಬೆಂಗಳೂರಿನ ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಅವರು ಲಾಲ್ಬಾಗ್ ಪ್ರದೇಶದಲ್ಲಿ ಸುರಂಗ ರಸ್ತೆ ನಿರ್ಮಾಣ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಅವರು ಸುರಂಗ ರಸ್ತೆ ನಿರ್ಮಾಣವನ್ನು ವಿರೋಧಿಸಿದ್ದು, ಈ ವೇಳೆ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ತಜ್ಞರ ಸಮಿತಿಯೇ ಯೋಜನೆಯ ಡಿಟೇಲ್ಡ್ ಪ್ರಾಜೆಕ್ಟ್ ರಿಪೋರ್ಟ್ (DPR) ಸರಿಯಿಲ್ಲ ಎಂದು ಹೇಳಿದ್ದಾರೆ ಎಂದಿದ್ದಾರೆ. 20,000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ಕೇವಲ ಶೇಕಡಾ 10ರಷ್ಟು ಕಾರು ಮಾಲೀಕರಿಗೆ ಮಾತ್ರ ಪ್ರಯೋಜನಕಾರಿಯಾಗಿದ್ದು, ಶೇಕಡಾ 90ರಷ್ಟು ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗಲಿದೆ. ಅಲ್ದೇ ಈ ರೀತಿಯ ಯೋಜನೆ ಆರ್ಥಿಕ ಅಸ್ಪೃಶ್ಯತೆಯ ಉದಾಹರಣೆಯಾಗಿದೆ ಎಂದರು.
ಇದನ್ನೂ ಓದಿ: Newdelhi : ಟ್ರಂಪ್ ಆಸೆಗೆ ಮೋದಿ ತಣ್ಣೀರು – ಮಲೇಷ್ಯಾಗೆ ಬರಲ್ಲ ಎಂದ ಪ್ರಧಾನಿ ಮೋದಿ.!
ಲಾಲ್ಬಾಗ್ನ ಸುಮಾರು ಆರು ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ಸುರಂಗ ರಸ್ತೆ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಖಂಡಿಸಿದ್ದು, ಲಾಲ್ಬಾಗ್ನಲ್ಲಿರುವ 3,000 ಮಿಲಿಯನ್ ವರ್ಷ ಹಳೆಯ ಬಂಡೆಯು ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕವಾಗಿದ್ದು, ಅದನ್ನು ಹಾನಿಗೊಳಪಡಿಸುವ ಯಾವುದೇ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದಾರೆ.ಅಲ್ದೇ “ಮೆಟ್ರೋ ಮಾರ್ಗವಿರುವಾಗ ಮತ್ತೊಂದು ಸುರಂಗ ರಸ್ತೆ ಅಗತ್ಯವೇ?” ಎಂದು ಪ್ರಶ್ನಿಸಿದ್ದಾರೆ. ಅಲ್ದೇ ಯಾವುದೇ ಕಾರಣಕ್ಕೂ ಲಾಲ್ಬಾಗ್ನ ಒಂದಿಂಚು ಜಾಗವನ್ನೂ ಬಿಟ್ಟು ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ತೇಜಸ್ವಿ ಸೂರ್ಯ, ಈ ಕುರಿತು ಈಗಾಗಲೇ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL) ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
MUST WATCH: CAR– BIKE ಕೊಚ್ಚಿಕೊಂಡು ಹೋದ ಕ್ಷಣ ಕ್ಯಾಮೆರಾದಲ್ಲಿ – GUBBIಯಲ್ಲಿ ರೋಚಕ ದೃಶ್ಯಗಳು ವೈರಲ್ | GUBBI NEWS |




