NEWDELHI : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆಸೆಗೆ ಪ್ರಧಾನಿ ನರೇಂದ್ರ ಮೋದಿ ತಣ್ಣೀರು ಹಾಕಿದ್ದಾರೆ. ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ASEAN) ಶೃಂಗಸಭೆಯಲ್ಲಿ ನಾನು ವರ್ಚುಯಲ್ ಆಗಿ ಭಾಗವಹಿಸುತ್ತೇನೆ ಎಂದು ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

NEWDELHI: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಭೇಟಿಯ ಆಸೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ತಣ್ಣೀರು ಎರೆಚಿದ್ದಾರೆ. ಮಲೇಶ್ಯಾದ ಕೌಲಾಲಂಪುರದಲ್ಲಿ ನಡೆಯಲಿರುವ ಆಸಿಯಾನ್ (ASEAN) ಶೃಂಗಸಭೆಗೆ ಮೋದಿ ವರ್ಚುಯಲ್ ರೀತಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಅಕ್ಟೋಬರ್ 26ರಿಂದ 28ರವರೆಗೆ ಕೌಲಾಲಂಪುರದಲ್ಲಿ ನಡೆಯುವ ಈ ಶೃಂಗಸಭೆಯಲ್ಲಿ ಹಲವು ದೇಶಗಳ ನಾಯಕರು ಹಾಜರಾಗಲಿದ್ದಾರೆ. ಮೊದಲು ಮೋದಿ ನೇರವಾಗಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ ಈಗ ಮೋದಿ ಅವರು ‘ಎಕ್ಸ್’ (ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿ, “ನಾನು ವರ್ಚುಯಲ್ ಮೂಲಕ ಆಸಿಯಾನ್ ಶೃಂಗಸಭೆಯಲ್ಲಿ ಭಾಗವಹಿಸುತ್ತೇನೆ” ಎಂದು ಅಧಿಕೃತವಾಗಿ ತಿಳಿಸಿದ್ದಾರೆ.
ಇದನ್ನೂ ಓದಿ : Cinema : ದೀಪಾವಳಿಗೆ ಶಿವರಾಜ್ ಕುಮಾರ್ ಸರ್ಪ್ರೈಸ್! ಹೊಸ ಅವತಾರದಲ್ಲಿ ‘ಕರುನಾಡ ಕಿಂಗ್
ಇನ್ನು ಕಳೆದ ತಿಂಗಳು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಪ್ಲಾಟ್ಫಾರ್ಮ್ನಲ್ಲಿ,“ಮುಂದಿನ ವಾರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ” ಎಂದು ಬರೆದಿದ್ದರು. ಇನ್ನು ಈ ಹೇಳಿಕೆಯಿಂದ ಇಬ್ಬರು ನಾಯಕರು ಆಸಿಯಾನ್ ಶೃಂಗಸಭೆಯಲ್ಲಿ ಭೇಟಿಯಾಗಬಹುದು ಎಂಬ ಊಹಾಪೋಹಗಳು ಮೂಡಿದ್ದವು. ಆದರೆ ಈಗ ಮೋದಿ ಅವರ ಸ್ಪಷ್ಟನೆ ಈ ಊಹೆಗಳಿಗೆ ತೆರೆ ಎಳೆದಂತಾಗಿದೆ.
ಮೋದಿ ಅವರ ಈ ನಿರ್ಧಾರದಿಂದ ಆಸಿಯಾನ್ ಶೃಂಗಸಭೆಯಲ್ಲಿ ಭಾರತ ವರ್ಚುಯಲ್ ಪ್ರತಿನಿಧಿತ್ವ ನೀಡಲಿದೆ. ಟ್ರಂಪ್–ಮೋದಿ ಭೇಟಿ ಸಾಧ್ಯತೆ ಸದ್ಯಕ್ಕೆ ದೂರವಾಗಿದೆ. ಕೌಲಾಲಂಪುರದಲ್ಲಿ ನಡೆಯಲಿರುವ ಸಭೆಯಲ್ಲಿ ಭಾರತದ ಪರವಾಗಿ ಸಚಿವಮಟ್ಟದ ತಂಡ ಭಾಗವಹಿಸಲಿದೆ.
MUST WATCH: TUMAKURU | AMBULANCE ಸಿಗದೆ ಯುವಕ ಸಾವು – AMBULANCE ತಡೆದು ಕೋಳಾಲದ ಜನರು ಏನ್ಮಾಡಿದ್ರು ಗೊತ್ತಾ?




