Cinema : ನಟ ಶಿವರಾಜ್ ಕುಮಾರ್ (Shivaraj Kumar) ಹೊಸ ಸಿನಿಮಾ ದೀಪಾವಳಿ (Deepavali) ಹಬ್ಬದ ವಿಶೇಷವಾಗಿ ಘೋಷಣೆಯಾಗಿದೆ. ರಾಜಕಾರಣಿಯಾಗಿ ಶಿವಣ್ಣ ಪ್ರತ್ಯಕ್ಷರಾಗಿದ್ದಾರೆ. ಆಂಧ್ರ ಮೂಲದ ಯೆಲ್ಲಾಂಡು ರಾಜಕಾರಣಿ ಗುಮ್ಮಡಿ ನರಸಯ್ಯ (Gummadi Narsaiah) ಜೀವನಗಾಥೆಯಲ್ಲಿ ಕರುನಾಡ ಕಿಂಗ್ ಮಿಂಚಲಿದ್ದಾರೆ.

CINEMA : ಕನ್ನಡದ ಹಿಟ್ ಮೆಷೀನ್ ಡಾ. ಶಿವರಾಜ್ ಕುಮಾರ್ ಹೊಸ ಚಿತ್ರದ ಬಗ್ಗೆ ದೀಪಾವಳಿ ಹಬ್ಬದ ವಿಶೇಷವಾಗಿ ಬಿಡುಗಡೆ ಮಾಡಲಾಗಿದೆ. ಈ ಬಾರಿ ಶಿವಣ್ಣ ರಾಜಕಾರಣಿಯಾಗಿ ಹೊಸ ಪಾತ್ರದಲ್ಲಿ ಪರದೆ ಮೇಲೆ ಮಿಂಚಲಿದ್ದಾರೆ. ಚಿತ್ರವು ಆಂಧ್ರ ಮೂಲದ ಜನಪ್ರಿಯ ರಾಜಕಾರಣಿ ಗುಮ್ಮಡಿ ನರಸಯ್ಯ (Gummadi Narsaiah) ಅವರ ಜೀವನಗಾಥೆಯನ್ನು ಆಧರಿಸಿದೆ ಎನ್ನಲಾಗ್ತಿದೆ.
ಇನ್ನು ಸಮಾಜಮುಖಿ ಚಿಂತನೆ ಮತ್ತು ಪ್ರಾಮಾಣಿಕ ರಾಜಕೀಯ ಹಾದಿಯನ್ನು ಹಿಡಿದ ವ್ಯಕ್ತಿಯ ಕಥೆ ಆಧಾರಿತ ಈ ಸಿನಿಮಾ ಕರುನಾಡ ಕಿಂಗ್ ಶಿವಣ್ಣನಿಗೆ ವಿಭಿನ್ನ ಇಮೇಜ್ ನೀಡಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಈ ಚಿತ್ರವನ್ನು ಪರಮೇಶ್ವರ್ ಹಿವ್ರಲೆ ನಿರ್ದೇಶಿಸುತ್ತಿದ್ದು, ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಇನ್ನು ಪರಮೇಶ್ವರ್ ಅವರು ತೆಲುಗಿನಲ್ಲಿ ಚಿರು ಗೋಡವಾಲು, ಲಾವಣ್ಯ ವಿತ್ ಲವ್ ಬಾಯ್ಸ್ ಮುಂತಾದ ಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿದ್ದಾರೆ. ಈಗ ಕನ್ನಡದಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ.
ಇದನ್ನೂ ಓದಿ : Hemavathi Dam: ಹೇಮಾವತಿ ಜಲಾಶಯ ಭರ್ತಿ– ಯಾವುದೇ ಕ್ಷಣದಲ್ಲಿ ನೀರು ಹೊರಬಿಡುವ ಸಾಧ್ಯತೆ!
ಇನ್ನು ಚಿತ್ರದ ನಿರ್ಮಾಪಕರಾಗಿ ಎನ್. ಸುರೇಶ್ ರೆಡ್ಡಿ ಕಾರ್ಯನಿರ್ವಹಿಸುತ್ತಿದ್ದು, ಚಿತ್ರಕ್ಕೆ ಭಾರೀ ಬಂಡವಾಳ ಹೂಡಿಕೆ ಮಾಡಿದ್ದಾರೆ. ದೀಪಾವಳಿಯ ಸಂಭ್ರಮದ ದಿನವೇ ಚಿತ್ರತಂಡ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದು, ಅದರಲ್ಲಿ ಶಿವಣ್ಣ ಸೈಕಲ್ ತಳ್ಳುತ್ತಾ, ಹೆಗಲಿಗೆ ಕೆಂಪು ಶಾಲು ಹಾಕಿಕೊಂಡು, ಕನ್ನಡಕ ಧರಿಸಿ ಸರ್ಕಾರಿ ಕಚೇರಿ ಮುಂದೆ ನಿಂತಿರುವ ಹಾಗೇ ಕಾಣಿಸಿಕೊಂಡಿದ್ದಾರೆ.
MUST WATCH : ಶಿರಾದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಹೇಗಿತ್ತು ಗೊತ್ತಾ ಪೂಜಾ ಕೈಂಕರ್ಯ | SIRA NEWS |




