BBK 12 : ಬಿಗ್ಬಾಸ್ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲಾಗಿದೆ.

ಪರಿಸರ ನಿಯಮ ಉಲ್ಲಂಘನೆ ಪ್ರಕರಣದ ವಿವಾದ ತಣಿಯುವ ಮುನ್ನವೇ, ಬಿಗ್ ಬಾಸ್ 12 ಸ್ಪರ್ಧಿ ಅಶ್ವಿನಿ ಗೌಡ ಹೊಸ ವಿವಾದಕ್ಕೆ ಗುರಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ‘S’ ಪದ ಬಳಕೆ ಮಾಡಿದ ಹಿನ್ನೆಲೆ, ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ಅವರು ಬಿಡದಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ದೂರು ಪ್ರಕಾರ, ಅಶ್ವಿನಿ ಗೌಡ ಅವರು ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ಕುರಿತು “She is S, ಆ ಕ್ಯಾಟಗರಿಯವರಳು” ಎಂಬ ಹೇಳಿಕೆ ನೀಡಿದ್ದು, ಇದು ವ್ಯಕ್ತಿತ್ವ ನಿಂದನೆ ಹಾಗೂ ಜಾತಿ ನಿಂದನೆ ಮಾಡುವಂತಾಗಿದೆ ಎಂದು ಆರೋಪಿಸಲಾಗಿದೆ.

ಅದೇ ರೀತಿ, ಈ ಹೇಳಿಕೆಯನ್ನು ಕತ್ತರಿಸದೆ ಪ್ರಸಾರ ಮಾಡಿದ ಕಲರ್ಸ್ ವಾಹಿನಿ ಬಿಸಿನೆಸ್ ಹೆಡ್ ಪ್ರಶಾಂತ್ ನಾಯಕ್, ಕ್ಲಸ್ಟರ್ ಹೆಡ್ ಸುಷ್ಮಾ ಹಾಗೂ ನಿರ್ದೇಶಕ ಪ್ರಕಾಶ್ ವಿರುದ್ಧವೂ ದೂರು ದಾಖಲಾಗಿದೆ. ಪೊಲೀಸರು ದೂರು ಸ್ವೀಕರಿಸಿ ಎನ್ಸಿಆರ್ (Non-Cognizable Report) ದಾಖಲಿಸಿದ್ದಾರೆ.
BBK 12 – ಮನೆಯಲ್ಲಿ ಏನಾಯಿತು?
ರಾತ್ರಿ ವೇಳೆ ರಕ್ಷಿತಾ ಕ್ಯಾಮೆರಾ ಮುಂದೆ ಮಾತನಾಡುತ್ತಿದ್ದ ಸಂದರ್ಭದಲ್ಲಿ, ಅಶ್ವಿನಿ ಹಾಗೂ ಜಾಹ್ನವಿ ರಕ್ಷಿತಾಳ ಗೆಜ್ಜೆಯನ್ನು ಹಿಡಿದು ಫನ್ ಮಾಡಲು ಪ್ರಯತ್ನಿಸಿದ್ದರು. ಬೆಳಿಗ್ಗೆ ಈ ಕುರಿತು ಪ್ರಶ್ನಿಸಿದಾಗ ಇಬ್ಬರೂ ತಪ್ಪನ್ನು ಒಪ್ಪದಿದ್ದರಿಂದ ಗಲಾಟೆ ಉಂಟಾಯಿತು.
ಇದನ್ನು ಓದಿ : ಹೋರಿ ತಿವಿದು ಮೂವರು ಸಾವು

ಮರುದಿನ ವರಾಂಡದಲ್ಲಿ ಜಾಹ್ನವಿ ಜೊತೆ ಮಾತನಾಡುತ್ತಿದ್ದ ಅಶ್ವಿನಿ, ರಕ್ಷಿತಾಳ ಬಗ್ಗೆ ‘S ಕ್ಯಾಟಗರಿ’ ಎನ್ನುವ ಹೇಳಿಕೆ ನೀಡಿದ್ದು, ಅದೇ ಈಗ ವಿವಾದದ ಕೇಂದ್ರವಾಗಿದೆ.
ದೂರುದಾರ ಪ್ರಶಾಂತ್ ಮೆತಾಲ್ ಹೇಳುವಂತೆ, “ಈ ಮಾತುಗಳಿಂದ ಸಮಾಜದಲ್ಲಿ ಜಾತಿ ಮತ್ತು ಭೇದಭಾವದ ಭಾವನೆ ಉಂಟಾಗಬಹುದು. ಟಿಆರ್ಪಿ ಹೆಚ್ಚಿಸಲು ಇಂತಹ ದೃಶ್ಯವನ್ನು ಪ್ರಸಾರ ಮಾಡಿರುವುದು ತಪ್ಪು” ಎಂದು ಆರೋಪಿಸಿದ್ದಾರೆ.

ಇದನ್ನು ನೋಡಿ : ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲು




