BBK 12 : ಬಿಗ್ಬಾಸ್ ನೀಡಿದ ಟಾಸ್ಕ್ನಲ್ಲಿ ಸೂರಜ್ ಸಿಂಗ್ ತಮ್ಮ ತಂಡದ ಪರ ನಿಂತು ಎಲ್ಲರ ಮನಗೆದ್ದಿದ್ದಾರೆ.

BBK 12 : ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ನ ವಿಶೇಷ ಅಧಿಕಾರದಿಂದ ನಿನ್ನೆ ರಾತ್ರಿ ಮಹಾ ಕಾಳಗವೇ ನಡೆದಿತ್ತು. ಬಿಗ್ಬಾಸ್ ನೀಡಿದ ತಿರುವುಗಳ ನಡುವೆ ಮನೆಯ ವಾತಾವರಣ ಸಂಪೂರ್ಣ ಬದಲಾಗಿದ್ದು, ಸೂರಜ್ ಸಿಂಗ್ ತಮ್ಮ ತಂಡದ ಪರ ನಿಂತು ಪ್ರೇಕ್ಷಕರ ಮನಗೆದ್ದಿದ್ದಾರೆ.
ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಬಿಗ್ಬಾಸ್ ಮೂವರು ನಾಯಕರು — ರಿಷಾ, ರಘು, ಮತ್ತು ಸೂರಜ್ ಸಿಂಗ್ ಅವರಿಗೆ ಇಬ್ಬರನ್ನು ಟಾಸ್ಕ್ನಿಂದ ಹೊರಗಿಡುವ ಅಧಿಕಾರ ನೀಡಿದ್ದರು. ಮೂವರು ಚರ್ಚಿಸಿ ಅಶ್ವಿನಿ ಗೌಡ ಮತ್ತು ಕಾಕ್ರೋಚ್ ಸುಧಿ ಅವರನ್ನು ಟಾಸ್ಕ್ನಿಂದ ಹೊರಗಿಟ್ಟಿದ್ದಾರೆ.
ಇದನ್ನು ನೋಡಿ : ಸ್ಪರ್ಧಿಗಳಿಗೆ ಸೂಪರ್ ಹೀರೋ ಆದ ಕ್ರಶ್ ಮೆಟರಿಯಲ್ ಸೂರಜ್ ಸಿಂಗ್!

ಇದರ ಬಳಿಕ ಬಿಗ್ಬಾಸ್ ನೀಡಿದ ಮತ್ತೊಂದು ಟ್ವಿಸ್ಟ್ ಮನೆಯನ್ನು ಕಂಗೊಳಿಸಿತು. ನಾಯಕರು ತಮ್ಮ ಮುಂದಿರುವ ಪವರ್ ನಾಣ್ಯವನ್ನು ತೆಗೆದುಕೊಂಡರೆ ನೇರವಾಗಿ ಕ್ಯಾಪ್ಟನ್ಸಿ ಆಟಕ್ಕೆ ಪ್ರವೇಶಿಸಬಹುದು, ಆದರೆ ತಮ್ಮ ತಂಡದ ಸದಸ್ಯರು ಎಲ್ಲರೂ ಆಟದಿಂದ ಹೊರಗೊಳ್ಳಬೇಕಾಗುತ್ತದೆ ಎಂಬ ಷರತ್ತು ಇತ್ತು.
ಈ ಸಂದರ್ಭದಲ್ಲಿ ರಿಷಾ ಮತ್ತು ರಘು ನಾಣ್ಯ ಸ್ವೀಕರಿಸಿದರೆ, ಸೂರಜ್ ಸಿಂಗ್ ಮಾತ್ರ ತಮ್ಮ ತಂಡದೊಂದಿಗೆ ನಿಲ್ಲುವ ನಿರ್ಧಾರ ಕೈಗೊಂಡರು.ಕನ್ಫೆಷನ್ ರೂಮ್ನಲ್ಲಿ ನಡೆದ ಈ ಪ್ರಕ್ರಿಯೆ ಮನೆಯಲ್ಲಿ ಟಿವಿ ಮೂಲಕ ಎಲ್ಲರೂ ನೋಡಿದ್ದು, ರಿಷಾ ಮತ್ತು ರಘು ವಿರುದ್ಧ ಮನೆಯವರ ಆಕ್ರೋಶ ಉಕ್ಕಿಬಂದಿತು. ಅವರ ತಂಡದ ಸದಸ್ಯರು “ಕ್ಯಾಪ್ಟನ್ ಅಂದ್ರೆ ತಂಡದ ಜವಾಬ್ದಾರಿ ಹೊತ್ತವನು, ಸ್ವಾರ್ಥವಲ್ಲ!” ಎಂದು ಕೂಗಿ ಕಿಡಿ ಎಸೆದರು.

ಇದಾದರೆ, ಸೂರಜ್ ಸಿಂಗ್ ನಿರ್ಧಾರಕ್ಕೆ ಮನೆಯ ಸದಸ್ಯರು ಹಾಗೂ ಪ್ರೇಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ. “ತಂಡದೊಂದಿಗೆ ನಿಂತ ಸೂರಜ್ ನಿಜವಾದ ನಾಯಕ” ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿದೆ.
ಇನ್ನು ರಿಷಾ ಅವರು “ಸೂರಜ್ ಒಬ್ಬ ಫೂಲ್” ಎಂದು ಹೇಳಿದರೂ, ಪ್ರೇಕ್ಷಕರು ಅದಕ್ಕೆ ಒಪ್ಪದೆ “ಈ ಸಲ ಕಿಚ್ಚನ ಚಪ್ಪಾಳೆ ಸೂರಜ್ ಸಿಂಗ್ಗೇ ಬರಲಿ!” ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನು ಓದಿ : ‘ಬಾಹುಬಲಿ’ ಪ್ರಭಾಸ್ಗೆ ಹುಟ್ಟುಹಬ್ಬದ ಸಂಭ್ರಮ




