Prabhas : ನಟ ಪ್ರಭಾಸ್ ಅವರಿಗೆ ಇಂದು ಜನ್ಮದಿನದ ಸಂಭ್ರಮ.

ಇಂದು (ಅಕ್ಟೋಬರ್ 23) ಪ್ಯಾನ್ ಇಂಡಿಯಾ ಸೂಪರ್ಸ್ಟಾರ್ ಪ್ರಭಾಸ್ ಅವರ ಜನ್ಮದಿನ. ಈ ವಿಶೇಷ ದಿನದ ಪ್ರಯುಕ್ತ ಅಭಿಮಾನಿಗಳು ಮತ್ತು ಸಿನಿತಾರೆಯರು ಸೋಶಿಯಲ್ ಮೀಡಿಯಾದಲ್ಲಿ ಪ್ರಭಾಸ್ ಅವರಿಗೆ ಹಾರೈಕೆಗಳ ಮಳೆ ಸುರಿಸುತ್ತಿದ್ದಾರೆ.
ಪ್ರಭಾಸ್ ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿಲ್ಲದಿದ್ದರೂ, ಅವರ ಅಭಿಮಾನಿಗಳು ದೇಶಾದ್ಯಂತ ನೂರಾರು ಫ್ಯಾನ್ ಪೇಜ್ಗಳನ್ನು ಸೃಷ್ಟಿಸಿ, ತಮ್ಮ ಮೆಚ್ಚಿನ ಹೀರೋ ಚಿತ್ರಗಳ ಪ್ರಚಾರದಲ್ಲಿ ತೊಡಗಿದ್ದಾರೆ.
ಹುಟ್ಟುಹಬ್ಬಕ್ಕೆ ಸಿನಿಮಾಗಳು ಮರುಬಿಡುಗಡೆ
ಇನ್ನು ಪ್ರಭಾಸ್ ಜನ್ಮದಿನದ ಪ್ರಯುಕ್ತ ಅಭಿಮಾನಿಗಳಿಗೆ ಡಬಲ್ ಖುಷಿ ಸಿಕ್ಕಿದೆ. ‘ಸಲಾರ್’, ‘ಈಶ್ವರ್’ ಮತ್ತು ‘ಪೌರ್ಣಮಿ’ ಚಿತ್ರಗಳು ಇಂದು ಮರು ಬಿಡುಗಡೆ ಆಗಿವೆ. ಇನ್ನು, ಬಹು ನಿರೀಕ್ಷಿತ ‘ಬಾಹುಬಲಿ: ದಿ ಎಪಿಕ್’ ಸಿನಿಮಾ ಅಕ್ಟೋಬರ್ 31ರಂದು ತೆರೆಗೆ ಬರಲಿದೆ.

ಪ್ಯಾನ್ ಇಂಡಿಯಾ ಹೀರೋ ಆಗಿರುವ ಪ್ರಭಾಸ್ ಅವರು ನಟನೆಯಷ್ಟೇ ಅಲ್ಲ ಜನಪರ ಕಾರ್ಯಗಳಲ್ಲಿಯೂ ತೊಡಗಿದ್ದಾರೆ. ಆದರೆ, ತಮ್ಮ ಸೇವಾ ಕಾರ್ಯಗಳನ್ನು ಅವರು ಎಂದಿಗೂ ಜಾಹೀರಾತು ಮಾಡುವುದಿಲ್ಲ. ಮೌನವಾಗಿ ನೆರವಿನ ಕೈ ಚಾಚುತ್ತಾರೆ.
ಪ್ರಭಾಸ್ ಕೈಯಲ್ಲಿರುವ ಸಿನಿಮಾಗಳು
ಪ್ರಭಾಸ್ ಈಗ ವರ್ಷಕ್ಕೆ ಎರಡು ಸಿನಿಮಾಗಳನ್ನು ಬಿಡುಗಡೆ ಮಾಡುವ ಗುರಿ ಹೊಂದಿದ್ದಾರೆ. ಅವರ ಬಳಿ ಈಗ ಹಲವು ದೊಡ್ಡ ಬಜೆಟ್ ಸಿನಿಮಾಗಳಿವೆ.
‘ದಿ ರಾಜಾ ಸಾಬ್’ – ಜನವರಿ 9 ರಂದು ಬಿಡುಗಡೆ
‘ಸಲಾರ್: ಪಾರ್ಟ್ 2’ – ಶೀಘ್ರದಲ್ಲೇ ಸೆಟ್ಟೇರಲಿದೆ
‘ಶೌರ್ಯಾಂಗ ಪರ್ವ’, ‘ಸ್ಪಿರಿಟ್’, ‘ಕಲ್ಕಿ 2898 AD: ಪಾರ್ಟ್ 2’, ಮತ್ತು ‘ಫೌಜಿ’ – ಪ್ರಸ್ತುತ ತಯಾರಿಯಲ್ಲಿವೆ.
ನಿರ್ಮಾಪಕರ ಪಾಲಿನ “ಅಕ್ಷಯಪಾತ್ರೆ”
‘ಬಾಹುಬಲಿ’, ‘ಬಾಹುಬಲಿ 2’ ಮತ್ತು ‘ಕಲ್ಕಿ 2898 AD’ ಸಿನಿಮಾಗಳು 1000 ಕೋಟಿ ಕ್ಲಬ್ ಸೇರುವ ಮೂಲಕ ಪ್ರಭಾಸ್ ಅವರ ಸ್ಟಾರ್ಡಮ್ನ್ನು ಹೊಸ ಎತ್ತರಕ್ಕೇರಿಸಿವೆ. ಭಾರತೀಯ ಸಿನಿರಂಗದಲ್ಲೇ ಪ್ರಭಾಸ್ ನಿರ್ಮಾಪಕರ ಪಾಲಿನ “ಅಕ್ಷಯಪಾತ್ರೆ” ಎನಿಸಿಕೊಂಡಿದ್ದಾರೆ. ಇನ್ನು ನಟ ಪ್ರಭಾಸ್ ಅವರ ಜನ್ಮದಿನ ಕೇವಲ ಒಂದು ಆಚರಣೆ ಅಲ್ಲ. ಅದು ಅಭಿಮಾನಿಗಳ ಹಬ್ಬ,
ಇದನ್ನು ನೋಡಿ : ಪ್ರಭಾಸ್ ಜನ್ಮದಿನ: ಟಾಲಿವುಡ್ ಹೀರೋ ಬಳಿ ಇದೆ ಅರ್ಧ ಡಜನ್ ಸಿನಿಮಾ

ಪ್ರಭಾಸ್ ಮದ್ವೆ ಯಾವಾಗ
ಡಾರ್ಲಿಂಗ್ ಪ್ರಭಾಸ್ ಮದುವೆ ಯಾವಾಗ? ಈ ಪ್ರಶ್ನೆ ಇದ್ದೇ ಇದೆ. ಇದನ್ನ ಎಲ್ಲರೂ ಕೇಳ್ತಾರೆ. ಆದರೆ, ಪ್ರಭಾಸ್ ಈ ಬಗ್ಗೆ ಹೇಳ್ತಾನೆ ಇದ್ದಾರೆ. ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಮದ್ವೆ ಆಗ್ತಾರೆ ಅನ್ನೋ ಮಾತು ಆಗಿನಿಂದಲೂ ಇದ್ದೇ ಇದೆ.ಆದರೆ, ಯಾವುದು ನಿಜವಾಗಿಯೇ ಇಲ್ಲ. ಆದರೂ ಈ ಸುದ್ದಿ ಜೀವಂತವಾಗಿಯೇ ಇದೆ. ಇನ್ನುಳಿದಂತೆ ಪ್ರಭಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿಯೇ ಇದ್ದಾರೆ ಅಂತಲೇ ಹೇಳಬಹುದು.

ಇದನ್ನು ಓದಿ : ಕಾವೇರಿ ಜಲಾನಯನ ಪ್ರದೇಶದಲ್ಲಿ ಹಿಂಗಾರು ಚುರುಕು | ಜನರಿಗೆ ಅಲರ್ಟ್




