Rohit Sharma : ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಅವರು ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ 1000 ಏಕದಿನ ರನ್ಗಳನ್ನು ಪೂರೈಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಆಗಿ ಹೊಸ ಮೈಲುಗಲ್ಲು ನಿರ್ಮಿಸಿದ್ದಾರೆ. ಈ ಸಾಧನೆ ಮಾಡಲು ಅವರಿಗೆ ಕೇವಲ 2 ರನ್ಗಳ ಅಗತ್ಯವಿತ್ತು.
ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತ್ಯಧಿಕ ಏಕದಿನ ರನ್ ಗಳಿಸಿದ ದಾಖಲೆ ವೆಸ್ಟ್ ಇಂಡೀಸ್ ದಿಗ್ಗಜ ವಿವ್ ರಿಚರ್ಡ್ಸ್ ಹೆಸರಿನಲ್ಲಿದೆ. ಅವರು 40 ಪಂದ್ಯಗಳಲ್ಲಿ 1905 ರನ್ ಗಳಿಸಿದ್ದರು. ರೋಹಿತ್ ಈಗಾಗಲೇ 21 ಪಂದ್ಯಗಳಲ್ಲಿ 1000 ಕ್ಕೂ ಹೆಚ್ಚು ರನ್ ಗಳಿಸಿ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ.

ಆಸ್ಟ್ರೇಲಿಯಾದ ನೆಲದಲ್ಲಿ 1000 ಪ್ಲಸ್ ರನ್ ಗಳಿಸಿದ ಕೆಲ ಪ್ರಮುಖ ಆಟಗಾರರು
- ವಿವ್ ರಿಚರ್ಡ್ಸ್ – 1905
- ಡೆಸ್ಮಂಡ್ ಹೇನ್ಸ್ – 1565
- ಕುಮಾರ ಸಂಗಕ್ಕಾರ – 1171
- ಮಹೇಲಾ ಜಯವರ್ಧನೆ – 1013
- ರೋಹಿತ್ ಶರ್ಮ – 1000*
ಇದನ್ನು ಓದಿ : ಇಂಗ್ಲಿಷ್ನಲ್ಲಿ ತೆರೆ ಕಾಣಲು ಸಿದ್ಧವಾದ ಕಾಂತಾರ

ಇದಲ್ಲದೆ, ರೋಹಿತ್ ಶರ್ಮ ಈಗ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯತ್ತ ಗಮನ ಹರಿಸಿದ್ದಾರೆ. ಎಲ್ಲಾ ಮಾದರಿಗಳಲ್ಲಿ ಸೆಹ್ವಾಗ್ 15,758 ರನ್ ಗಳಿಸಿ ಭಾರತೀಯ ಆರಂಭಿಕ ಬ್ಯಾಟ್ಸ್ಮನ್ಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಈಗಾಗಲೇ 15,584 ರನ್ ಗಳಿಸಿದ್ದು, ಸೆಹ್ವಾಗ್ ಅವರನ್ನು ಹಿಂದಿಕ್ಕಲು ಕೇವಲ 160 ರನ್ಗಳ ಅಗತ್ಯವಿದೆ. 2025ರ ಚಾಂಪಿಯನ್ಸ್ ಟ್ರೋಫಿ ಬಳಿಕ ಈ ದಾಖಲೆ ಮುರಿಯುವ ಸಾಧ್ಯತೆಯಿದೆ.

ಇದನ್ನು ನೋಡಿ : ಆಸೀಸ್ ನೆಲದಲ್ಲಿ ವಿಶೇಷ ದಾಖಲೆ ಬರೆದ ರೋಹಿತ್; ಈ ಸಾಧನೆ ಮಾಡಿದ ಮೊದಲ ಭಾರತೀಯ




