CN HALLI : ದೇಶಾದ್ಯಂತ ದೀಪಾವಳಿ ಹಬ್ಬವನ್ನ ಅತ್ಯಂತ ವಿಜೃಂಭಣೆಯಿಂದ ಆಚರಿಸ್ತಾ ಇದ್ದು, ಆದ್ರೆ ಹಬ್ಬದ ದಿನವೇ ಘೋರ ದುರಂತವೊಂದು ಸಂಭವಿಸಿದೆ.

ದೇಶಾದ್ಯಂತ ದೀಪಾವಳಿ ಹಬ್ಬವನ್ನ ಅತ್ಯಂತ ವಿಜೃಂಭಣೆಯಿಂದ ಆಚರಿಸ್ತಾ ಇದ್ದು, ಆದ್ರೆ ಹಬ್ಬದ ದಿನವೇ ಘೋರ ದುರಂತವೊಂದು ಸಂಭವಿಸಿದೆ. ಕೆರೆಗೆ ಕಾಲು ಜಾರಿ ಬಿದ್ದು ಮುಳುಗಿ ತಂದೆ ಮಗಳು ಸೇರಿ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕನಾಯಕನಹಳ್ಳಿಯ ಹಂದನಕೆರೆ ಬಳಿಯ ಯರೆಕಟ್ಟೆ ಗ್ರಾಮದಲ್ಲಿ ನಡೆದಿದೆ.
ಇನ್ನು ಯರೆಕಟ್ಟೆ ಗ್ರಾಮದ ವೆಂಕಟೇಶ್, ಪುತ್ರಿ ಶ್ರಾವ್ಯ ಹಾಗೂ ಆಕೆಯ ಸ್ನೇಹಿತೆ ಪುಣ್ಯ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮೂವರು ಬಾಲಕಿಯರು ಕೆರೆ ಕಡೆಗೆ ವಿಹಾರಕ್ಕೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕೆರೆ ಅಂಚಿನಲ್ಲಿ ಕಾಲು ತೊಳೆಯಲು ಹೋಗಿ, ಮಿಸ್ ಆಗಿ ಓರ್ವ ಬಾಲಕಿ ಕೆರೆಗೆ ಬಿದ್ದಿದ್ದು, ಅದನ್ನ ಕಂಡ ಇನ್ನೋರ್ವ ಸ್ನೇಹಿತೆ ಕೂಡ ಅವಳನ್ನ ರಕ್ಷಿಸಲು ಕೆರೆಗೆ ಹಾರಿದ್ದಾಳೆ.
ಈ ವೇಳೆ ಮತ್ತೋರ್ವ ಬಾಲಕಿ ಓಡಿ ಹೋಗಿ ಮನೆಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಅವರು ಬಿದ್ದ ಗುಂಡಿಯನ್ನ ಬಿಟ್ಟು ಮತ್ತೊಂದು ಗುಂಡಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಇನ್ನು ಮೃತ ಬಾಲಕಿ ಶ್ರಾವ್ಯ ತಂದೆ ಮಕ್ಕಳನ್ನ ರಕ್ಷಿಸಲು ಇನ್ನೊಂದು ಗುಂಡಿಗೆ ಹಾರಿದ್ದು, ಗಾಬರಿಯಿಂದ ಅವರು ಕೂಡ ಮುಳುಗಿ ಸಾವನ್ನಪ್ಪಿದ್ದಾರೆ.
ಇದನ್ನು ಓದಿ : ಶಾಸಕ ಅಶೋಕ್ ಮನಗೂಳಿ ಕಾರು ಅಪಘಾತ

ಇನ್ನು ವೆಂಕಟೇಶ್ ಈಜಿನಲ್ಲಿ ಪರಿಣಿತರಾಗಿದ್ರೂ ಕೂಡ, ಮಗಳನ್ನ ಕಾಪಾಡುವ ಸಲುವಾಗಿ ಆತಂಕದಿಂದ ಮುಳುಗಿ ಸಾವನ್ನಪ್ಪಿದ್ದಾರೆ. ಅಲ್ದೇ ಎಲ್ಲರ ಎದುರೇ ಗುಂಡಿಗೆ ಹಾರಿದ ವೆಂಕಟೇಶ್ ಎಷ್ಟೊತ್ತಾದ್ರೂ ಮೇಲೆ ಬರಲೇ ಇಲ್ಲಿದ್ದದ್ದಾಗ, ಈ ವೇಳೆ ಗ್ರಾಮಸ್ಥರು ಆತ ಮೃತದೇಹ ಹುಡುಕ್ತಿದ್ದಾರೆ ಎಂದು ಸುಮ್ಮನಾಗಿದ್ದು, ಈ ವೇಳೆ ಅವ್ರು ಸಹ ಗಾಬರಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ರು.
ಇನ್ನು ಮಾಹಿತಿ ತಿಳಿದ ತಕ್ಷಣವೇ ಶಾಸಕ ಸುರೇಶ್ ಬಾಬು ಅವರು ಚಿಕ್ಕನಾಯಕನಹಳ್ಳಿ ಶವಗಾರಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ರು. ಸದ್ಯ ಈ ಸಂಬಂಧ ಹಂದನಕೆರೆ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನ ದಾಖಲಿಸಿಕೊಡು ತನಿಖೆ ಆರಂಭಿಸಿದ್ದಾರೆ.

ಇದನ್ನು ನೋಡಿ : ಕೆರೆಗೆ ಬಿದ್ದು ತಂದೆ–ಮಗಳು ಸೇರಿ ಮೂವರು ಸಾವು




