BBK 12 : ಬಿಗ್ ಬಾಸ್ ಕನ್ನಡ ಸೀಸನ್ 12 ದಿನದಿಂದ ದಿನಕ್ಕೆ ಮತ್ತಷ್ಟು ಕುತೂಹಲ ಹುಟ್ಟಿಸುತ್ತಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12 (BBK 12) ದಿನದಿಂದ ದಿನಕ್ಕೆ ಮತ್ತಷ್ಟು ಕುತೂಹಲ ಹುಟ್ಟಿಸುತ್ತಿದೆ. ಇತ್ತೀಚೆಗೆ ಮನೆಯೊಳಗೆ ಕಾಲಿಟ್ಟ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿಯಿಂದ ಮನೆಯ ವಾತಾವರಣದಲ್ಲಿ ಭಾರೀ ಬದಲಾವಣೆ ಕಂಡುಬಂದಿದೆ.
ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟ ತಕ್ಷಣ, ಇತರ ಸ್ಪರ್ಧಿಗಳ ಬಗ್ಗೆ ತಾವು ವ್ಯಕ್ತಪಡಿಸಿದ ಅಭಿಪ್ರಾಯಗಳು ಮನೆಯಲ್ಲೇ ಚರ್ಚೆಗೆ ಗ್ರಾಸವಾಗಿವೆ. ಹೆಚ್ಚಿನ ಸ್ಪರ್ಧಿಗಳು ತಮ್ಮನ್ನ ತಾವು ಸರಿಪಡಿಸಲು ಮುಂದಾಗುತ್ತಿದ್ದಾರೆ. ಆದರೆ, ಅಶ್ವಿನಿ ಗೌಡ ಮತ್ತು ಜಾನ್ವಿ ಅದೇ ಹಳೇ ಚಾಳಿ ಮುಂದುವರೆಸಿ ವೈಲ್ಡ್ ಕಾರ್ಡ್ ಸ್ಪರ್ಧಿಗಳ ವಿರುದ್ಧವೂ ತಿರುಗಿಬಿದ್ದಿದ್ದಾರೆ. ಮ್ಯೂಟೆಂಟ್ ರಘು ಮತ್ತು ರಿಷಾ ಆಡಿದ ಮಾತಿಗೆ ಬೆಲೆಯೇ ಕೊಟ್ಟಿಲ್ಲ.
ಇದನ್ನ ಗಮನಿಸಿದ ರಿಷಾ ಅವರು ಜಾನ್ವಿಯನ್ನು ಸಪರೇಟ್ ಆಗಿ ಕರೆದು ಅವರಿಗೆ ತಮ್ಮ ತಪ್ಪಿನ ಕುರಿತು ಅರಿವು ಮೂಡಿಸಿದ್ದಾರೆ. ಇದರಿಂದ ಬೇಸರಗೊಂಡ ಜಾನ್ವಿ ಕಣ್ಣೀರಿಟ್ಟಿದ್ದಾರೆ. ಹುಕ್ಕ ಥರ ಇದ್ದರೆ ಜಾನ್ವಿ ಕಳೆದು ಹೋಗ್ತಾರೆ. ಸಾಕಷ್ಟು ಕೆಲಸ ಮಾಡಬೇಕು ಎಂದು ಕನಸು ಕಂಡು ಬಂದಿರ್ತೀರಾ. ನಿಮಗೆ ನೀವೇ ಮುಳ್ಳಾಗ್ತಿದ್ದೀರಾ ಎಂದು ನೇರವಾಗಿ ಹೇಳಿದ್ದಾರೆ.
ಇದನ್ನು ಓದಿ : ರಾಜ್ ನಿಡಿಮೋರ್ ಜೊತೆ ನಟಿ ಸಮಂತಾ ದೀಪಾವಳಿ ಆಚರಣೆ

ರಿಷಾ ಮಾತಿನಿಂದ ಜಾನ್ವಿಗೆ ಭಯ ಶುರುವಾಗಿದೆ. “ನಾನು ಹೊರಗಡೆ ತುಂಬಾ ನೆಗೆಟಿವ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ ಅನ್ನಿಸುತ್ತಾ ಇದೆ. ನಮ್ಮ ಗುಂಡಿ ನಾವೇ ತೋಡಿಕೊಂಡ್ವಿ ಅನಿಸುತ್ತೆ” ಎಂದು ಅಶ್ವಿನಿಗೆ ತಮ್ಮ ಆತಂಕ ಹಂಚಿಕೊಂಡರು. ಅದಕ್ಕೆ ಅಶ್ವಿನಿ ಗೌಡ ಸಮಾಧಾನ ಮಾಡುತ್ತಾ, ಅದಕ್ಕೆ ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿದ್ದವರು ಯಾರು ತಪ್ಪೇ ಮಾಡಿಲ್ವಾ? ನಮ್ಮ ವ್ಯಕ್ತಿತ್ವ ಅದಲ್ಲ. ಹೊರಗಡೆ ಬನ್ನಿ ಎಂದಿದ್ದಾರೆ.
ಇಷ್ಟೆಲ್ಲ ಹೇಳಿದ ಬಳಿಕ ಕೂಡ ಜಾನ್ವಿ ಸರಿ ಆದಂತೆ ಕಾಣುತ್ತಿಲ್ಲ. ಬಳಿಕ ರಿಷಾ ಅವರು ಇವರು ದಡ್ಡರಾದರೆ, ಇವರು ರಿಯಲ್ ದಡ್ಡರು ಎಂದು ಸಾಬೀತಾಗುತ್ತದೆ ಎಂದು ಹೇಳಿದ್ದಾರೆ. ಒಟ್ಟಾರೆ ರಿಷಾ ಜಾನ್ವಿ ಅವರಿಗೆ ಬಿಗ್ ಬಾಸ್ ಮನೆಗೆ ಬಂದಿರುವ ಉದ್ದೇಶ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಇದನ್ನ ಅವರು ಯಾವರೀತಿ ತೆಗೆದುಕೊಳ್ಳುತ್ತಾರೆ ಎಂಬುದು ಮುಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.

ಇದನ್ನು ನೋಡಿ : STUDENTಗೆ ಹಿಗ್ಗಾಮುಗ್ಗ ಥಳಿಸಿದ ರೌಡಿ TEACHER- ಇವನು ಶಿಕ್ಷಕನೋ..? ರಾಕ್ಷಸನೋ..?




