Samantha : ಈ ಬಾರಿ ದೀಪಾವಳಿಯನ್ನು ನಟಿ ಸಮಂತಾ ಅನಾಥಾಶ್ರಮದ ಮಕ್ಕಳ ಜೊತೆ ಸಂಭ್ರಮದಿಂದ ಆಚರಿಸಿದ್ದಾರೆ.

ಟಾಲಿವುಡ್ನ ಜನಪ್ರಿಯ ನಟಿ ಸಮಂತಾ ರುತ್ಪ್ರಭು, ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ, ಸಾಮಾಜಿಕ ಸೇವೆಯಲ್ಲೂ ತಮ್ಮದೇ ಆದ ವಿಶೇಷ ಗುರುತನ್ನು ಮೂಡಿಸಿಕೊಂಡಿದ್ದಾರೆ. ಪ್ರತಿ ವರ್ಷ ತಮ್ಮ ಹುಟ್ಟುಹಬ್ಬ ಹಾಗೂ ಹಬ್ಬದ ಸಮಯದಲ್ಲಿ ಎನ್ಜಿಓಗಳಿಗೆ ಭೇಟಿ ನೀಡಿ ಅರ್ಥಪೂರ್ಣ ರೀತಿಯಲ್ಲಿ ಹಬ್ಬವನ್ನು ಆಚರಿಸುವ ಸಮಂತಾ, ಈ ಬಾರಿ ದೀಪಾವಳಿಯನ್ನು ಅನಾಥಾಶ್ರಮದ ಮಕ್ಕಳ ಜೊತೆ ಸಂಭ್ರಮದಿಂದ ಆಚರಿಸಿದ್ದಾರೆ.
ಸಾಧಾರಣ ಧೋರಣೆಯಲ್ಲಿ ದೀಪ ಹಚ್ಚಿದ ಸಮಂತಾ, ಮಕ್ಕಳೊಂದಿಗೆ ಸಮಯ ಕಳೆಯುವ ಮೂಲಕ ಅವರ ಮುಖದಲ್ಲಿ ನಗುವನ್ನು ತಂದರು. ಮಕ್ಕಳಿಗೆ ದೀಪಾವಳಿ ಉಡುಗೊರೆಗಳನ್ನು ನೀಡಿದ ಸಮಂತಾ, ಅವರಿಗೆ ಈ ಹಬ್ಬದ ಖುಷಿಯ ಅನುಭವವನ್ನು ನೀಡಿದರು. ಸಾಧಾರಣ ಬಟ್ಟೆಗಳಲ್ಲಿ, ಒಳ್ಳೆಯ ಮನಸ್ಸಿನಿಂದ, ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ಗಮನಸೆಳೆಯುವ ಸಂಗತಿಯಾಗಿದೆ.
ಇದನ್ನು ಓದಿ : ಕರ್ನಾಟಕದಾದ್ಯಂತ 26 ಸಾವಿರ ಶಿಕ್ಷಕರ ನೇಮಕಾತಿಗೆ ಸರ್ಕಾರ ನಿರ್ಧಾರ

ಸ್ಪೂರ್ತಿ ಫೌಂಡೇಶನ್, ಹ್ಯಾಪಿ ಹೋಮ್ಸ್ ಹಾಗೂ ಡಿಸೈರ್ ಸೊಸೈಟಿ ಎಂಬ ಎನ್ಜಿಓಗಳ ಸಹಯೋಗದಲ್ಲಿ ಈ ದೀಪಾವಳಿ ಸಂಭ್ರಮವನ್ನು ಆಯೋಜಿಸಲಾಗಿತ್ತು. ಪ್ರತಿ ವರ್ಷ ಹಬ್ಬದ ಸಮಯದಲ್ಲಿ ಈ ಸಂಸ್ಥೆಗಳ ಮಕ್ಕಳೊಂದಿಗೆ ದೀಪಾವಳಿ ಆಚರಿಸುವ ಸಮಂತಾ, ಈ ವರ್ಷವೂ ತಮ್ಮ ಪರಂಪರೆಯನ್ನು ಮುಂದುವರೆಸಿದ್ದಾರೆ.
ವಿಚ್ಛೇದನದ ನಂತರ ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದ ಸಮಂತಾ, ಇದೀಗ ತನ್ನ ಜೀವನವನ್ನು ಹೊಸದುರೆಯಲ್ಲಿ ಸಾಗಿಸುತ್ತಿದ್ದಾರೆ. ತಂದೆಯನ್ನು ಕಳೆದುಕೊಂಡ ದುಃಖ, ಹಾಗೂ ಅನಾರೋಗ್ಯದ ವಿರುದ್ಧದ ಹೋರಾಟ ಇವರನ್ನ ಮತ್ತಷ್ಟು ಬಲಿಷ್ಠ ವ್ಯಕ್ತಿಯಾಗಿ ರೂಪಿಸಿದೆ.
ಹಬ್ಬದ ಸಮಯದಲ್ಲಿ ನಿರ್ಗತಿಕ ಮಕ್ಕಳೊಂದಿಗೆ ಸಂತೋಷ ಹಂಚಿಕೊಂಡ ಸಮಂತಾ, ಸಮಾಜಕ್ಕೆ ನಿಜವಾದ ರೋಲ್ ಮಾಡೆಲ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಇದನ್ನು ನೋಡಿ : ಮಕ್ಕಳ ಜೊತೆ ದೀಪಾವಳಿ ಆಚರಿಸಿದ ನಟಿ ಸಮಂತಾ





