Recruitment : ಸರ್ಕಾರಿ ಶಾಲೆಗಳಿಗೆ ಸೇರಬೇಕೆಂದು ಕಾದು ಕುಳಿತ ಶಿಕ್ಷಕರಿಗೆ ಸರ್ಕಾರದಿಂದ ಸಿಹಿ ಸುದ್ದಿ ಬಂದಿದೆ.

ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸಲು ಕಾದು ಕುಳಿತಿರುವ ಸಾವಿರಾರು ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಬಹು ನಿರೀಕ್ಷಿತ ಸಿಹಿ ಸುದ್ದಿ ಬಂದಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಇಂದು ಘೋಷಣೆ ಮಾಡಿ, ರಾಜ್ಯದಾದ್ಯಂತ 26,000 ಶಿಕ್ಷಕರ ನೇಮಕಾತಿಗೆ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.
Recruitment : ಅರ್ಜಿ ಸಲ್ಲಿಕೆ – ಅ.23 ರಿಂದ ನ.9ರವರೆಗೆ
ಈ ನೇಮಕಾತಿಗೆ ಸಂಬಂಧಪಟ್ಟ ಅಧಿಸೂಚನೆ ಈಗಾಗಲೇ ಹೊರಡಿಸಲಾಗಿದ್ದು, ಅಕ್ಟೋಬರ್ 23ರಿಂದ ನವೆಂಬರ್ 9ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ನೇಮಕಾತಿಯಡಿ ಡಿಸೆಂಬರ್ 7ರಂದು ಟಿಇಟಿ (TET) ಪರೀಕ್ಷೆ ನಡೆಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಅನುದಾನಿತ ಶಾಲೆಗಳಿಗೆ ಆದೇಶ ಶೀಘ್ರದಲ್ಲೇ
ಅದೇ ರೀತಿ ರಾಜ್ಯದ ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕಾತಿಗೂ ಸರ್ಕಾರ ಶೀಘ್ರದಲ್ಲೇ ಆದೇಶ ಹೊರಡಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ : ಆಸ್ಟ್ರೇಲಿಯಾ ಎದುರು ಶೂನ್ಯ ಸುತ್ತಿ ಕೆಟ್ಟ ದಾಖಲೆ ಬರೆದ ಕೊಹ್ಲಿ

ಕೆಪಿಎಸ್ ಶಾಲೆಗಳಿಗೆ ಬೃಹತ್ ಯೋಜನೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ 800 ಕರ್ನಾಟಕ ಪಬ್ಲಿಕ್ ಸ್ಕೂಲ್ (KPS) ಆರಂಭಗೊಳ್ಳಲಿವೆ ಎಂದು ಹೇಳಿದರು. ಈ ಶಾಲೆಗಳಲ್ಲಿ ಆರನೇ ತರಗತಿಯಿಂದ ಕನ್ನಡದ ಜೊತೆಗೆ ಇಂಗ್ಲಿಷ್ ಕಲಿಕೆ, ಮತ್ತು ಮೊದಲನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡಲಾಗುವುದು.
ಸ್ಕಿಲ್ ಸ್ಕೂಲ್ ಹಾಗೂ ಎಐ ಶಿಕ್ಷಣ
ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, ಆರನೇ ತರಗತಿಯಿಂದಲೇ ‘ಸ್ಕಿಲ್ ಸ್ಕೂಲ್‘ ಪ್ರಾರಂಭ ಮಾಡಲು ಸರ್ಕಾರ ಯೋಜನೆ ರೂಪಿಸಿದ್ದು, ಬುದ್ಧಿವಂತಿಕೆ ಆಧಾರಿತ (AI-based) ಶಿಕ್ಷಣಕ್ಕೆ ಬೆಂಬಲ ನೀಡಲಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸೂಚನೆ ನೀಡಿದ್ದಾರೆ ಎಂದು ಸಚಿವರು ಹೇಳಿದರು.
₹3,000 ಕೋಟಿ ರೂ. ಮೀಸಲಾತಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಗೆ ಸರ್ಕಾರ 3,000 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದು, ನವೆಂಬರ್ ಎರಡನೇ ವಾರದಲ್ಲಿ ಮುಖ್ಯಮಂತ್ರಿ ಅವರಿಂದ ಗುದ್ದಲಿ ಪೂಜೆ ನೆರವೇರಲಿದೆ.





