
PAVAGADA : ನಕ್ಸಲ್ ಕ್ರಾಂತಿ ಅಂತಾ ಹೆಸರುವಾಸಿಯಾಗಿರೋ ಪಾವಗಡ ತಾಲೂಕಿನಲ್ಲಿ ಏಷ್ಯಾ ಖಂಡದಲ್ಲೇ ಅತಿದೊಡ್ಡ ಸೋಲಾರ್ ಪಾರ್ಕ್ ತಲೆ ಎತ್ತಿದೆ. ಗಡಿ ತಾಲೂಕು, ಬರದ ನಾಡು ಅಂತಾ ಹೆಸರುವಾಸಿಯಾಗಿರೋ ಪಾವಗಡದಲ್ಲಿ ನಿರ್ಮಾಣವಾದ ಸೋಲಾರ್ ಪಾರ್ಕ್ನಿಂದ ಆ ಭಾಗದ ಯುವಕರಿಗೆ ಕೆಲಸ ಸಿಗುತ್ತೆ, ಬಡವರ ಜೀವನಕ್ಕೆ ದಾರಿ ಆಗುತ್ತೆ ಎಂಬ ಆಶೋತ್ತರ ಇತ್ತು. ಆದರೆ ಸೋಲಾರ್ ಘಟಕದ ಕಾರ್ಮಿಕರು ಜೀತ ಪದ್ಧತಿ ರೀತಿ ಕೆಲಸ ದುಡಿಸಿಕೊಳ್ಳುತ್ತಿರೋದು ಬೆಳಕಿಗೆ ಬಂದಿದೆ. ಅಲ್ಲದೇ ಸಾವಿರಾರು ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರೋ ಸೋಲಾರ್ ಪಾರ್ಕ್ನಲ್ಲಿ ಕಾರ್ಮಿಕರಿಗೆ ಕನಿಷ್ಠ ಮೂಲ ಸೌಕರ್ಯ ನೀಡದೇ ಇರೋದು ಈಗ ಚರ್ಚೆಗೆ ಗ್ರಾಸವಾಗಿದೆ.
ಇನ್ನು ಪಾವಗಡದಲ್ಲಿ ನಿರ್ಮಾಣ ಆಗಿರೋ ಸೋಲಾರ್ ಘಟಕದಲ್ಲಿ ದುಡಿಯಿತ್ತಿರೋ ಕಾರ್ಮಿಕರಿಗೆ ಮೂಲಭೂತ ಸೌಕರ್ಯವೇ ಕೊಡ್ತಾ ಇಲ್ವಂತೆ. ಅಲ್ಲದೇ ಸೋಲಾರ್ ಘಟಕ ನಿರ್ಮಾಣ ಮಾಡುವ ವೇಳೆ ಸೋಲಾರ್ ಘಟಕಕ್ಕೆ ಜಮೀನು ಕೊಟ್ಟ ರೈತರ ಮಕ್ಕಳಿಗೆ ಸೋಲಾರ್ ಘಟಕದಲ್ಲಿ ಕೆಲಸ ಕೊಡ್ತೀವಿ ಅಂತಾ ಹೇಳಿದ್ದರು, ಆದರೆ ಸೋಲಾರ್ ಪಾರ್ಕ್ ಕೊಡುವ ರೈತರಿಗೆ ಸೋಲಾರ್ ಕಂಪನಿ ಮೋಸ ಮಾಡಿದೆಯಂತೆ. ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಒದಗಿಸ್ತಾ ಇಲ್ವಂತೆ. ಇನ್ನು ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಒದಗಿಸುತ್ತಿಲ್ಲದಿರುವ ಬಗ್ಗೆ ಅಧಿಕಾರಿಗಳೇ ಮಾಹಿತಿ ಇಲ್ವಂತೆ. ಹೀಗಾಗಿ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.
ಇನ್ನು ಸೋಲಾರ್ ಘಟಕದಲ್ಲಿ ಇಂಜಿನಿಯರ್ ಮಹೇಶ್ ಹಲವು ದಿನಗಳಿಂದ ಕೆಲಸ ಮಾಡ್ತಾ ಇದ್ದು, ಕಾರ್ಮಿಕರಿಗೆ ಸಾಕಷ್ಟು ತೊಂದ್ರೆ ಕೊಡ್ತಾ ಇದ್ದಾರೆ. ಹೀಗಾಗಿ ಇಂಜಿನಿಯರ್ ಮಹೇಶ್ ಅವರನ್ನು ಕೂಡಲೇ ಬದಲಾವಣೆ ಮಾಡಿ ಎಂದು ಕಾರ್ಮಿಕರು ಅಳಲನ್ನು ತೋಡಿಕೊಂಡರು.
ಇನ್ನು ಸೋಲಾರ್ ಪಾರ್ಕ್ನಲ್ಲಿ ಕೆಲಸ ಮಾಡ್ತಾ ಇರೋ ಸೆಕ್ಯೂರಿಟಿ ಗಾರ್ಡ್ಗಳು ಸೋಲಾರ್ ಘಟಕದಲ್ಲಿ ಹುಲ್ಲು ಕೀಳುವ ಕೆಲಸ ಮಾಡಬೇಕಂತೆ. ಯಾರು ಹುಲ್ಲು ಕೀಳಲು ಬಯಸೋದಿಲ್ಲವೋ ಅಂತಹವರನ್ನು ಅಧಿಕಾರಿಗಳು ಟಾರ್ಗೆಟ್ ಮಾಡಿ ಅಧಿಕಾರಿಗಳು ಕಿರುಕುಳ ಕೊಡ್ತಾರಂತೆ.
ಪಾವಗಡದಲ್ಲಿ ಅತಿ ದೊಡ್ಡ ಸೋಲಾರ್ ಪಾರ್ಕ್ ಕಾಮಗಾರಿ ನಡೆಯುತ್ತಿರುವುದು ಸಂತೋಷದ ವಿಷಯ. ಆದರೆ ಜಮೀನು ಕೊಟ್ಟ ರೈತರ ಮಕ್ಕಳಿಗೆ ಕೆಲಸ ಕೊಡದ ಸಂಗತಿ ಆಗಿದೆ. ಅಲ್ಲದೇ ಕೆಲಸ ಮಾಡ್ತಾ ಇರೋ ಕಾರ್ಮಿಕರಿಗೆ ಮೂಲಭೂತ ಸೌಕರ್ಯ ಕೊಡಲು ವಿಫಲವಾಗಿದ್ದು, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.




