BBK 12 : ಬಿಗ್ ಬಾಸ್ ಕನ್ನಡ ಸೀಸನ್ 12 ಈಗಾಗಲೇ ಮೂರನೇ ವಾರದ ಅಂತ್ಯದಲ್ಲಿ ತೀವ್ರ ಟ್ವಿಸ್ಟ್ ಕಂಡಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಈಗಾಗಲೇ ಮೂರನೇ ವಾರದ ಅಂತ್ಯದಲ್ಲಿ ತೀವ್ರ ಟ್ವಿಸ್ಟ್ ಕಂಡಿದೆ. ‘ಫಸ್ಟ್ ಫಿನಾಲೆ’ ನಂತರ ಮನೆಗೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಪ್ರವೇಶಿಸಿದ್ದು, ಮನೆಯ ವಾತಾವರಣವನ್ನು ಸಂಪೂರ್ಣವಾಗಿ ತಿರುವುಮಾಡಿದಂತಾಗಿದೆ. ಈ ಮಧ್ಯೆ ಸ್ಪರ್ಧಿ ಮ್ಯೂಟಂಟ್ ರಘು (ರಘವೇಂದ್ರ ಹೊಂಡಡಕೆರಿ) ಅವರ ಎಂಟ್ರಿ ಮನೆಯಲ್ಲಿ ಪ್ರಬಲ ಪಲಾವಳಿ ಮೂಡಿಸಿದೆ.
ವೇಕ್-ಅಪ್ ಟೈಮ್ ಅಲ್ಲ, ಇದು ಬಿಗ್ ಬಾಸ್ ಮನೆ!
ಬೆಳಗ್ಗೆ ಮೈಕ್ ಹಿಡಿದು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ರಘು, “ಇದು ರೆಸಾರ್ಟ್ ಅಲ್ಲ, ನೀವು ಬಿಗ್ ಬಾಸ್ ಮನೆಗೆ ಬಂದಿದ್ದೀರಿ!” ಎಂದು ಘೋಷಣೆ ಮಾಡಿದರು. ತಕ್ಷಣವೇ ಬಿಗ್ ಬಾಸ್ ನೀಡಿದ ಟಾಸ್ಕ್ನಂತೆ, ಅವರು ಸ್ಪರ್ಧಿಗಳ ಕುರಿತ ತಮ್ಮ ಅಭಿಪ್ರಾಯಗಳನ್ನು ನಿರ್ಭೀತಿಯಿಂದ ಹಂಚಿಕೊಳ್ಳತೊಡಗಿದರು.
ಧ್ರುವ್ ಮತ್ತು ಕಾಕ್ರೋಚ್ ಸುಧಿಯನ್ನು ಖುರ್ಚಿಯಲ್ಲಿ ಕೂರಿಸಿ, ಅವರ ಮೇಲೆ ನೀರು ಚೆಲ್ಲಿ ಅವರ ಮೆಚ್ಚುಗೆಗೆ ವಿರುದ್ಧವಾದ ಸಂಕೇತ ನೀಡಿದರು. ಇದೇ ಸಂದರ್ಭದಲ್ಲಿ ಅಶ್ವಿನಿ ಗೌಡ ಅವರ ಹೆಸರನ್ನು ತೆಗೆದುಕೊಂಡು, ಅವರು ಮನೆಯೊಳಗಿನ ವರ್ತನೆಗೂ ಹೊರಗಿನ ವರ್ತನೆಗೂ ವ್ಯತ್ಯಾಸವಿದೆ ಎಂಬ ಗಂಭೀರ ಆರೋಪ ಮಾಡಿದರು.
ಇದನ್ನು ನೋಡಿ : ಮ್ಯೂಟಂಟ್ ರಘು ಜೊತೆ ಕಿತ್ತಾಡಲು ಬಂದ ಅಶ್ವಿನಿ-ಜಾನ್ವಿ: ಮೈಚಳಿ ಬಿಡಿಸಿದ ವೈಲ್ಡ್-ಕಾರ್ಡ್ ಸ್ಪರ್ಧಿ

ಅಶ್ವಿನಿ ವಿರುದ್ಧ ರಘು – ಮಾತಿನ ಸಂಘರ್ಷ ತೀವ್ರತೆಕೇರಿ!
ರಘು ಹೇಳಿದ ಮಾತು ಅಶ್ವಿನಿಗೆ ವಿಷವಾಗಿದ್ದು, ತಕ್ಷಣ ಪ್ರತಿಕ್ರಿಯಿಸಿದ ಅವರು, “ನಾವೇನು ಪಪ್ಪೆಟ್ಗಳಲ್ಲ, ನಿಮ್ಮ ಮಾತು ಕೇಳಬೇಕಾದ ಅವಶ್ಯಕತೆ ಇಲ್ಲ!” ಎಂದು ತಿರುಗಿ ಬಿದ್ದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ರಘು, “ನೀನು ಪಪ್ಪೆಟ್ ಮಾಡಿಕೊಂಡಿರುವದು ಇಲ್ಲಿ!” ಎಂದು ಉಗ್ರವಾಗಿ ಹೇಳಿದರು.
ಅಷ್ಟರಲ್ಲಿ, ರಘು ತಮ್ಮನ್ನು ‘ನೀನು’ ಎಂತೆಂದು ಏಕವಚನದಲ್ಲಿ ಮಾತನಾಡಿದ ಮೇಲೆ ಅಶ್ವಿನಿ, “ಏಕವಚನ ಬಳಸಬೇಡಿ!” ಎಂದರು. ಕೈ ತೋರಿಸುತ್ತಾ ಮಾತಾಡಿದ ಅಶ್ವಿನಿಗೆ, ರಘು, “ನನ್ನ ಹತ್ರ ಕೈ ತೋರಿಸಬೇಡಿ!” ಎಂದು ಪ್ರತಿರೋಧ ತೋರಿಸಿದರು. ಇನ್ನು ಈ ನಡುವೆಗೆ ಜಾನ್ವಿ ಬಂದು ಮಧ್ಯಸ್ಥಿಕೆ ವಹಿಸಿ, “ಏಕವಚನದ ಮಾತು ಎಲ್ಲರ ಮುಂದೆ ಕೇಳುತ್ತಾ ಹೋದರೆ, ಸರಿ ಇರಲ್ಲ!” ಎಂದು ಎಚ್ಚರಿಸಿದರು.
ಏಯ್.. ಏಯ್.. ಎಂದು ಅಶ್ವಿನಿ-ರಘು ನಡುವೆ ದೊಡ್ಡ ಜಗಳವೇ ನಡೆದು ಹೋಗಿದೆ. ಇದು ಯಾವ ಮಟ್ಟಕ್ಕೆ ತಲುಪಿದೆ ಎಂಬುದು ಇಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.

ಇದನ್ನು ಓದಿ : ಗಂಡು ಮಗುವಿಗೆ ಜನ್ಮ ನೀಡಿದ ಪರಿಣಿತಿ ಚೋಪ್ರಾ




