Parineeti Chopra : ನಟಿ ಪರಿಣಿತಿ ಚೋಪ್ರಾ, ಸಂಸದ ರಾಘವ್ ಚಡ್ಡಾ ದಂಪತಿ ಚೊಚ್ಚಲ ಮಗುವಿಗೆ ವೆಲ್ಕಮ್ ಹೇಳಿದೆ.

ನಟಿ ಪರಿಣಿತಿ ಚೋಪ್ರಾ, ಸಂಸದ ರಾಘವ್ ಚಡ್ಡಾ ದಂಪತಿ ಚೊಚ್ಚಲ ಮಗುವಿಗೆ ವೆಲ್ಕಮ್ ಹೇಳಿದೆ. ದೀಪಾವಳಿಗೆ ಒಂದು ದಿನ ಮೊದಲು, ಛೋಟಿ ದೀಪಾವಳಿಯಂದು ಪರಿಣಿತಿ ಚೋಪ್ರಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
“ನಮ್ಮ ತೋಳುಗಳು ತುಂಬಿವೆ, ನಮ್ಮ ಹೃದಯಗಳು ಇನ್ನೂ ತುಂಬಿವೆ…” ಎಂದು ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಸಂತಸವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
“ನಮ್ಮ ಪುಟ್ಟ ಅತಿಥಿ… ಮತ್ತು ನಾವು ನಿಜವಾಗಿಯೂ ಹಿಂದಿನ ಜೀವನ ಕಳೆದುಕೊಳ್ಳುವುದಿಲ್ಲ! ನಮ್ಮ ತೋಳುಗಳು ತುಂಬಿವೆ, ನಮ್ಮ ಹೃದಯಗಳು ಇನ್ನೂ ತುಂಬಿವೆ. ನಾವು ಒಬ್ಬರನ್ನೊಬ್ಬರು ಮಾತ್ರ ಹೊಂದಿದ್ದ ಮೊದಲು, ಈಗ ನಮಗೆ ಎಲ್ಲವೂ ಇದೆ. ಎಲ್ಲರಿಗೂ ಧನ್ಯವಾದಗಳು,” ಎಂದು ಪರಿಣಿತಿ ಮತ್ತು ರಾಘವ್ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ಇದನ್ನು ನೋಡಿ : ಹಾಸನಾಂಬೆ ದರ್ಶನ ಪಡೆದು ತೆರಳುತ್ತಿದ್ದ ವೇಳೆ ಅಪಘಾತ

ಆಗಸ್ಟ್ನಲ್ಲಿ ಗುಡ್ನ್ಯೂಸ್ ಘೋಷಣೆ
ಈ ದಂಪತಿ ಆಗಸ್ಟ್ 25, 2025 ರಂದು ತಮ್ಮ ಕುಟುಂಬಕ್ಕೆ ಹೊಸ ಅತಿಥಿಯ ನಿರೀಕ್ಷೆಯಲ್ಲಿದ್ದಾರೆಂಬ ಸುದ್ದಿ ಹಂಚಿಕೊಂಡಿದ್ದರು. “1 + 1 = 3” ಎಂಬ ಬರಹವಿದ್ದ ಹಳದಿ ಕೇಕ್ಫೋಟೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಅಭಿಮಾನಿಗಳಿಂದ ಶುಭಾಶಯಗಳನ್ನು ಪಡೆದುಕೊಂಡಿದ್ದರು.
ಎಂಗೇಜ್ಮೆಂಟ್ ಹಾಗೂ ಮದುವೆ
ಪರಿಣಿತಿ ಮತ್ತು ರಾಘವ್ ಜೋಡಿ ಮೇ 2023ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸೆಪ್ಟೆಂಬರ್ 2023ರಲ್ಲಿ ರಾಜಸ್ಥಾನದ ಉದಯಪುರದ ದಿ ಲೀಲಾ ಪ್ಯಾಲೇಸ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ವೈವಾಹಿಕ ಸಮಾರಂಭದಲ್ಲಿ ಕುಟುಂಬದ ಸದಸ್ಯರು ಮತ್ತು ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಅತಿಥಿಗಳು ಪಾಲ್ಗೊಂಡಿದ್ದರು.

ಇದನ್ನು ಓದಿ : ಚೊಚ್ಚಲ ಮಗುವಿಗೆ ವೆಲ್ಕಮ್ ಹೇಳಿದ ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ




