
SIRA NEWS : ಕ್ರೆಡಿಟ್ ತೆಗೆದುಕೊಳ್ಳೋದ್ರಲ್ಲಿ ಸಮುದಾಯದ ನಾಯಕರ ಜೊತೆಗೆ ದಿವಂಗತರ ಮಾಜಿ ಶಾಸಕರುಗಳ ಹೆಸರು ಅಡಳಿತದ ಅಂಗಳದಲ್ಲಿದೆ ನಾಮಕರಣ ಕಗ್ಗಂಟು! ಪ್ರತಿಯೊಂದು ನಡೆಯೂ ಜನರ ಮನಗೆಲ್ಲುವತ್ತಲೇ ಕೇಂದ್ರೀಕೃತವಾಗಿರುತ್ತೆ ತಾಲೂಕು ಅಡಳಿತ.
ಇತ್ತಿಚೆಗೆ ಶಿರಾ ನಗರದ ಖಾಸಗಿ ಬಸ್ ನಿಲ್ದಾಣ ನವೀಕೃತಗೊಂಡು ಉದ್ಘಾಟನೆಯ ಸಮಯದಲ್ಲಿ ಜಟಾ ಪಟಿ ಸಹ ನಡೆಯಿತು. ನಗರಸಭೆ ಸದಸ್ಯರಲ್ಲಿ ಸಹ ಎರಡು ಬಣಗಳಿವೆ, ಒಂದು ಬಣ ಖಾಸಗಿ ಬಸ್ ನಿಲ್ದಾಣ ಕ್ಕೆ ಮಾಜಿ ಶಾಸಕ ಪಿ.ಎಂ.ರಂಗನಾಥಪ್ಪ ಅವರ ಹೆಸರನ್ನು ಇಡುವಂತೆ ಹೇಳಿದ್ರೆ, ಮತ್ತೊಂದು ಬಣ ಶಿರಾ ನಗರ ನಿರ್ಮಾತೃ ಕಸ್ತೂರಿ ರಂಗಪ್ಪನ ನಾಯಕನ ಹೆಸರು ಇಡುವಂತೆ ವಾಲ್ಮೀಕಿ ಸಮುದಾಯದ ಮುಖಂಡ ರು ನಡುವೆ ವಾಗ್ವಾದ ನಡೆಯಿತು.
ಈ ನಡುವೆ ಜೆಡಿಎಸ್ ನಾಯಕರು ಸುದ್ದಿ ಗೋಷ್ಠಿಯಲ್ಲಿ ಮಾಜಿ ಶಾಸಕ ದಿವಂಗತ ಬಿ.ಸತ್ಯನಾರಾಯಣ ಶಿರಾ ಅಭಿವೃದ್ಧಿಯ ಪ್ರಮುಖ ಪ್ರಮುಖರು. ಅವರ ಹೆಸರು ಇಡುವಂತೆ ಹೇಳಿದರು. ಕುಂಚಿಟಿಗರ ಸಂಘ ದವರು ಮಾಜಿ ಶಾಸಕ ಪಿ.ಎಂ.ರಂಗನಾಥಪ್ಪ ಅವರ ಹೆಸರನ್ನು ಇಡುವಂತೆ ಚರ್ಚೆ ನಡೆಯುತ್ತಿದೆ.
ಶಿರಾ ಮಾಜಿ ಹಿರಿಯ ಶಾಸಕ ಸಾ.ಲಿಂಗಯ್ಯ ಅವರು ಮಾತನಾಡಿ, ಕಸ್ತೂರಿ ರಂಗಪ್ಪ ನಾಯಕನ ಹೆಸರನ್ನು ಇಡಬೇಕು. 17 ನೇ ಶತಮಾನದ ಆರಂಭದಲ್ಲಿ ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಪಾಳ್ಯಾಗಾರ್ ಆಗಿ ಶಿರಾವನ್ನು ಆಳಿದ್ದರು. ಅವರ ಆಳ್ವಿಕೆಯ ಕೋಟೆಯನ್ನು ರಾಜಾ ಕಸ್ತೂರಿ ರಂಗಪ್ಪ ನಾಯಕನ ನಿರ್ಮಿಸಿ ದರು. ಈ ಕಾರಣಕ್ಕೆ ಅವರಹೆಸರನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.
ಒಟ್ಟಾರೆ ಶಿರಾ ಬಸ್ ನಿಲ್ದಾಣ ವಿಚಾರದಲ್ಲಿ ಅಡಳಿತದ ಅಂಗಳದಲ್ಲಿದೆ. ನಾಮಕರಣ ಕಗ್ಗಂಟು ಅಗಿ ಉಳಿದಿದೆ. ಮುಂದಿನ ದಿನಗಳಲ್ಲಿ ಅಡಳಿತ ಯಾವ ರೀತಿ ಕ್ರಮವಾಗಿ ಅನುಸರಿಸುತ್ತದೆ ಕಾದು ನೋಡ ಬೇಕಿದೆ.





