
ಇಂದು ನಡೆಯುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ಜಾವೆಲಿನ್ ಫೈನಲ್ ಪಂದ್ಯದಲ್ಲಿ ಭಾರತದಿಂದ ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಮತ್ತು ಸಚಿನ್ ಯಾದವ್ ಪ್ರಶಸ್ತಿಗಾಗಿ ಕಣಕ್ಕಿಳಿಯುತ್ತಿದ್ದಾರೆ. ಒಟ್ಟು 12 ಮಂದಿ ಆಟಗಾರರು ಫೈನಲ್ಗೆ ಅರ್ಹತೆ ಪಡೆದಿದ್ದು, ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭವಾಗಲಿದೆ.
2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಮತ್ತು ಹಿಂದಿನ ಪ್ಯಾರಿಸ್ ಕೂಟದ ಚಾಂಪಿಯನ್ ಅರ್ಷದ್ನ ನಡುವಿನ ಪೈಪೋಟಿ ಸ್ಪರ್ಧೆಗೆ ಹೆಚ್ಚುವರಿ ಕೌತುಕವನ್ನೇ ನೀಡುತ್ತಿದೆ. ಫೈನಲ್ನಲ್ಲಿ ಪ್ರತಿಷ್ಠಿತ ಚಿನ್ನದ ಪದಕಕ್ಕಾಗಿ ತೀವ್ರ ಹೋರಾಟ ನಿರೀಕ್ಷಿಸಲಾಗಿದೆ.
ಫೈನಲ್ಗೆ ಅರ್ಹತೆ ಪಡೆದವರ ಪೈಕಿ ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್ (89.53 ಮೀ) ಅತ್ಯುತ್ತಮ ಥ್ರೋ ಮಾಡಿದ್ದು, ಜರ್ಮನಿಯ ಜೂಲಿಯನ್ ವೆಬರ್ (87.21 ಮೀ) ಮತ್ತು ಕೆನ್ಯದ ಜೂಲಿಯಸ್ ಯೆಗೊ (85.96 ಮೀ) ಅವರಲ್ಲೂ ಭರ್ಜರಿ ಪ್ರದರ್ಶನ ನೀಡಿದ್ದರು. ಹೀಗಾಗಿ ನೀರಜ್ ಮತ್ತು ಇತರ ಭಾರತೀಯರಿಗಾಗಿ ಈ ಪಂದ್ಯ ಕಠಿಣ ಸವಾಲಾಗಿ ಪರಿಣಮಿಸಬಹುದು.




