
2025ರ ವಿಶ್ವ ಅಥ್ಲೆಟಿಕ್ಸ್ ಫೈನಲ್ನಲ್ಲಿ ಭಾರತದ ಅಭಿಮಾನಿಗಳಿಗೆ ನಿರಾಸೆ ಮೂಡಿದೆ, ಜಾವೆಲಿನ್ ಎಸೆತದಲ್ಲಿ ಭಾರತೀಯ ಆಟಗಾರರು ನಿರಾಸೆ ಮೂಡಿಸಿದ್ದಾರೆ. ಭಾರತದ ಸ್ಟಾರ್ ಎಸೆತಗಾರ ನೀರಜ್ ಚೋಪ್ರಾ ಮತ್ತು ಸಚಿನ್ ಯಾದವ್ ಅವರು ಅಂತಿಮದಲ್ಲಿ ಉತ್ತಮ ಪ್ರದರ್ಶನ ಕೊಟ್ಟರೂ ಪದಕ ಗೆಲ್ಲಲಾಗಿಲ್ಲ.
ಇತ್ತೀಚೆಗೆ ಉತ್ತಮ ಪ್ರದರ್ಶನಗಳಿಂದ ಗಮನಸೆಳೆದಿದ್ದ ಸಚಿನ್, ಫೈನಲ್ನಲ್ಲಿ 4ನೇ ಸ್ಥಾನ ಪಡೆದಿದ್ದು, ಪದಕದ ಸನ್ನಿಹಿತದಲ್ಲಿ ನಿಂತು ಸೋತರು. ಇನ್ನು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದಿದ್ದ ನೀರಜ್, ಈ ಬಾರಿ 8ನೇ ಸ್ಥಾನ ಪಡೆದಿದ್ದು ನಿರಾಶೆ ಮೂಡಿಸಿದೆ. ಪಾಕಿಸ್ತಾನದ ಒಲಿಂಪಿಕ್ ಚಾಂಪಿಯನ್ ಅರ್ಷದ್ ನದೀಮ್ ಕೂಡ ಈ ಬಾರಿ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಲಾಗಿಲ್ಲ. ಅವರು 10ನೇ ಸ್ಥಾನ ಪಡೆದು ಸ್ಪರ್ಧೆಯಿಂದ ಹೊರಬಂದಿದ್ದಾರೆ.
ಫೈನಲ್ನಲ್ಲಿ ಟ್ರಿನಿಡಾಡ್ನ ಕೆಶೋರ್ನ್ ವಾಲ್ಕಾಟ್ ಚಿನ್ನದ ಪದಕ ಗೆದ್ದರು. 19ನೇ ವಯಸ್ಸಿನಲ್ಲಿ ಒಲಿಂಪಿಕ್ ಚಿನ್ನ ಗೆದ್ದಿದ್ದ ಕೆಶೋರ್ನ್, 13 ವರ್ಷಗಳ ನಂತರವೂ ತಮ್ಮ ಸಾಮರ್ಥ್ಯ ಕುಗ್ಗಿಲ್ಲ ಎಂಬುದನ್ನು ತೋರಿಸಿದ್ದಾರೆ.




