Tumakuru : ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಒಲಂಪಿಕ್ಸ್ ಕ್ರೀಡಾಕೂಟವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು.

Tumakuru : ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಒಲಂಪಿಕ್ಸ್ ಕ್ರೀಡಾಕೂಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಕ್ರೀಡೆ ಜೀವನಕ್ಕೆ ಅತ್ಯಂತ ಅವಶ್ಯಕವಾಗಿದ್ದು, ವಿದ್ಯಾರ್ಥಿ ಜೀವನದಲ್ಲಿ ಓದಿನ ಜೊತೆಗೆ ಕ್ರೀಡೆಯನ್ನೂ ಅಳವಡಿಸಿಕೊಳ್ಳಬೇಕು. ಕ್ರೀಡೆಯಿಂದ ಶಿಸ್ತು, ಸಮಯಪ್ರಜ್ಞೆ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.
ತುಮಕೂರಿನಲ್ಲಿ ಈ ಬಾರಿ ಕ್ರೀಡಾಕೂಟ ಆಯೋಜನೆಯಾಗಿರೋದು ಸಂತೋಷದ ವಿಚಾರ. ಕ್ರೀಡಾಕೂಟ ಹಮ್ಮಿಕೊಂಡಿರುವುದಕ್ಕೆ ಪರಮೇಶ್ವರ್ ಅವರಿಗೆ ಧನ್ಯವಾದ. ಪರಮೇಶ್ವರ್ ಕೂಡ ಒಬ್ಬ ಕ್ರೀಡಾಪಟುವಾಗಿದ್ದು, ತಾವು ಕೂಡ ಸಣ್ಣ ಮಟ್ಟದ ಕ್ರೀಡಾಪಟು ಎಂದು ಸಿದ್ದರಾಮಯ್ಯ ಹೇಳಿದರು.
ನಾನು ವಿದ್ಯಾರ್ಥಿಯಾಗಿದ್ದಾಗ ಕಬಡ್ಡಿಯಲ್ಲಿ ಭಾಗವಹಿಸಿದ್ದೆ, ಟಿ20 ಹಾಗೂ ಫುಟ್ಬಾಲ್ ಪಂದ್ಯಗಳನ್ನು ಯಾವಾಗಲೂ ವೀಕ್ಷಿಸುತ್ತೇನೆ. ರಾತ್ರಿ ಸಮಯದಲ್ಲಿ ನೋಡುವುದರಿಂದ ರಾಜಕೀಯಕ್ಕೆ ತೊಂದರೆ ಆಗುವುದಿಲ್ಲ ಎಂದು ಹಾಸ್ಯವಾಗಿ ಹೇಳಿದರು.
ಪ್ರತಿಯೊಬ್ಬ ಕ್ರೀಡಾಪಟು ಶ್ರಮ ಮತ್ತು ಗುರಿ ಇಟ್ಟುಕೊಂಡರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ. ಕ್ರೀಡೆಯಲ್ಲಿ ಗೆಲುವು-ಸೋಲು ಮುಖ್ಯವಲ್ಲ, ಸೋಲಿನಲ್ಲೂ ನಗು ಕಾಣುವವನೇ ನಿಜವಾದ ಕ್ರೀಡಾಪಟು ಎಂದರು.
ಕ್ರೀಡೆಯಲ್ಲಿಯಲ್ಲಿರುವವರಿಗೆ ನಿರುದ್ಯೋಗದ ಭಯ ಬೇಡ. ನಮ್ಮ ಸರ್ಕಾರ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಬೆಂಬಲ ನೀಡಲಿದೆ. ಪೊಲೀಸ್ ಇಲಾಖೆಯಲ್ಲಿ ಕ್ರೀಡಾಪಟುಗಳಿಗೆ 3 ಶೇಕಡಾ ಮೀಸಲಾತಿ, ಒಲಂಪಿಕ್ಸ್ ಕ್ರೀಡಾಪಟುಗಳಿಗೆ ನೇರ ನೇಮಕಾತಿ ಸಿಗಲಿದೆ.

ಒಲಂಪಿಕ್ಸ್ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ಚಿನ್ನದ ಪದಕಕ್ಕೆ 6 ಕೋಟಿ, ಬೆಳ್ಳಿಗೆ 4 ಕೋಟಿ ಹಾಗೂ ಕಂಚಿನ ಪದಕಕ್ಕೆ 3 ಕೋಟಿ ರೂಪಾಯಿ ನೀಡಲಾಗುತ್ತದೆ. ಎಲ್ಲರೂ ಒಲಂಪಿಕ್ಸ್ ಗುರಿ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.
ರಾಜ್ಯದ ಭವಿಷ್ಯ ಕ್ರೀಡಾಪಟುಗಳ ಕೈಯಲ್ಲಿದೆ. ಗೆಲುವು ಕ್ಷಣಿಕವಾದದ್ದು, ಭಾಗವಹಿಸುವಿಕೆಯೇ ಶಾಶ್ವತ. ಆದರೆ ಗೆಲುವಿನ ಗುರಿಯನ್ನು ನಿರಂತರವಾಗಿ ಹೊಂದಿರಬೇಕು ಎಂದು ಸಿಎಂ ಹೇಳಿದರು.
ಇದನ್ನೂ ಓದಿ : ತುಮಕೂರಿಗೆ CM ಸಿದ್ದರಾಮಯ್ಯ ಎಂಟ್ರಿ.! KN ರಾಜಣ್ಣ ನಿವಾಸದಲ್ಲಿ ಸಿದ್ದು.!
ತುಮಕೂರಿನಲ್ಲಿ ಹಾಕಿ ಮೈದಾನ, ಅಂತಾರಾಷ್ಟ್ರೀಯ ಮಟ್ಟದ ಸ್ವಿಮಿಂಗ್ ಪೂಲ್ ಸೇರಿದಂತೆ ಕ್ರೀಡಾ ಮೂಲಸೌಕರ್ಯಕ್ಕೆ 25 ಕೋಟಿ ನೀಡಲಾಗ್ತಿದೆ. ಮಂಗಳೂರು ಮತ್ತು ಉಡುಪಿಯಲ್ಲಿ ನೀಡಿರುವ ಅನುದಾನದಷ್ಟೇ ತುಮಕೂರಿಗೂ ನೀಡಲಾಗುತ್ತದೆ

ತುಮಕೂರು ಜಿಲ್ಲೆಯಿಂದ ಹೆಚ್ಚು ಹೆಚ್ಚು ಪ್ರತಿಭಾವಂತ ಕ್ರೀಡಾಪಟುಗಳು ಹೊರಬಂದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರಲಿ ಎಂದು ಸಿಎಂ ಸಿದ್ದರಾಮಯ್ಯ ಆಶಿಸಿದರು.
MUST WATCH : RAJANNAಗೆ ಮತ್ತೆ ಮಂತ್ರಿಗಿರಿ ಸಿಗುತ್ತಾ..? – CM SIDDU ಮಾತಿನ ಮರ್ಮವೇನು..?




