Kannada KBC News : ‘ಕಾಂತಾರ’ ಖ್ಯಾತಿಯ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ಹಿಂದಿಯ ಜನಪ್ರಿಯ ಟಿವಿ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್ಪತಿ’ (KBC) ನಲ್ಲಿ 12.5 ಲಕ್ಷ ರೂಪಾಯಿ ಗೆದ್ದಿದ್ದಾರೆ

KBC ವೇದಿಕೆಯಲ್ಲಿ ರಿಷಬ್ ಶೆಟ್ಟಿ ಗೆಲುವು
ರಿಷಬ್ ಶೆಟ್ಟಿ ಅವರು ಈ ವಾರದ KBC ವಿಶೇಷ ಎಪಿಸೋಡ್ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಕ ಅಮಿತಾಭ್ ಬಚ್ಚನ್ ಎದುರು ಅವರು ಆತ್ಮವಿಶ್ವಾಸದಿಂದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿ 12.5 ಲಕ್ಷ ರೂಪಾಯಿ ಗೆದ್ದರು. ಆಟದ ಮಧ್ಯದಲ್ಲೇ ರಿಷಬ್ ಅವರು ಹಣವನ್ನು ಹೇಗೆ ಬಳಸುವರು ಎಂಬುದನ್ನು ಹಂಚಿಕೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.
ದೈವಾರಾಧಕರ ಮತ್ತು ಸರ್ಕಾರಿ ಶಾಲೆಗಳ ಏಳ್ಗೆಗೆ — ರಿಷಬ್ ಶೆಟ್ಟಿ
ರಿಷಬ್ ಹೇಳಿದರು, “ನಾನು ‘ರಿಷಬ್ ಫೌಂಡೇಶನ್’ ಮೂಲಕ ದೈವಾರಾಧಕರು ಹಾಗೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಕೆಲಸ ಮಾಡುತ್ತಿದ್ದೇನೆ.
ಈ ಹಣವನ್ನು ಅವರ ಏಳ್ಗೆಗೆ ಬಳಸುತ್ತೇನೆ,” ಎಂದು ಅಮಿತಾಭ್ ಬಚ್ಚನ್ ಎದುರು ಘೋಷಿಸಿದರು.
ಅಮಿತಾಭ್ ಅವರು ರಿಷಬ್ ಅವರ ಈ ಸಾಮಾಜಿಕ ನಿಲುವನ್ನು ಶ್ಲಾಘಿಸಿ, “ಇದು ನಿಜವಾದ ಸೇವಾ ಮನೋಭಾವ,” ಎಂದು ಪ್ರಶಂಸಿಸಿದರು.
MUST WATCH : ARVIND SCHOOL | ಪ್ರತಿಷ್ಠಿತ ಶಾಲೆಯಲ್ಲಿ ಘೋರ ದುರಂತ- ಮಕ್ಕಳ ಪ್ರಾಣ ಏನಾದ್ರು ಆಗ್ಲಿ, ದುಡ್ಡು ಮಾತ್ರ ಬೇಕು?
‘ಕಾಂತಾರ’ ಯಶಸ್ಸಿನ ನಂತರ ಸಾಮಾಜಿಕ ಬದ್ಧತೆ
‘ಕಾಂತಾರ’ ಮತ್ತು ‘ಕಾಂತಾರ ಚಾಪ್ಟರ್ 1’ ಚಿತ್ರಗಳ ಮೂಲಕ ರಿಷಬ್ ಶೆಟ್ಟಿ ಭಾರೀ ಯಶಸ್ಸು ಕಂಡಿದ್ದರು. ಆ ಚಿತ್ರಗಳಲ್ಲಿ ದೈವಾರಾಧನೆ ಮತ್ತು ಸಂಸ್ಕೃತಿಯ ಮಹತ್ವವನ್ನು ತೋರಿಸಲು ಅವರು ಸಾಕಷ್ಟು ಅಧ್ಯಯನ ಮತ್ತು ಸಿದ್ಧತೆ ಮಾಡಿದ್ದರು.ಚಿತ್ರದ ಬಳಿಕವೂ ಅವರು ದೈವಾರಾಧಕರ ಹಕ್ಕು ಮತ್ತು ಗೌರವಕ್ಕಾಗಿ ಕೆಲಸ ಮುಂದುವರೆಸಿದ್ದು, ಅವರ ಈ ಘೋಷಣೆ ಅದಕ್ಕೆ ನಿಜವಾದ ದೃಷ್ಟಾಂತವಾಗಿದೆ.
ಅಭಿಮಾನಿಗಳಿಂದ ಮೆಚ್ಚುಗೆ
ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. “ರಿಷಬ್ ಶೆಟ್ಟಿ ನಿಜವಾದ ದೈವ ಭಕ್ತರು ಮತ್ತು ಸಮಾಜಮುಖಿ ಕಲಾವಿದರು” ಎಂದು ಕಾಮೆಂಟ್ಗಳು ಹರಿದು ಬರುತ್ತಿವೆ.
MUST WATCH : ILLEGAL TRANSPORT |PERMIT ಇಲ್ಲದ ಲಾರಿಯಲ್ಲಿ ಪಡಿತರ ಅಕ್ಕಿ ಸಾಗಾಟ- ದಂಧೆಕೋರರಿಗೆ ಚಳಿ ಬಿಡಿಸಿದ PRAJASHAKTHI TV




